Homeಮುಖಪುಟಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

ಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

- Advertisement -
- Advertisement -

ತಜ್ಞರ ತಂಡವೊಂದು ಲಭ್ಯವಿರುವ ಸಂಶೋಧನೆಗಳನ್ನು ಪರಿಷ್ಕರಣೆ ಮಾಡಿ, SARS-CoV-2 ನ ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (airborne) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಮೌಲ್ಯಮಾಪನವನ್ನು ಪ್ರಕಟಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕಳೆದ ವರ್ಷದಿಂದ, ಕೊರೊನಾ ವೈರಸ್ SARS-CoV-2 ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಹಿಡಿದವು. ವಿಶ್ವ ಆರೋಗ್ಯ ಸಂಸ್ಥೆಯಿಂದ ಧನಸಹಾಯ ಪಡೆದಿರುವ ಇತರ ಅಧ್ಯಯನಗಳು ಸಹ ನಡೆದಿವೆ, ಅವುಗಳು ಸಾಕ್ಷ್ಯ, ಆಧಾರಗಳನ್ನು ಅನಿರ್ದಿಷ್ಟವೆಂದು ಹೇಳಿದ್ದವು.

ಈಗ, ತಜ್ಞರ ಒಂದು ತಂಡವು ಲಭ್ಯವಿರುವ ಸಂಶೋಧನೆಗಳನ್ನು ಪರೀಕ್ಷಿಸಿ ಅದರ ಮೌಲ್ಯಮಾಪನವನ್ನು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟಿಸಿದೆ: SARS-CoV-2 ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (ಗಾಳಿಯ ಮೂಲಕ) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಅದು ಪ್ರತಿಪಾದಿಸಿದೆ.

ತಜ್ಞರು ಈ ತೀರ್ಮಾನಕ್ಕೆ ಹೇಗೆ ಬಂದರು?

ಅಸ್ತಿತ್ವದಲ್ಲಿರುವ ಸಂಶೋಧನೆಗಳನ್ನು ಪರಿಶೀಲಿಸಿರುವ ಯುಕೆ, ಯುಎಸ್ ಮತ್ತು ಕೆನಡಾದ ಆರು ತಜ್ಞರು SARS-CoV-2 ಕೊರೊನಾ ಪ್ರಾಥಮಿಕವಾಗಿ ವಾಯುಗಾಮಿ ಮಾರ್ಗದ ಮೂಲಕ ಹರಡುತ್ತದೆ ಎಂಬ ಪ್ರಮೇಯವನ್ನು ಒಟ್ಟಾಗಿ ಬೆಂಬಲಿಸುವ 10 ಪುರಾವೆಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ

1. ಸೂಪರ್-ಸ್ಪ್ರೆಡರ್ ಘಟನೆಗಳು ಗಣನೀಯ SARS-CoV-2 ಪ್ರಸರಣಕ್ಕೆ ಕಾರಣವಾಗಿವೆ. ವಾಸ್ತವವಾಗಿ, ಅಂತಹ ಘಟನೆಗಳು ಸಾಂಕ್ರಾಮಿಕ ರೋಗದ ಪ್ರಾಥಮಿಕ ಚಾಲಕರಾಗಿರಬಹುದು. ಸಂಗೀತ ಕಚೇರಿಗಳು, ಕ್ರೂಸ್ ಹಡಗುಗಳು ಇತ್ಯಾದಿಗಳಲ್ಲಿನ ಮಾನವ ನಡವಳಿಕೆಗಳು ಮತ್ತು ಇತರ ಅಸ್ಥಿರಗಳ ವಿವರವಾದ ವಿಶ್ಲೇಷಣೆಗಳು “SARS-CoV-2 ವಾಯುಗಾಮಿ ಹರಡುವಿಕೆಗೆ ಅನುಗುಣವಾಗಿರುತ್ತವೆ, ಅದನ್ನು ಹನಿಗಳು ಅಥವಾ ಫೋಮೈಟ್‌ಗಳಿಂದ ಸಮರ್ಪಕವಾಗಿ ವಿವರಿಸಲಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.

2. ಅಕ್ಕಪಕ್ಕದ ಕೋಣೆಗಳಲ್ಲಿನ ಜನರ ನಡುವೆ SARS-CoV-2 ನ ದೀರ್ಘ-ವ್ಯಾಪ್ತಿಯ ಪ್ರಸರಣವನ್ನು ಕ್ವಾರಂಟೈನ್ ಹೋಟೆಲ್‌ಗಳಲ್ಲಿ ದಾಖಲಿಸಲಾಗಿದೆ. ಆದರೆ ಅವರು ಎಂದಿಗೂ ಪರಸ್ಪರ ಭೇಟಿ ಆಗಿರಲಿಲ್ಲ.

3. ರೋಗ ಲಕ್ಷಣ ಇರದ ಅಥವಾ ಇರುವ ಕೊರೊನಾ ಪೀಡಿತರ ಕೆಮ್ಮು ಅಥವಾ ಸೀನದೇ ಇರುವಾಗಲೂ ಸಂಭವಿಸುವ ಹರಡುವಿಕೆಯು ಜಾಗತಿಕವಾಗಿ ಎಲ್ಲಾ ಪ್ರಸರಣಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು, ಮತ್ತು ಬಹುಶಃ 59% ವರೆಗೆ ಕಾರಣವಾಗಬಹುದು. ಇದು ಕೂಡ ಗಾಳಿಯ ಮೂಲಕ ಪ್ರಸರಣದ ಸಾಧ್ಯತೆಯನ್ನು ತೋರಿಸುತ್ತದೆಯೇ ಹೊರು ಡ್ರಾಪಲೆಟ್‌ಗಳ ಮೂಲಕ ಅಲ್ಲ.

4. ಕೊರೊನಾ ಪ್ರಸಾರವು ಹೊರಾಂಗಣಕ್ಕಿಂತ ಒಳಾಂಗಣದಲ್ಲಿ ಹೆಚ್ಚಾಗಿದೆ. ಆದರೆ ಒಳಾಂಗಣ ವಾತಾಯನದಿಂದ (ವೆಂಟಿಲೇಷನ್) ಗಣನೀಯವಾಗಿ ಕಡಿಮೆಯಾಗುತ್ತದೆ. ಎರಡೂ ಅವಲೋಕನಗಳು ಪ್ರಧಾನವಾಗಿ ವಾಯುಗಾಮಿ ಪ್ರಸರಣ ಮಾರ್ಗವನ್ನು ಬೆಂಬಲಿಸುತ್ತವೆ ಎಂದು ಲೇಖಕರು ಬರೆದಿದ್ದಾರೆ.

5. ಆರೋಗ್ಯ ಸಂಸ್ಥೆಗಳಲ್ಲಿ ಹೊಸ ಸೋಂಕುಗಳನ್ನು ದಾಖಲಿಸಲಾಗಿದೆ, ಅಲ್ಲಿ ಕಟ್ಟುನಿಟ್ಟಾದ ಸಂಪರ್ಕ ಮತ್ತು ಡ್ರಾಪ್‌ಲೆಟ್ ಮುನ್ನೆಚ್ಚರಿಕೆಗಳ ಜಾರಿ ಮತ್ತು ಪಿಪಿಇ ಬಳಕೆಯನ್ನು ಹನಿಗಳಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಏರೋಸಾಲ್ (ಗಾಳಿ ಪ್ರಸರಣದ) ವ್ಯವಸ್ಥೆ ಇಲ್ಲ.

6. ಸಕ್ರಿಯ ಕೊರೊನಾ ಗಾಳಿಯಲ್ಲಿ ಪತ್ತೆಯಾಗಿದೆ. ಪ್ರಯೋಗಾಲಯದ ಪ್ರಯೋಗಗಳಲ್ಲಿ, ಕೊರೊನಾ 3 ಗಂಟೆಗಳವರೆಗೆ ಗಾಳಿಯಲ್ಲಿ ಸಾಂಕ್ರಾಮಿಕವಾಗಿ ಉಳಿಯಿತು.

7. ಕೋವಿಡ್ -19 ರೋಗಿಗಳಿರುವ ಆಸ್ಪತ್ರೆಗಳಲ್ಲಿ ಏರ್ ಫಿಲ್ಟರ್‌ಗಳು ಮತ್ತು ಕಟ್ಟಡದ ನಾಳಗಳಲ್ಲಿ ಕೊರೋನಾ ಅನ್ನು ಗುರುತಿಸಲಾಗಿದೆ; ಅಂತಹ ಸ್ಥಳಗಳನ್ನು ಏರೋಸಾಲ್ ಅಂದರೆ ಗಾಳಿಯಿಂದ ಮಾತ್ರ ತಲುಪಬಹುದು.

8. ಒಂದು ಪಂಜರದಲ್ಲಿ ಸೋಂಕುಯುಕ್ತ ಪ್ರಾಣಿಗಳು ಮತ್ತು ಇನ್ನೊಂದರಲ್ಲಿ ಸೋಂಕುರಹಿತ ಪ್ರಾಣಿಗಳನ್ನು ಇರಿಸಿ ಎರಡರ ನಡುವೆ ನಾಳದ ಮೂಲಕ ಗಾಳಿ ಸಂಪರ್ಕ ಏರ್ಪಡಿಸಿದಾಗ ಸೋಂಕು ಪ್ರಸಾರವಾಗಿದ್ದನ್ನು ಹಲವು ಅಧ್ಯನಗಳು ತೋರಿಸಿವೆ.

9. ವಾಯುಗಾಮಿ ಪ್ರಸರಣದ ಊಹೆಯನ್ನು ನಿರಾಕರಿಸಲು “ನಮ್ಮ ಜ್ಞಾನಕ್ಕೆ” ಯಾವುದೇ ಅಧ್ಯಯನವು ಬಲವಾದ ಅಥವಾ ಸ್ಥಿರವಾದ ಪುರಾವೆಗಳನ್ನು ಒದಗಿಸಿಲ್ಲ. ಸೋಂಕಿತ ಜನರೊಂದಿಗೆ ಗಾಳಿಯನ್ನು ಹಂಚಿಕೊಂಡಾಗ ಕೆಲವರು ಸೋಂಕನ್ನು ಪಡೆದಿಲ್ಲ, ಆದರೆ ಸಾಂಕ್ರಾಮಿಕ ವ್ಯಕ್ತಿಗಳ ನಡುವಿನ ವೈರಲ್ ಹರಡುವಿಕೆ ಪ್ರಮಾಣದಲ್ಲಿನ ವ್ಯತ್ಯಾಸ ಮತ್ತು ವಿವಿಧ ಪರಿಸರ ಪರಿಸ್ಥಿತಿಗಳು ಸೇರಿದಂತೆ ಹಲವು ಅಂಶಗಳ ಸಂಯೋಜನೆಯಿಂದ ಈ ಪರಿಸ್ಥಿತಿಯನ್ನು ವಿವರಿಸಬಹುದು.

10. ಪ್ರಸರಣದ ಇತರ ಪ್ರಬಲ ಮಾರ್ಗಗಳನ್ನು ಬೆಂಬಲಿಸಲು ಸೀಮಿತ ಪುರಾವೆಗಳಿವೆ. ಅಂದರೆ, ಉಸಿರಾಟದ ಹನಿ ಅಥವಾ ಫೋಮೈಟ್ ಪ್ರಸರಣ ಬೆಂಬಲಿಸಲು ಸಿಮೀತ ಆಧಾರಗಳಿವೆ.


ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...