Homeಕರ್ನಾಟಕಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠ ಬಳಿಯ ಮಳಲಿ ಪೇಟೆ ಎಂಬಲ್ಲಿ ಸುಮಾರು 900 ವರ್ಷಗಳಷ್ಟು ಇತಿಹಾಸವಿರುವ ಪ್ರಾಚೀನ ಮಸೀದಿಯ ನವೀಕರಣಕ್ಕಾಗಿ ಸಿದ್ದತೆ ನಡೆಸುತ್ತಿರುವಾಗ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಕಾರ್ಯತರ್ಕರು ಅದಕ್ಕೆ ಅಡ್ಡಿಪಡಿಸಿದ ಘಟನೆ ಗುರುವಾರ ನಡೆದಿದೆ. ಮಸೀದಿಯನ್ನು ಕೇರಳ ಮಾದರಿಯ ಇಂಡೋ-ಇಸ್ಲಾಮಿಕ್‌‌‌ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದ್ದು, ಆಕರ್ಷಕವಾಗಿ ಕಾಣುತ್ತದೆ. ಆದರೆ ಇದು ದೇವಸ್ಥಾನವಾಗಿತ್ತು ಎಂದು ಯಾವುದೇ ಆಧಾರವಿಲ್ಲದೆ ಆರೋಪಿಸಿರುವ ಬಜರಂಗದಳ, ಮಸೀದಿ ನವೀಕರಣವನ್ನು ತಡೆಹಿಡಿಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಈ ಮಧ್ಯೆ ಕನ್ನಡದ ಸುದ್ದಿ ಮಾಧ್ಯಮಗಳಾದ ಟಿವಿ9 ಕನ್ನಡ, ಉದಯವಾಣಿ, ನ್ಯೂಸ್‌18 ಕನ್ನಡ, ಏಷ್ಯಾನೆಟ್‌ ಸುವರ್ಣನ್ಯೂಸ್‌, ಪಬ್ಲಿಕ್ ಟಿವಿ, ಹೊಸ ದಿಗಂತ, ಒನ್‌ ಇಂಡಿಯಾ ಕನ್ನಡ ಮತ್ತು ಬಿಟಿವಿ ಸೇರಿದಂತೆ ಹಲವಾರು ಕನ್ನಡ ಮಾಧ್ಯಮಗಳು, “ದರ್ಗಾ ಕಟ್ಟಡ ಒಡೆದಾಗ ದೇವಸ್ಥಾನ ಪತ್ತೆಯಾಗಿದೆ” ಎಂದು ಬಜರಂಗದಳ ಹಬ್ಬಿಸಿರುವ ಸುಳ್ಳನ್ನೇ ವಾಸ್ತವ ಎಂಬಂತೆ ಸುದ್ದಿ ಮಾಡಿ ಕೋಮುದ್ವೇಷ ಹರಡಿವೆ. ಜೊತೆಗೆ ತಲತಲಾಂತರಗಳಿಂದಲೂ ನಮಾಜ್‌‌ ಸೇರಿದಂತೆ ಇಸ್ಲಾಮಿ ಆಚರಣೆ ಮಾಡುತ್ತಾ ಬರುತ್ತಿದ್ದ ಮಸೀದಿಯನ್ನು, “ಜೈನ ಬಸದಿ ಅಥವಾ ದೇವಸ್ಥಾನ” ಎಂದು ಪ್ರತಿಪಾದಿಸಿ ಜನರಲ್ಲಿ ಗೊಂದಲ ಮೂಡುವಂತೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸ್ಥಳೀಯರ ಪ್ರಕಾರ ಮಳಲಿ ಮಸೀದಿ ಸುಮಾರು 900 ನೂರು ವರ್ಷಗಳಷ್ಟು ಹಳೆಯದು. ಊರು ಬೆಳೆದಂತೆ ಈ ಮಸೀದಿಯಲ್ಲಿ ಜನರಿಗೆ ಜಾಗ ಸಾಕಾಗದ ಕಾರಣಕ್ಕೆ ಅದರ ಹೊರ ಭಾಗದಲ್ಲಿ ಕೂಡಾ ಮಸೀದಿಯನ್ನು ವಿಸ್ತರಿಸಲಾಗಿತ್ತು. ಇದೀಗ ಪ್ರಾಚೀನ ಮಸೀದಿಯ ರಚನೆಯನ್ನು ಹಾಗೆ ಬಿಟ್ಟು, ನಂತರ ವಿಸ್ತರಿಸಿರುವ ಕಟ್ಟಡವನ್ನು ಕೆಡವಿ ನವೀಕರಣಕ್ಕೆ ಊರಿನ ಜನರು ಸಿದ್ದತೆ ನಡೆಸಿದ್ದರು. ಈ ವೇಳೆ ಪ್ರಾಚೀನ ಮಸೀದಿಯ ಶೈಲಿಯ ಕಾರಣಕ್ಕೆ ಅದನ್ನು ವಿವಾದ ಮಾಡಲಾಗುತ್ತಿದೆ.

ಇದನ್ನೂ ಓದಿ: ದಹಿಸುತ್ತಿರುವ ಕೋಮು ವಿಷಮತೆಗೆ ಮಠಾಧೀಶರುಗಳ ತುಪ್ಪ..

ಕನ್ನಡ ಮಾಧ್ಯಮಗಳು ಸುದ್ದಿ ಹರಡಿರುವಂತೆ ಅದು ಹೊಸದಾಗಿ ಪತ್ತೆಯಾದ ಕಟ್ಟಡ ಅಲ್ಲ. ಜೊತೆಗೆ ಅದು ದರ್ಗಾವನ್ನು ಕಡೆವಿದಾಗ ಧುತ್ತನೆ ಪ್ರತ್ಯಕ್ಷವಾದ ಕಟ್ಟಡವೂ ಅಲ್ಲ. “ನಾವು ಅಲ್ಲಿಯೆ ತಲತಲಾಂತರದಿಂದ ನಮಾಜ್‌ ಮಾಡುತ್ತಲೇ ಬಂದಿದ್ದೇವೆ” ಎಂದು ಸ್ಥಳೀಯ ನಾಗರೀಕ ಝಾಕಿರ್‌ ನಾನುಗೌರಿ.ಕಾಂಗೆ ಹೇಳಿದರು.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಮಳಲಿ ಪೇಟಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್‌ ಮಾಮು ಅವರು,“ಕನ್ನಡ ಮಾಧ್ಯಮಗಳು ಸುಳ್ಳು ಹೇಳುತ್ತಿವೆ. ಇದು ಸುಮಾರು 900 ವರ್ಷಗಳಷ್ಟು ಹಳೆಯ ಮಸೀದಿಯಾಗಿದೆ. ಇದೇನೂ ಹೊಸದಾಗಿ ಏನೂ ಪತ್ತೆಯಾಗಿದ್ದಲ್ಲ, ನಾವು ತಲೆಮಾರುಗಳಿಂದಲೂ ಪ್ರಾರ್ಥನೆ ಮಾಡುತ್ತಲೆ ಬಂದಿರುವ ಮಸೀದಿಯಾಗಿದೆ. ಹೊರಗಿನ ಕಟ್ಟಡಗಳನ್ನು ಕೆಡವಿದಾಗ ಅದರ ಆಕರ್ಷಕ ಶೈಲಿಯ ರಚನೆಗಳು ಹೊರಗೆ ಕಂಡಿದೆ. ಈ ರೀತಿಯ ಮಸೀದಿಯನ್ನು ಕಂಡಿರದ ಹಾಗೂ ಈಗಾಗಲೆ ಬಿಜೆಪಿ ಹರಡಿರುವ ಸುಳ್ಳುಗಳಿಂದ ಪ್ರೇರೇಪಿತರಾಗಿರುವ ಮಾಧ್ಯಮಗಳು ಮಸೀದಿಯನ್ನು ದೇವಸ್ಥಾನ ಎಂದು ಯಾವುದೆ ಆಧಾರ ಇಲ್ಲದೆ ಪ್ರತಿಪಾದಿಸುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

“ಇದೇ ಮಾದರಿಯ ವಾಸ್ತುಶೈಲಿಯ ಪ್ರಾಚೀನ ಮಸೀದಿಗಳು ಕರಾವಳಿಯಲ್ಲಿ ಹಲವಾರು ಇದೆ. ಮಸೀದಿಯ ವಾಸ್ತು ಶೈಲಿ ಹಾಗೆ ಇದ್ದ ಕೂಡಲೇ ಅದು ದೇವಸ್ಥಾನಗಳು ಆಗುತ್ತದೆಯೆ?. ಈ ರೀತಿಯ ವಾಸ್ತುಶೈಲಿ ಮಸೀದಿಗೆ ಇರಬಾರದು ಎಂದರೆ ಯಾವ ನ್ಯಾಯ?. ಸುಳ್ಳು ಹರಡುತ್ತಿರುವ ಮಾಧ್ಯಮಗಳ ವಿರುದ್ಧ ದೂರು ನೀಡಲಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಸ್ಲಿಮರ ವಿರುದ್ಧ ಶತಮಾನದ ಕೋಮು ದಾಳಿಗಳು

ಮಳಲಿ ಮಸೀದಿಯ ವಾಸ್ತುಶೈಲಿಯನ್ನು ಅಭ್ಯಾಸ ಮಾಡಿದ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ, “ವಿಡಿಯೊದಲ್ಲಿ ಇರುವ ಮಸೀದಿಯು ದ್ರಾವಿಡ ಶೈಲಿಯ ಒಂದು ಪ್ರಬೇಧವಾದ ಕೇರಳ ವಾಸ್ತುವನ್ನು ಬಳಸಿಕೊಂಡಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾದ್ದರಿಂದ, ಇಳಿಜಾರಾದ ಮಾಡು ಬಹಳ ಅಗತ್ಯ.‌ ಮಾಡನ್ನು ಮುಳಿ ಹುಲ್ಲು ಅಥವಾ ಹಂಚು ಬಳಸಿ ಕಟ್ಟಲಾಗಿದೆ. ಒಳಗಿನ ಕಂಬವು ವಿಜಯನಗರ ಕಾಲದ್ದು.‌ ಹೀಗಾಗಿ ಇದು ಸುಮಾರು 15-16ನೇ ಶತಮಾನದ್ದೆಂದು ಹೇಳಬಹುದು. ಹಿಂದೂ ಮುಸ್ಲಿಂ ಮೈತ್ರಿಯನ್ನು ಸಾರುವ ಇಂಥ ಕಟ್ಟಡಗಳು ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ” ಎಂದು ಹೇಳಿದರು.

“ವಿಜಯನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಇಂಡೋ ಸಾರ್ಸೆನಿಕ್ (ಇಂಡೋ-ಇಸ್ಲಾಮಿಕ್) ಶೈಲಿಯ ಅನೇಕ ಧಾರ್ಮಿಕ ಕಟ್ಟಡಗಳು ಬೆಳೆದಿವೆ. ಇವು ಎರಡೂ ಸಂಸ್ಕೃತಿಗಳ ಅತ್ಯುತ್ತಮ ಅಂಶಗಳನ್ನು ಒಟ್ಟಿಗೆ ತರುವ ಪ್ರಯತ್ನ.‌ ಹಂಪಿಯ ಕಮಲ ಮಹಲ್ ಇದಕ್ಕೆ ಒಳ್ಳೆಯ ಉದಾಹರಣೆ” ಎಂದು ಡಾ. ಬಿಳಿಮಲೆ ಅವರು ತಿಳಿಸಿದರು.

ಮಸೀದಿಯ ಒಳಭಾಗದ ದೃಶ್ಯವನ್ನು ಕೆಳಗಿನ ವಿಡಿಯೊದಲ್ಲಿ ನೋಡಿ

ಕರ್ನಾಟಕದ ಕರಾವಳಿಯಲ್ಲಿ ಹಾಗೂ ನೆರೆಯ ಕೇರಳದಲ್ಲೂ ಇದೇ ರೀತಿಯ ಹಲವಾರು ಮಸೀದಿಗಳು ಇವೆ. ಉದಾಹರಣೆಗೆ ಕಾಸರಗೋಡಿನ ಮಾಲಿಕು ದಿನಾರ್‌‌ ಮಸೀದಿಯನ್ನು ಓದುಗರು ಗಮನಿಸಬಹುದು.

ಕರಾವಳಿಯ ಪ್ರಾಚೀನ ಮಸೀದಿಯ ಬಗ್ಗೆ ಹಲವಾರು ಡಾಕ್ಯುಮಂಟ್‌ ಮಾಡುತ್ತಿರುವ ಲೇಖಕ, ಇಸ್ಮತ್‌ ಪಜೀರ್‌, “ಮಸೀದಿಗೆ ಸುಮಾರು 900 ವರ್ಷಗಳ ಇತಿಹಾಸವಿದೆ. 900 ವರ್ಷಗಳ ಹಿಂದೆಯೆ ಪ್ರಸ್ತುತ ಕಾಣುತ್ತಿರುವಂತೆ ವೈಭವಯುತವಾಗಿ ಕಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಅದನ್ನು ನವೀಕರಣ ಮಾಡುತ್ತಲೇ ಬಂದಿದ್ದಾರೆ. ಈ ರೀತಿಯ ಹಲವಾರು ಮಸೀದಿಗಳು ಕರಾವಳಿಯಲ್ಲಿ ಇವೆ. ಉದಾಹರಣೆಗೆ ಹಳೆ ಬಂದರ್‌ನಲ್ಲಿ ಇರುವ 1400 ವರ್ಷಗಳ ಹಿಂದಿನ ಝೀನತ್‌ ಬಖ್ಷ್‌ ಮಸೀದಿ. ದ್ರಾವಿಡ ವಾಸ್ತುಶೈಲಿ ಇದ್ದಕೂಡಲೇ ಅದು ದೇವಸ್ಥಾನ ಆಗುವುದಿಲ್ಲ. ಇಲ್ಲಿನ ಮುಸ್ಲಿಮರು ಕೂಡಾ ಸ್ಥಳೀಯ ದ್ರಾವಿಡ ಸಂಸ್ಕೃತಿಯವರೇ ಆಗಿರುವುದರಿಂದ ಅವರು ಕಟ್ಟಿದ ಮಸೀದಿ ಸ್ಥಳೀಯ ಶೈಲಿಯಲ್ಲೇ ಇರುತ್ತದೆ. ಅದರಲ್ಲಿ ವಿಶೇಷ ಏನೂ ಇಲ್ಲ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: 2016-2020ರ ನಡುವೆ 3,400 ಕೋಮು ಗಲಭೆಗಳು ನಡೆದಿವೆ ಎಂದು ಒಪ್ಪಿಕೊಂಡಿದ್ದ ಮೋದಿ ಸರ್ಕಾರ

ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಳ, ಉಳ್ಳಾಲ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಮೂವತ್ತು ಪುರಾತನ ಮಸೀದಿಗಳಿವೆ ಎಂದು ಇಸ್ಮತ್‌ ಪಜೀರ್‌ ಹೇಳುತ್ತಾರೆ. ಅದರಲ್ಲೂ ಜಿಲ್ಲೆಯ ವಲವೂರು, ಅಕ್ಕರಂಗಡಿ, ಅಜಿಲಮೊಗರು, ವಿಟ್ಲ ಪರ್ತಿಪ್ಪಾಡಿ, ಅಮ್ಮುಂಜೆ ಸೇರಿದಂತೆ ಆರರಿಂದ ಏಳು ಮಸೀದಿಗಳು ಮಳಲಿ ಪೇಟೆಯಲ್ಲಿರುವ ಮಸೀದಿಯ ವಾಸ್ತು ಶೈಲಿಯಲ್ಲೇ ಕಟ್ಟಲ್ಪಟ್ಟಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪೊಲೀಸರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಂಗಳೂರು ತಹಶೀಲ್ದಾರ್ ಭೇಟಿ ನೀಡಿ ಮಸೀದಿಯ ಸ್ಥಳ ಹಾಗೂ ಮಸೀದಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಸಂಘಪರಿವಾರದ ಮುಖಂಡರ ಸಮ್ಮುಖದಲ್ಲಿ ಪರಿಶೀಲಿಸಿದ್ದಾರೆ ಎಂದು ವಾರ್ತಾಭಾರತಿ ವರಿದ ಮಾಡಿದೆ. ಬಳಿಕ ಮಸೀದಿಯ ದಾಖಲೆ ಪತ್ರಗಳನ್ನು ಜಿಲ್ಲಾಧಿಕಾರಿ ವಶಕ್ಕೆ ಪಡೆದಿದ್ದು, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಪತ್ರಿಕೆ ಹೇಳೀದೆ. ಈ ಬಗ್ಗೆ ಎಂಡೋಮೆಂಟ್ ಮತ್ತು ವಕ್ಫ್ ಬೋರ್ಡ್‌ನಿಂದ ವರದಿ ಪಡೆದು ವಾರದೊಳಗೆ ಸಮಸ್ಯೆ ಪರಿಹರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...