ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ, ಹೋರಾಟಗಾರ ರೋನಾ ವಿಲ್ಸನ್ ತನ್ನ ಸೊಸೆಯ ಮದುವೆಗೆ ಹಾಜರಾಗುವುದಕ್ಕಾಗಿ ಕೋರಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯವು ನಿರಾಕರಿಸಿದೆ. ಅವರು ಭಾಗವಹಿಸಬೇಕಾಗಿದ್ದ ಮದುವೆ “ದೂರದ ಸಂಬಂಧಿ”ಯದ್ದಾಗಿದ್ದು, ಅಲ್ಲಿ ಅವರ ಉಪಸ್ಥಿತಿಯು ಅಗತ್ಯವಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪನ್ನು ಸಮರ್ಥಿಸಿಕೊಂಡಿದೆ. ಭೀಮಾ ಕೊರೆಗಾಂವ್ ಪ್ರಕರಣ
2018ರ ಜೂನ್ ವೇಳೆಗೆ ದೆಹಲಿಯ ಅವರ ನಿವಾಸದ ಮೇಲೆ ದಾಳಿ ನಡೆಸಿ ಪ್ರಕರಣದ ತನಿಖೆ ನಡೆಸಿದ್ದ ಪುಣೆ ಪೊಲೀಸರು ರೋನ ವಿಲ್ಸಲ್ ಅವರನ್ನು ಬಂಧಿಸಿದ್ದರು. ನಂತರ ಪೊಲೀಸರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದ್ದರು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದು ಮಹಾರಾಷ್ಟ್ರದ ನವಿ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹೋರಾಟಗಾರ ವಿಲ್ಸನ್ ಅವರು ಇತ್ತೀಚೆಗೆ ತನ್ನ ಸೋದರ ಸೊಸೆಯ (ಅವನ ಸೋದರ ಸೊಸೆಯ ಮಗಳು) ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಜನವರಿ 6 ರಿಂದ 20, 2025 ರವರೆಗೆ ಮಧ್ಯಂತರ ಜಾಮೀನು ಕೋರಿದ್ದರು. ವಿಶೇಷ ನ್ಯಾಯಾಧೀಶ ಚಕೋರ್ ಬಾವಿಸ್ಕರ್ ಅವರು ಡಿಸೆಂಬರ್ 13 ರಂದು ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಮಂಗಳವಾರ ಲಭ್ಯವಾದ ಆದೇಶದಲ್ಲಿ, “ಆರೋಪಿಯು ತನ್ನ ಸೊಸೆಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ಆದರೆ, ಅದು ದೂರದ ಸಂಬಂಧವಾಗಿದ್ದು, ಅವರು ಮದುವೆಗೆ ಹಾಜರಾಗುವ ಅಗತ್ಯವಿಲ್ಲ” ಎಂದು ವಿಶೇಷ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿದೆ. ಕಳೆದ ವಾರ, ಇದೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಹಿಂದೆ ಬಂಧಿತರಾಗಿದ್ದ ಮತ್ತೋರ್ವ ಆರೋಪಿ ಸಾಗರ್ ಗೋರ್ಖೆ ಅವರಿಗೆ ಕಾನೂನು ಪದವಿ ಪರೀಕ್ಷೆಗೆ ಹಾಜರಾಗಲು ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. ಭೀಮಾ ಕೊರೆಗಾಂವ್ ಪ್ರಕರಣ
ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಲ್ಸನ್ ಮತ್ತು ಇತರ 14 ಹೋರಾಟಗಾರರು ಮತ್ತು ಶಿಕ್ಷಣತಜ್ಞರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಮಾವೇಶದ ಮರುದಿನ ಪುಣೆ ನಗರದ ಹೊರವಲಯದಲ್ಲಿರುವ ಕೋರೆಗಾಂವ್ ಭೀಮಾದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ ಪುಣೆ ಪೊಲೀಸರು, ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿತ್ತು ಎಂದು ಆರೋಪಿಸಿದ್ದರು. ಹಾಗಾಗಿ ನಂತರ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು.
ಇದನ್ನೂ ಓದಿ: ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ : ಪ್ರತಿಪಕ್ಷಗಳಿಂದ ತೀವ್ರ ವಿರೋಧ


