ಗುರುವಾರ ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣದಲ್ಲಿ ಇಳಿದ ಹಲವಾರು ಪ್ರಯಾಣಿಕರು ಮಕ್ಕಳು- ಮರಿ, ಲಗೇಜ್ ಎತ್ತಿಕೊಂಡು ಸ್ಟೇಷನ್‌ನಿಂದ ಎದ್ದು ಬಿದ್ದು ಓಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರ ಈ ಹುಚ್ಚು ಓಟಕ್ಕೆ ಕಾರಣ- ಕೋವಿಡ್ ಟೆಸ್ಟ್!
ಇದೇನೂ ಹೊಸದಲ್ಲ, ನಿತ್ಯವೂ ಬಹುಪಾಲು ರೈಲು ನಿಲ್ದಾಣಗಳಲ್ಲಿ ಇದು ನಡೆದೇ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
यह दृश्य कल रात बक्सर स्टेशन का हैं और ये यात्री पुणे -पटना से उतरे हैं और कोरोना जाँच ना कराना पड़े इसलिए भाग रहे हैं @ndtvindia @Anurag_Dwary @suparba pic.twitter.com/cWxDDoP26X
— manish (@manishndtv) April 16, 2021
ಸ್ಟೇಷನ್‌ನಿಂದ ಹೊರಡುವ ಮುನ್ನ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಆರೋಗ್ಯ ಕಾರ್ಯಕರ್ತರೊಬ್ಬರು ಕೇಳಿದಾಗ ನಿಲ್ದಾಣದಿಂದ ಹೊರಗೆ ಹೋಗುತ್ತಿದ್ದ ವ್ಯಕ್ತಿಯ ಮುಖದಲ್ಲಿ ಭಯಂಕರ ಸಿಟ್ಟು ಕಾಣಿಸಿಕೊಂಡಿತು.
ದೇಶದ ವಿವಿಧ ಭಾಗಗಳಿಂದ ಮನೆಗೆ ಮರಳುವ ಸ್ಥಳೀಯರನ್ನು ಪರೀಕ್ಷಿಸಲು ಬಿಹಾರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗೆ ಘೋಷಿಸಿದ್ದರು.
“ನಾವು ಅವರನ್ನು ಹೊರಹೋಗುವುದನ್ನು ನಿಲ್ಲಿಸಿದಾಗ, ಅವರು ವಾದಿಸಲು ಪ್ರಾರಂಭಿಸಿದರು. ಘಟನೆಯ ಸಮಯದಲ್ಲಿ ನಿಲ್ದಾಣದಲ್ಲಿ ಯಾವುದೇ ಪೊಲೀಸರು ಇರಲಿಲ್ಲ. ನಂತರ, ಒಬ್ಬ ಪೊಲೀಸ್ ಮಹಿಳೆ ಬಂದರು. ಅವರು ಒಬ್ಬಂಟಿಯಾಗಿದ್ದರಿಂದ ಅಸಹಾಯಕಳಾಗಿದ್ದರು” ಎಂದು ಬಕ್ಸಾರ್‌ನ ಸ್ಥಳೀಯ ಕೌನ್ಸಿಲರ್ ಜೈ ತಿವಾರಿ ಹೇಳಿದ್ದಾರೆ.
ಕೊರೊನಾ ವೈರಸ್ ಪೀಡಿತ ಮುಂಬೈ, ಪುಣೆ ಮತ್ತು ದೆಹಲಿಗಳಿಂದ ರೈಲುಗಳು ಪ್ರತಿದಿನ ರಾಜ್ಯಕ್ಕೆ ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಉದ್ಯೋಗವಿಲ್ಲದ ಕಾರಣ ಅಥವಾ ಲಾಕ್‌ಡೌನ್ ಭಿತಿಯಲ್ಲಿ ಮನೆಗೆ ಮರಳುತ್ತಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ದಾಖಲೆಯ ಏರಿಕೆಯ ಮಧ್ಯೆ, ಮುಂಬೈ, ಪುಣೆ ಮತ್ತು ದೆಹಲಿಯಂತಹ ನಗರಗಳು ಹೆಚ್ಚು ತೊಂದರೆಗೆ ಸಿಲುಕಿವೆ. ಬಿಹಾರ ಮುಖ್ಯಮಂತ್ರಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿ ವೈರಸ್ ಹರಡುವುದನ್ನು ಪರೀಕ್ಷಿಸಲು ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಗುರುವಾರ 6,253 ಹೊಸ ಪ್ರಕರಣಗಳು ಮತ್ತು 13 ಹೊಸ ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ.
ಇದನ್ನೂ ಓದಿ: ಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು


