ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, “ಮೊದಲ ತಿಂಗಳಿನಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಸದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚುನಾವಣಾ ಪೂರ್ವ ಬಿಡುಗಡೆ ಮಾಡಿದ ತಮ್ಮ ಪ್ರಣಾಳಿಕೆಯಲ್ಲಿ, ಬಿಹಾರದ ಯುವಜನೆತೆಗೆ 19 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಇದನ್ನು ನೆನಪಿಸಿದ ತೇಜಸ್ವಿ ಯಾದವ್ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಬಿಹಾರ ರಾಜ್ಯವು ದೇಶದ ನಿರುದ್ಯೋಗದ ರಾಜಧಾನಿಯಾಗಿದೆ. ಸಾರ್ವಜನಿಕರು ಇನ್ನೂ ಕಾಯಲು ಸಾಧ್ಯವಿಲ್ಲ. ಅವರು ಮೊದಲ ತಿಂಗಳಿನಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಸಲು ವಿಫಲವಾದರೆ, ರಾಜ್ಯದಾದ್ಯಂತ ತೀವ್ರವಾದ ಪ್ರತಿಭಟನೆಯನ್ನು ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ನಿಜವಾದ ವಿಜೇತ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್: ಶಿವಸೇನೆ
Bihar has become the unemployment capital of the country. The public can't wait anymore. If they are unable to provide 19 lakh jobs in the first month, then we will join the public in protests across the state: Tejashwi Yadav, RJD Leader pic.twitter.com/FYh4aLflZk
— ANI (@ANI) November 23, 2020
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಎನ್‌ಡಿಎ ಮೈತ್ರಿಕೂಟಕ್ಕೆ ತೀವ್ರ ಪೈಪೋಟಿ ನೀಡಿದ ಆರ್‌ಜೆಡಿ ಪಕ್ಷದ ಮುಖಂಡ ತೇಜಸ್ವಿ ಯಾದವ್ ಬಿಹಾರ ವಿರೋಧ ಪಕ್ಷದ ನಾಯಕನಾಗಬಾರದು ಎಂದು ಜೆಡಿಯು ನಿನ್ನೆ ಆಗ್ರಹಿಸಿತ್ತು.
ಇದನ್ನೂ ಓದಿ: ತೇಜಸ್ವಿ ಯಾದವ್ ತುಂಬಾ ಒಳ್ಳೆಯ ಹುಡುಗ, ಮುಂದೆ ಬಿಹಾರವನ್ನು ಮುನ್ನಡೆಸಬಹದು: ಉಮಾ ಭಾರತಿ
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆದ ಮೊದಲ ದೊಡ್ಡ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ಉಂಟಾಗಿತ್ತು. ಇದಕ್ಕೆ ಪ್ರಭಲ ಪೈಪೋಟಿ ನೀಡಿದ್ದ ಮಹಾಘಟಬಂಧನ್ ಅಂಚಿನಲ್ಲಿ ಸೋತಿದೆ. ರಾಜ್ಯದ ಅತಿದೊಡ್ಡ ಪಕ್ಷವಾಗಿ ಆರ್‌ಜೆಡಿ ಹೊರಹೊಮ್ಮಿದೆ.
ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷವು 75 ಸ್ಥಾನಗಳನ್ನು ಗೆದ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಬಿಜೆಪಿಯು 74 ಸ್ಥಾನಗಳನ್ನು ಗೆದ್ದುಕೊಂಡಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಕೇವಲ 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಎನ್‌ಡಿಎ ಮೈತ್ರಿ ಪಕ್ಷವು 125 ಸ್ಥಾನಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?


