ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ವಿರೋಧಿಸಿ ನಡೆದ ‘ಒನ್ ಬಿಲಿಯನ್ ರೈಸಿಂಗ್’ ಚಳವಳಿಯನ್ನು ದಕ್ಷಿಣ ಏಷಿಯಾ ರಾಷ್ಟ್ರಗಳಲ್ಲಿ ಮುನ್ನಡೆಸಿದ ಬರಹಗಾರ್ತಿ ಕಮಲಾ ಭಾಸಿನ್ (75) ನಿಧನರಾಗಿದ್ದಾರೆ.
ಪ್ರಖ್ಯಾತ ಮಹಿಳಾ ಹೋರಾಟಗಾರ್ತಿ ಹಾಗೂ ಮಹತ್ವದ ಲೇಖಕಿಯಾಗಿರುವ ಅವರು, ಲಿಂಗ ಸಮಾನತೆ, ಅಭಿವೃದ್ಧಿ, ಶಾಂತಿ ಮತ್ತು ಮಾನವ ಹಕ್ಕುಗಳಿಗಾಗಿ ಮೂರು ದಶಕಗಳಿಂದ ಭಾರತ ಹಾಗೂ ಇತರೆ ದಕ್ಷಿಣ ಏಷಿಯಾ ರಾಷ್ಟ್ರೀಯಗಳಲ್ಲಿ ಸಕ್ರಿಯರಾಗಿದ್ದರು.
1970ರಿಂದಲೂ ಅಭಿವೃದ್ಧಿ ವಿಚಾರವಾಗಿ ಕೆಲಸ ಮಾಡಿರುವ ಅವರು, ಸ್ತ್ರೀವಾದ ಹಾಗೂ ಮಹಿಳಾ ವಿಷಯಗಳ ಕುರಿತು ಹಲವು ಕೃತಿಗಳನ್ನು ಬರೆದಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೊಡಿಯ, ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವರು ಕಮಲ ಭಾಸಿನ್ ನಿಧನಕ್ಕೆ ಸಂತಾಪ ಸೂಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
Kamla Bhasin was not only a women's rights activist, but also a philanthropist who set up & helped setting up many fine public Interest institutions like Jagori in HP & School for democracy in Rajasthan. She will be missed by many. May her soul rest in peace https://t.co/nst3qjnwYZ
— Prashant Bhushan (@pbhushan1) September 25, 2021
“ಕಮಲಾ ಭಾಸಿನ್ ಕೇವಲ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಾತ್ರವಲ್ಲ, ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಜಾಗೋರಿಯಂತಹ ಅನೇಕ ಉತ್ತಮ ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳನ್ನು ಸ್ಥಾಪಿಸಲು ಸಹಕರಿಸಿದ ಲೋಕೋಪಕಾರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
“ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಸ್ತ್ರೀವಾದಿ ರಾಜಕಾರಣವನ್ನು ತೆರೆದಿಟ್ಟು ಮನಸ್ಸುಗಳನ್ನು ಬದಲಾಯಿಸಿದರು” ಎಂದು ಕವಿತಾ ಕೃಷ್ಣನ್ ಸ್ಮರಿಸಿದ್ದಾರೆ.


