ಕನ್ಹಯ್ಯ ಲಾಲ್ ಕೊಲೆ ಖಂಡಿಸಿ ಭಾನುವಾರ ಭದ್ರಾವತಿಯ ರಂಗಪ್ಪ ವೃತ್ತದ ಬಳಿ ಪ್ರತಿಭಟನೆ ನಡೆದ ವೇಳೆ ಭಜರಂಗದಳದ ದುಷ್ಕರ್ಮಿಗಳು ಅಂಗಡಿಯೊಂದರ ಮೇಲೆ ದಾಂಧಲೆ ನಡೆಸಿದ್ದಾರೆ.
ಗಾಜು ಪುಡಿ ಪುಡಿ ಮಾಡಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಜರಂಗದಳದ ಆರು ಮಂದಿ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಭಾನುವಾರ ಸಂಜೆ ರಂಗಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಏಕಾಏಕಿ 6 ಜನ ಬಜರಂಗದಳದ ದುಷ್ಕರ್ಮಿಗಳು ಸ್ವಾಗ್ ಮೆನ್ಸ್ ಫ್ಯಾಷನ್ ಅಂಗಡಿಗೆ ನುಗ್ಗಿದ್ದಾರೆ. ಸೇಲ್ಸ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಶೌಕತ್ ಅಲಿ ಮತ್ತು ಅಶ್ವಾಗ್ ಅವರಿದ್ದ ಅಂಗಡಿ ದಾಳಿಗೆ ತುತ್ತಾಗಿದೆ.
#Shimoga: A protest organised by #Bajrangdal in Bhadravti against #Udaipurincident turned violent as the protesters barged into a #Muslim textile shop & destroyed belongings in front of police. 2 of his labourers were beaten by police for doing no crime as alleged by owner. + pic.twitter.com/igtI24ghcF
— Syed Mueen (@Mueen_magadi) July 4, 2022
ಅಕ್ರಮ ಪ್ರವೇಶ ನಡೆಸಿ ಗೊಂಬೆಗಳನ್ನ ಮತ್ತು ಗಾಜುಗಳನ್ನ ಒಡೆದು ಹಾಕಿದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಅಂಗಡಿಯ ಕಂಪ್ಯೂಟರ್ ಗಳನ್ನೂ ಧ್ವಂಸ ಮಾಡಿದ್ದಾರೆ. ಕತ್ತಿನ ಪಟ್ಟಿ ಹಿಡಿದುಕೊಂಡು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
#Karnataka : CCTV footage of the Bajrangdal members attacking muslims and vandalising their shop during a protest arranged against #Udaipur incident at Bhadravati, Shimoga district. FIR has been registered against 9 people so far, No updates on any arrest. pic.twitter.com/pMQID1DzKm
— Mohammed Irshad (@Shaad_Bajpe) July 6, 2022
ಅಂಗಡಿಯಲ್ಲಿ ಕೆಲಸ ಮಾಡುವ ಅಸ್ವಾಗ್ ಎಂಬ ಹುಡುಗನ ಮೇಲೂ ಹಲ್ಲೆ ನಡೆಸಿದ್ದಾರೆ. ಅಶ್ವಾಗ್ ಅವರಿಗೆ ಕುತ್ತಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಈ ಬಗ್ಗೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


