Homeಕರ್ನಾಟಕಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

ಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

- Advertisement -
- Advertisement -

ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಬೆಂಕಿಕೆರೆ ಗ್ರಾಮದ ಈ ಬಾರಿಯ ಗೌರಿ ಗಣೇಶ ಹಬ್ಬ ಹಲವು ವಿಶೇಷತೆಗೆ ಕಾರಣವಾಗಿದೆ. ಮಹಿಳೆಯರು ಪೂಜೆ ಮಾಡಬಾರದು, ಗರ್ಭಗುಡಿ ಪ್ರವೇಶ ಮಾಡಬಾರದು ಎಂಬ ಹಲವು ವಾದಗಳಿವೆ. ಮಹಿಳೆಯರ ಮುಟ್ಟನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಭಾರತದಂತಹ ದೇಶದಲ್ಲಿ ಮಹಿಳೆಯರು ದೇವಾಲಯದ ಪ್ರವೇಶ ಮಾಡುವುದನ್ನು ನಿಷೇಧಿಸಿರುವ, ಕೆಲ ಪ್ರಕರಣಗಳು ಸುಪ್ರೀಮ್ ಕೋರ್ಟ್ ಮೆಟ್ಟಿಲೂ ಏರಿರುವ ಸನ್ನಿವೇಶಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ.

ಮನುಷ್ಯ ನಿರ್ಮಿತ ಈ ಚೌಕಟ್ಟಗಳನ್ನು ತಿಳಿಯದ, ಅಸಮಾನತೆಯನ್ನು ಆಚರಣೆ ಮಾಡದ, ನಿಶ್ಕಲ್ಮಶ ಮುಗ್ದ ಮನಸ್ಸಿನ ಈ ಗ್ರಾಮದ ಪುಟಾಣಿ ಹೆಣ್ಣಮಕ್ಕಳು ಗ್ರಾಮದ ಮೂಲೆಯೊಂದರಲ್ಲಿ ಗೌರಿ ಗಣೇಶ ಕೂರಿಸಿದ್ದಾರೆ. ಗಂಡಸರೇ ಸೇರಿ ಪೆಂಡಾಲ್ ಕಟ್ಟಿ, ಕುಣಿದು ಕುಪ್ಪಳಿಸಿ ಹಬ್ಬ ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆ ಅಪವಾದದಂತೆ ಇಲ್ಲಿನ ಹುಡುಗೀಯರೇ ಸೇರಿ ಗ್ರಾಮದ ಮಟ್ಟಕ್ಕೆ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಡುಗುಡು ಅಂಕಲ್ ಖ್ಯಾತಿಯ ಮೊಹಮ್ಮದ್ ಅಣ್ಣನ ಗಣಪತಿ ಪ್ರೀತಿ

ರಾಜ್ಯದಲ್ಲೀಗ ಹಬ್ಬ-ಧರ್ಮದ ಹೆಸರಿನಲ್ಲಿ ರಾಜಕಾರಣ ಹೆಚ್ಚಾಗಿದೆ. ಗಲಭೆಗಳಲ್ಲಿ ಯುವಕರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಹೋದರ ಧರ್ಮೀಯರ ಮೇಲೆ ದ್ವೇಷ ಹರಡಿಸುತ್ತಿರುವ ಹೊತ್ತಲ್ಲಿ ಗಾರೆ ಕೆಲಸದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಅವರು ಬೆಂಕಿಕೆರೆಯಲ್ಲಿ ಈ ಮಕ್ಕಳ ಜೊತೆ ಸೇರಿ ಪ್ರೀತಿಯನ್ನು ಹಂಚುತ್ತಿದ್ದಾರೆ.ಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

 

ಮಕ್ಕಳ ಗಣಪತಿ ಪೆಂಡಾಲ್ ಅನ್ನು ಇವರೇ ಕಟ್ಟಿದ್ದು ಅಲ್ಲದೆ ಹಣ್ಣು ಸಿಹಿತಿನಿಸುಗಳನ್ನು ತಂದು ಕೊಟ್ಟಿದ್ದಾರೆ. ಗಣಪತಿಗೆ ಹಾರ ತರಲು ತಮ್ಮದೇ ಗಾಡಿಯಲ್ಲಿ 70 ಕಿ.ಮಿ. ದೂರದ ದಾವಣಗೆರೆಗೆ ಹೋಗಿ ಹೂವಿನ ಹಾರ ತಂದಿದ್ದಾರೆ. ಪೆಂಡಾಲ್ ಮತ್ತಷ್ಟು ಚೆನ್ನಾಗಿ ಕಾಣಲು ಲೈಟಿನ ಸರ, ಉಸ್ರುಬುಲ್ಡೆ (ಬಲೂನ್) ಗಳನ್ನು ಕಟ್ಟಿದ್ದಾರೆ. ಮಕ್ಕಳು ಪ್ರೀತಿಯಿಂದ ಭಾರತದ ಧ್ವಜವನ್ನೂ ಕಟ್ಟಿದ್ದಾರೆ.

ಇದನ್ನೂ ಓದಿ: ಏ.14 ರಂದು ಅಂಬೇಡ್ಕರ್ ಹಬ್ಬ: ದ್ವೇಷ, ಅಸೂಯೆ ಮೀರಿ ಶಾಂತಿ ಸಾಮರಸ್ಯದ ದೇಶ ಕಟ್ಟಲು ಕರೆ

ಮೊಹಮ್ಮದ್ ಅವರು ಭಕ್ತಿಯಿಂದ ಗಣಪತಿಗೆ ಕೈ ಮುಗಿಯುತ್ತಾರೆ, ಮಂಗಳಾರತಿ- ತೀರ್ಥ ಪಡೆಯುತ್ತಾರೆ. ಮಕ್ಕಳೆಲ್ಲಾ ಸಂಜೆಯ ಮೇಲೆ ಮನೆಗೆ ಹೋದಾಗ ಗಣಪತಿಯ ಮುಂದೆ ಹಚ್ಚಿಟ್ಟುರವ ದೀಪ ಆರದಂತೆ ನೋಡಿಕೊಳ್ಳಲು ಅವರೇ ಪೆಂಡಾಪ್ ಮುಂದೆ ಮಲಗುತ್ತಿದ್ದಾರೆ.

“ನಿನಿಗ್ಯಾಕಣ್ಣ ಇದೆಲ್ಲಾ, ಈ ಮಕ್ಳು ಸುಮ್ಮನೆ ನಿಮ್ ದುಡ್ಡೆಲ್ಲಾ ಖರ್ಚು ಮಾಡಿಸ್ತಾರೆ ನೋಡಿ” ಅಂತ ಗ್ರಾಮಸ್ತರು ಹೇಳಿದ ಮಾತಿಗೆ, “ಹಬ್ಬ ಏನ್ ದಿನಾ ಬರಲ್ಲ, ಮಕ್ಳು ಎಷ್ಟು ಖುಷಿ ಆಗಿದ್ದಾರೆ ನೋಡಿ. ಏನ್ ಮೂರ್ನಾಕ್ ಸಾವ್ರ ಖರ್ಚಾಗುತ್ತಾ? ಆಗ್ಲಿ ಬಿಡಿ” ಎಂದು ದಿನಕ್ಕೆ 500 ರೂ. ಕೂಲಿ ಪಡೆಯುವ ಮೊಹಮ್ಮದ್ ಅವರು ಉತ್ತರಿಸುತ್ತಾರೆ. ಅಲ್ಲದೇ ಈ ಹಿಂದೆಯೂ ಗಣಪತಿ ಹಬ್ಬಗಳಲ್ಲಿ ತಾವು ಭಾಗಿಯಾಗಿದ್ದ ಅನುಭವಗಳನ್ನು ಅಭಿಮಾನದಿಂದ ಹಂಚಿಕೊಳ್ಳುತ್ತಾರೆ.

ಗಣಪತಿ ಪೆಂಡಾಲ್ ನ ವಿಶೇಷತೆಗಳೇನು?

ಗ್ರಾಮದಲ್ಲಿ ಸುಮಾರು 8 ಸಮುದಾಯಗಳಿವೆ, ಎಲ್ಲರೂ ತಮ್ಮ ತಮ್ಮ ಸಮುದಾಯದ ಸ್ನೇಹಿತರು ಸೇರಿಕೊಂಡು ಗಣಪತಿ ಕೂರಿಸುತ್ತಾರೆ. ಆದರೆ ಈ ಹೆಣ್ಣುಮಕ್ಕಳ ಗಣಪತಿ ಪೆಂಡಾಲ್ ನಲ್ಲಿ ಬಹುತೇಕ ಎಲ್ಲಾ ಸಮುದಾಯದ ಮಕ್ಕಳು ಸೇರಿಕೊಂಡು ಆಚರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ದೇವರ ಮಂತ್ರಗಳು ತಿಳಿಯದ ಈ ಮಕ್ಕಳು ಕೈ ಮುಗಿದು ದೇಶಭಕ್ತಿ ಗೀತೆ ಮತ್ತು ನಾಡ ಗೀತೆಗಳನ್ನು ಹಾಡುತ್ತಾರೆ. ತಮ್ಮ ಟೀಚರ್ ಹೇಳಿಕೊಟ್ಟಿರುವ “ನಮ್ಮ ದೇಶವು ಪ್ರೀತಿಯ ಪ್ರತಿರೂಪವು” ಎನ್ನುವ ಹಾಡು ಗಮನ ಸೆಳೆಯುತ್ತಿದೆ. ಡಿಜೆ, ಡ್ರಮ್ ಸೆಟ್, ವಿಚಿತ್ರ ಚಿತ್ರಗೀತೆಗಳ ಯಾವ ಹಂಗು ಇಲ್ಲದೆ ತಮಗೆ ತಿಳಿದಷ್ಟು ಜಾನಪದ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾರೆ. ಬಂದವರಿಗೆ ಕಾರ ಮಂಡಿಕ್ಕಿ ಕೊಡುತ್ತಾರೆ.

ಒಟ್ಟಾರೆಯಾಗಿ ಗಲಭೆ, ದ್ವೇಷ ಅಸೂಯೆ, ಶ್ರೇಷ್ಠತೆ ಯಾವುದೂ ಇಲ್ಲದೆ ಪ್ರೀತಿ ಸೌಹಾರ್ದತೆ ಹಂಚುವ ಇಂತಹ ಪರಂಪರೆ ಮುಂದುವರೆಯಲಿ. ಮಕ್ಕಳ ಹಾಡಿನ ಸಾಲುಗಳು ಹೇಳುವ “ಈ ನಮ್ಮ ದೇಶವು, ಪ್ರೀತಿಯ ಪ್ರತಿ ರೂಪವು” ಎಲ್ಲರಿಗೂ ಆದರ್ಶವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...