Homeಮುಖಪುಟಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ

- Advertisement -
- Advertisement -

| ಭೀಮಾಶಂಕರ ಬಿರಾದಾರ |

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ ಹಾಗೂ ಸಮಷ್ಟಿಯ ಬದುಕಿನ ವಿಶ್ಲೇಷಣೆಯ ಕಲಾತ್ಮಕ ಬರಹ. ಸಂಕೀರ್ಣವಾದ ಕಥಾ ಸಂವಿಧಾನವೂ ಹಾಗೂ ವಾಸ್ತವಿಕ ಘಟನೆಗಳನ್ನು ಚಿತ್ರಿಸುವ ದೀರ್ಘ ಕಥನ. ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವು ಕಾದಂಬರಿಯ ಜಾಯಮಾನ. ನಾವೆಲ್‍ಗೆ ಸಂವಾದಿ ರೂಪ ಕನ್ನಡದಲ್ಲಿನ ಕಾದಂಬರಿ. 1899ರಲ್ಲಿ ಪ್ರಕಟಗೊಂಡ ಗುಲ್ವಾಡಿಯವರ ‘ಇಂದಿರಾಬಾಯಿ’ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. ಸಾಮ್ರಾಜ್ಯಶಾಹಿ, ವಸಾಹತು ಚಿಂತನೆ, ಇಂಗ್ಲಿಷ್ ಶಿಕ್ಷಣ, ಭಾರತೀಯ ಸಮಾಜದ ಮೇಲೆ ಒಡ್ಡುತ್ತಿರುವ ಆಧುನಿಕತೆ ಎಂಬ ಸಾಂಸ್ಕೃತಿಕ ಮತ್ತು ಬೌದ್ಧಿಕ ಯಜಮಾನ್ಯ, ಮನುಷ್ಯ ಸಂಬಂಧಗಳು ಆಕ್ರಮಿಸಿಕೊಂಡು ವ್ಯವಹಾರವಾಗಿಸಿದ ಜಾಗತೀಕರಣ ಇಂಥ ಅನೇಕ ಆಲೋಚನೆಗಳು ಮತ್ತು ಚಿಂತನೆಗಳು ಕನ್ನಡ ಕಾದಂಬರಿ ಪರಂಪರೆ ಒಂದು ಶತಮಾನಕ್ಕೂ ಹೆಚ್ಚುಕಾಲ ನಿರಂತರವಾಗಿ ಕಟ್ಟುತ್ತ ಬಂದಿದೆ. ಬೀದರ ಜಿಲ್ಲೆಯಲ್ಲಿ ಕಾದಂಬರಿ ಪ್ರಕಾರ ಸೃಷ್ಟಿಯಾದದ್ದು 1973ರಲ್ಲಿ. `ಸಿಂದಿ ಬನದಲ್ಲಿ ಸಿಕ್ಕವಳು’ ಕಾದಂಬರಿ ಬರೆಯುವ ಮೂಲಕ ಸುಬ್ಬಣ್ಣ ಅಂಬೆಸಂಗೆ ಜಿಲ್ಲೆಯ ಮೊದಲ ಕಾದಂಬರಿಕಾರರಾಗಿದ್ದಾರೆ. ಎಮ್.ಜಿ. ದೇಶಪಾಂಡೆ, ಯಶೋದಮ್ಮ ಸಿದ್ದಬಟ್ಟೆ, ಸುನಿತಾ ಬಿರಾದಾರ, ಗಣಪತಿ ಭೂರೆ, ಡಾ. ಜಯದೇವಿ ಗಾಯಕವಾಡ ಹೀಗೆ ಕೆಲವರು ಮಾತ್ರ ಜಿಲ್ಲೆಯಲ್ಲಿ ಕಾದಂಬರಿ ವಿನ್ಯಾಸ ಕಟ್ಟಿದ್ದಾರೆ. ಸುಬ್ಬಣ್ಣ ಅಂಬೆಸಂಗೆಯವರು ಸೃಜನಶೀಲ ಬರಹಗಾರರಾಗಿ ಕಾದಂಬರಿ, ಕಥೆ ಬರೆದಂತೆ ಭಾಷಾ ಚಿಂತಕರಾಗಿಯೂ ಗಮನ ಸೆಳೆಯುತ್ತಾರೆ.

ಭಾಲ್ಕಿ ತಾಲೂಕಿನ ಎಕಲಾಸಪೂರದ ಸುಬ್ಬಣ್ಣನವರು 1950 ಜೂನ್ 15ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಬೇಸಾಯದಲ್ಲಿ ತೊಡಗಿದ್ದಾರೆ. ಸುಬ್ಬಣ್ಣನವರ ‘ಸಿಂದಿಬನದಲ್ಲಿ ಸಿಕ್ಕವಳು’ ಕಾದಂಬರಿ ಸ್ತ್ರೀ ಕೇಂದ್ರೀತ ದುರಂತ ವಸ್ತುವನ್ನೊಳಗೊಂಡಿದೆ. ಕಥನ ವಿನ್ಯಾಸ ಸರಳವಾಗಿದ್ದರೂ ಒಂದು ಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭವನ್ನು ನೆನಪಿಸುತ್ತದೆ. ಕಾದಂಬರಿಗಳು ಭೂತ ಮತ್ತು ವರ್ತಮಾನಗಳೆರಡನ್ನು ತನ್ನ ಒಡಲೊಳಗಿಟ್ಟಿಕೊಂಡು ಭವಿಷ್ಯದ ಮರುವಿಶ್ಲೇಷಣೆಗೆ ಎಡೆಮಾಡಿಕೊಡುತ್ತವೆ. ಈ ಪ್ರದೇಶದ ಪ್ರಕ್ಷುಬ್ಧ ಕಾಲವೊಂದರ ಕ್ರೂರ ಸಂಗತಿಗಳನ್ನೂ ಇವರ ಕಾದಂಬರಿ ಕಥನಿಸುತ್ತದೆ. ಜತೆಗೆ ಧಾರ್ಮಿಕ ಮೂಲಭೂತವಾದಿತನ, ಪ್ರಭುತ್ವದ ಹಪಾಹಪಿತನ, ಸ್ತ್ರೀ ಅನುಭವಿಸಬಹುದಾದ ದೌರ್ಜನ್ಯದ ದುರಂತ, ಈ ಎಲ್ಲ ಬರ್ಬರತೆಗಳು ಒಳಗೊಂಡ ಸಮಾಜವೊಂದರ ಚಿತ್ರಣ ನೀಡುತ್ತದೆ. ಅಧಿಕಾರ ಕೇಂದ್ರೀತ ಸಿದ್ಧಾಂತಗಳು ಸೃಷ್ಟಿಸಿದ ದಮನಕಾರಿ ವ್ಯವಸ್ಥೆಯ ನಿಲುವುಗಳು ಸಮಾಜ, ಕುಟುಂಬ, ವ್ಯಕ್ತಿ ಮುಖ್ಯವಾಗಿ ಮಹಿಳೆಯ ಮೇಲೆ ಮಾಡುವ ಆಕ್ರಮಣಗಳು ಕಾದಂಬರಿಕಾರ ಖಚಿತವಾಗಿ ದಾಖಲಿಸಿದ್ದಾರೆ. ಪ್ರಭುತ್ವ ಮತ್ತು ಜನರ ನಡುವಿನ ಸೈದ್ಧಾಂತಿಕ ಭಿನ್ನತೆಗಳು, ಅದರಿಂದ ಉಂಟಾದ ದಂಗೆಗಳು ಮತ್ತು ದಂಗೆಗಳು ತಂದೊಡ್ಡುವ ವಿನಾಶಗಳು, ಮಹಿಳೆಯ ಅಸ್ತಿತ್ವದ ಮೇಲಿನ ಅಲೆಯಾಗಿವೆ. ಹೆಣ್ಣಿನ ಅನಿವಾರ್ಯತೆ ಮತ್ತು ಅಸಹಾಯಕ ಸ್ಥಿತಿಯಲ್ಲಿ ಜಾಗೃತಗೊಂಡ ಕೆಲವರ ‘ಪುರುಷತನ’ವು ಅವಳನ್ನು ಮುಕ್ಕುವಂತಾಗಿಸುವ ಅಂಶಗಳು ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.

ಸುಬ್ಬಣ್ಣನವರು ‘ಅರಳು’, ‘ಚೇತನ’, ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು’, ‘ಬಳ್ಳಿಯ ಹೂ ಬಾಡದಿರಲಿ’ ಕಥಾ ಸಂಕಲನಗಳು ಪ್ರಕಟಿಸುವ ಮೂಲಕ ಜಿಲ್ಲೆಯ ಮುಖ್ಯ ಕಥೆಗಾರರಾಗಿದ್ದಾರೆ. ಆರಂಭದಲ್ಲಿ ನವೋದಯದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ ನಂತರ ಹೆಚ್ಚು ಸಮಾಜ ಮತ್ತು ಸಮುದಾಯ ಕೇಂದ್ರಿತ ಕತೆಗಳು ಬರೆದಿದ್ದಾರೆ. ಪ್ರೀತಿ, ಪ್ರೇಮ, ಹತಾಶೆ, ನೆನಪುಗಳು ಒಂದೆಡೆಯಾದರೆ, ವೃದ್ಧಾಪ್ಯದಲ್ಲಿ ದುಡಿಯುವ, ದುಡಿದು ಬದುಕುವ ಅನಿವಾರ್ಯತೆ ಮತ್ತು ಜೀವನದ ಕ್ರೌರ್ಯ ಇವರ ಕತೆಗಳಲ್ಲಿ ಚಿತ್ರಿತಗೊಂಡಿವೆ. ಇವರ ಬಹುತೇಕ ಕತೆಗಳು ಮನೋವಿಶ್ಲೇಷಣಾ ಸಿದ್ಧಾಂತದ ನೆಲೆಯಲ್ಲಿ ರಚನೆಯಾಗಿವೆ. ಸಂಕೀರ್ಣಗೊಂಡ ಧಾರ್ಮಿಕತೆ ಮತ್ತು ಅದರ ಆಚರಣೆಗಳ ಭ್ರಷ್ಟತೆಯನ್ನು ನೇರವಾಗಿ ಪ್ರತಿರೋಧಿಸುವ ಮಟ್ಟದ ಪಾತ್ರಗಳು ಅವರ ಕತೆಗಳಲ್ಲಿ ಕಾಣುವುದಿಲ್ಲ. ಮನೋರೋಗಗಳು ಮೌಢ್ಯದ ರೂಪವಾಗಿ ದೇವರೆದುರಿಗೆ ಅನಾವರಣಗೊಳ್ಳುವ ಬಗೆಯನ್ನು ಮಾತ್ರ ಚಿತ್ರಿಸುವುದು ಕತೆಗಾರರಿಗೆ ಮುಖ್ಯವಾದದ್ದು ಕಾಣುತ್ತದೆ. ಹೀಗೆ ಸುಬ್ಬಣ್ಣನವರ ಕತೆಗಳು ಸಮಾಜದಲ್ಲಿ ಸಂಭವಿಸುವ ಸಂಗತಿಗಳ ಬಗೆಗೆ ನೇರವಾಗಿ ಮಾತನಾಡುತ್ತವೆ.

‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ’ (1996) ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿದ ‘ಗಡಿನಾಡು ಭಾಷಾ ಸಮಸ್ಯೆ’ ಕೃತಿ ಬರೆದ ಸುಬ್ಬಣ್ಣನವರು ಜಿಲ್ಲೆಯ ಮೊದಲ ಭಾಷಾ ಚಿಂತಕ. ಬೀದರ ಕನ್ನಡ ಭಾಷಾ ಅಧ್ಯಯನಕ್ಕೆ ಈ ಎರಡು ಕೃತಿಗಳು ಪ್ರಧಾನ ಮಾರ್ಗಗಳಾಗುತ್ತವೆ. ಬೀದರ ಕನ್ನಡ ಭಾಷೆಯ ರಚನೆ ಮತ್ತು ಅನ್ಯ ಭಾಷೆಗಳ ಪ್ರಭಾವ ಕುರಿತು ಸೂಕ್ಷ್ಮ ಚಿಂತನೆ ನಡೆಸಿ, ಕ್ಷೇತ್ರ ಕಾರ್ಯ ಕೈಗೊಂಡು ಅಧ್ಯಯನ ಪೂರ್ಣ ಕೃತಿಗಳು ಬರೆದಿದ್ದಾರೆ.

ಆಡುಮಾತಿನಿಂದ ಹಿಡಿದು ವ್ಯವಹಾರ, ಮಾರುಕಟ್ಟೆ, ಆಡಳಿತ, ಗ್ರಂಥಸ್ಥ, ಜನಪದ ಮೊದಲಾದ ಕ್ಷೇತ್ರಗಳಲ್ಲಿ ಬಳಕೆಯಾಗುವ ಭಾಷಾ ಭಿನ್ನತೆಯನ್ನು ಗುರುತಿಸಿ ನಿದರ್ಶನ ಸಹಿತ ವಿವರಿಸಿದ್ದಾರೆ. ಬೀದರ ಕನ್ನಡದ ಮೇಲೆ ಪ್ರಭಾವ ಬೀರಿದ ಪೋರ್ಚುಗೀಸ್, ಅರಬ್ಬಿ, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು ಭಾಷೆಗಳು ಇಲ್ಲಿನ ಕನ್ನಡದೊಂದಿಗೆ ಬೆರೆತ ಕ್ರಮವನ್ನು ವಿವೇಚಿಸಿದ್ದಾರೆ. ಅನ್ಯ ಭಾಷೆ ಬೆರೆಸಿ ಮಾತಾಡುವ ಈ ಪ್ರದೇಶದ ಜನರ ಆಡು ನುಡಿಯಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿದ್ದಾರೆ.

ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಲೇಖನಗಳ ಸಂಗ್ರಹ ‘ವಿನಯ ಭಂಡಾರಿ’ ಹಾಗೂ ‘ನೀನೊಲಿದರೆ ಕೊರಡು ಕೊನರುವುದಯ್ಯ’ ಕೃತಿಗಳು, ‘ಗುರುತು’, ‘ಅಡ್ಡಗೋಡೆಯ ಮೇಲಿನ ದೀಪ’, ‘ವಿಚಾರಗಳಿಂದ ಸಹಾಯಗಳಿಲ್ಲ’ ಎಂಬ ಪ್ರಬಂಧ ಮತ್ತು ರೇಡಿಯೋ ಚಿಂತನಗಳ ಸಂಗ್ರಹ ಬರೆವ ಮೂಲಕ ಬದುಕಿನ ಪ್ರೀತಿ ಮತ್ತು ಸಾಮಾಜಿಕ ಪ್ರಜ್ಞೆಯ ಬರಹಗಾರರಾಗಿ ನಿಲ್ಲುತ್ತಾರೆ. ಸುಬ್ಬಣ್ಣನವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೊರೆತಿವೆ. ಭಾಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಕೃಷಿಕರಾಗಿ, ಅಧ್ಯಾಪಕರಾಗಿ, ಕಾದಂಬರಿಕಾರರಾಗಿ, ಭಾಷಾ ಚಿಂತಕರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....