Homeಮುಖಪುಟಬಿಹಾರದಲ್ಲಿ ನಿಜವಾದ ವಿಜೇತ ಆರ್‌‌ಜೆಡಿ ನಾಯಕ ತೇಜಸ್ವಿ ಯಾದವ್: ಶಿವಸೇನೆ

ಬಿಹಾರದಲ್ಲಿ ನಿಜವಾದ ವಿಜೇತ ಆರ್‌‌ಜೆಡಿ ನಾಯಕ ತೇಜಸ್ವಿ ಯಾದವ್: ಶಿವಸೇನೆ

ಚಿರಾಗ್ ಪಾಸ್ವಾನ್ ಅವರ ಅಭಿಯಾನವು ನಿತೀಶ್ ಕುಮಾರ್ ವಿರುದ್ಧವಾಗಿದ್ದರೂ ಕೂಡಾ, ಪ್ರಧಾನಿ ಮೋದಿ ಎಂದಿಗೂ ಚಿರಾಗ್ ಪಾಸ್ವಾನ್ ಅವರೊಂದಿಗೆ ಈ ಬಗ್ಗೆ ಮಾತನಾಡಲಿಲ್ಲ ಎಂದು ಶಿವಸೇನೆ ಸೂಚಿಸಿದೆ

- Advertisement -
- Advertisement -

ಸಂಖ್ಯಾಶಾಸ್ತ್ರೀಯ ಆಟದಲ್ಲಿ, ಎನ್‌ಡಿಎ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿರಬಹುದು ಆದರೆ ನಿಜವಾದ ವಿಜೇತ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಆಗಿದ್ದಾರೆ, ಅವರ ಪಕ್ಷವು ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಶಿವಸೇನೆ ತಿಳಿಸಿದೆ .

ಶಿವಸೇನೆ, ಪಕ್ಷದ ಮುಖವಾಣಿ ಸಾಮ್ನಾ ಮೂಲಕ, “ಬಿಹಾರದ ನಾಯಕತ್ವವು ಅಂತಿಮವಾಗಿ ಬಿಜೆಪಿ ಕೈಗೆ ಸಿಕ್ಕಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಬಿಹಾರದಲ್ಲಿ ಬಿಜೆಪಿ ದೊಡ್ಡ ಜಯ ಸಾಧಿಸಿದೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣ. ಅಂಕಿಅಂಶಗಳ ಆಟದಲ್ಲಿ, ’ಎನ್‌ಡಿಎ’ ವಿಜಯಶಾಲಿಯಾಗಿದೆ ಆದರೆ ನಿಜವಾದ ವಿಜೇತ 31 ವರ್ಷದ ತೇಜಶ್ವಿ ಯಾದವ್” ಎಂದು ಹೇಳಿದೆ.

ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

“ತೇಜಸ್ವಿಯ ರಾಷ್ಟ್ರೀಯ ಜನತಾದಳ ಪಕ್ಷವು ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಸಾಬೀತಾಯಿತು. ಬಿಜೆಪಿಗೆ ಈ ಅದೃಷ್ಟವನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಅಧಿಕಾರವನ್ನು ಉಳಿಸಿದ ಸಂತೋಷವನ್ನು ಆಚರಿಸಬಹುದು ಆದರೆ ಗೆಲುವು ತೇಜಶ್ವಿ ಯಾದವ್ ಅವರ ತಲೆಯ ಮೇಲಿದೆ” ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

243 ಶಾಸಕರಿರುವ ವಿಧಾನ ಸಭೆಯಲ್ಲಿ, ಎನ್‌ಡಿಎಗೆ 125 ಸ್ಥಾನಗಳು ದೊರೆತಿದೆ, ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಗೆಲುವು ಎಷ್ಟು ಉತ್ತಮವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಅದು ಹೇಳಿದೆ.

“ತೇಜಶ್ವಿ ಯಾದವ್ ಅವರ ಮಹಾಘಟಬಂಧನ್ 110 ಸ್ಥಾನಗಳನ್ನು ಪಡೆದಿದ್ದಾರೆ. ಮತ ಎಣಿಕೆಯ ಕೊನೆಯ ಹಂತದಲ್ಲಿ ಕೆಲವು ಕ್ಷೇತ್ರಗಳಲ್ಲಿ ಮತಗಳನ್ನು ತಿರುಚಲಾಗಿದೆ ಎಂದು ತೇಜಸ್ವಿ ಅವರ ಪಕ್ಷ ಆರೋಪಿಸಿದೆ. ಆರ್‌‌ಜೆಡಿ 119 ವಿಜೇತ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದು, ಆದರೆ ಚುನಾವಣಾ ಅಧಿಕಾರಿಗಳು ನಿತೀಶ್  ಕುಮಾರ್‌ ಸೂಚನೆಗಳನ್ನು ಅನುಸರಿಸುತ್ತಿದ್ದಾರೆ ಎಂದು ತೇಜಶ್ವಿ ಯಾದವ್ ಆರೋಪಿಸಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಾರೆ, ಆದರೆ ಜನರ ನಡುವಿನ ಟ್ರೆಂಡ್ ಏನು?” ಎಂದು ಶಿವಸೇನೆ ಬಿಹಾರದ ಜನತೆ ತೇಜಸ್ವಿ ಯಾದವ್ ಪರ ಇದ್ದಾರೆ ಎಂದು ಸೂಚಿಸಿದೆ.

ಇದನ್ನೂ ಓದಿ: ಬಿಹಾರ: ನಿತೀಶ್ ಪಕ್ಷವನ್ನು ಸೋಲಿಸುವುದೇ ನನ್ನ ಗುರಿಯಾಗಿತ್ತು- ಚಿರಾಗ್ ಪಾಸ್ವಾನ್!

“ಸ್ಪಷ್ಟವಾಗಿ ಹೇಳುವುದಾದರೆ, ಬಿಹಾರದಲ್ಲಿ ಈ ಎರಡು ವಿರುದ್ಧ ಮನಸ್ಸಿನ ಪಕ್ಷಗಳಾದ ಬಿಜೆಪಿ ಮತ್ತು ರಾಷ್ಟ್ರೀಯ ಜನತಾದಳ ಯಶಸ್ಸು ಗಳಿಸಿವೆ. ಇದರಲ್ಲಿ ನಿತೀಶ್ ಕುಮಾರ್ ಮತ್ತು ಅವರ ಪಕ್ಷ ಎಲ್ಲಿಯೂ ಕಾಣುವುದಿಲ್ಲ. ಜನರು ನಿತೀಶ್ ಕುಮಾರ್ ಅವರನ್ನು ತಿರಸ್ಕರಿಸಿದ್ದಾರೆ, ಆದರೆ ಅವರು ಮುಖ್ಯಮಂತ್ರಿ ಹುದ್ದೆಯತ್ತ ಹೊರಟಿದ್ದಾರೆ, ಇದು ಜನಾಭಿಪ್ರಾಯಕ್ಕೆ ಮಾಡುವ ಅವಮಾನ” ಎಂದು ಶಿವಸೇನೆ ಹೇಳಿದೆ.

ಜೆಡಿಯು ಅಭ್ಯರ್ಥಿಗಳ ವಿರುದ್ಧ ನಿಂತಿದ್ದ ಎಲ್‌ಜೆಪಿ ಅಭ್ಯರ್ಥಿಗಳಿಂದಾಗಿ ನಿತೀಶ್ ಕುಮಾರ್ ಅವರ ಇಪ್ಪತ್ತು ಅಭ್ಯರ್ಥಿಗಳು ಸೋಲನ್ನು ಎದುರಿಸಬೇಕಾಯಿತು.

“ಚಿರಾಗ್ ಪಾಸ್ವಾನ್ ಅವರ ಅಭಿಯಾನವು ನಿತೀಶ್ ಕುಮಾರ್ ವಿರುದ್ಧವಾಗಿದ್ದರೂ ಕೂಡಾ, ಪ್ರಧಾನಿ ಮೋದಿ ಎಂದಿಗೂ ಚಿರಾಗ್ ಪಾಸ್ವಾನ್ ಅವರೊಂದಿಗೆ ಈ ಬಗ್ಗೆ ಮಾತನಾಡಲಿಲ್ಲ ಮತ್ತು ಚಿರಾಗ್ ಇನ್ನೂ ಎನ್‌ಡಿಎಯ ಮಿತ್ರರಾಗಿದ್ದಾರೆ” ಎಂದಿರುವ ಶಿವಸೇನೆ ಜೆಡಿಯು ಸೋಲಿಗೆ ಬಿಜೆಪಿ ತಂತ್ರ ರೂಪಿಸಿತ್ತು ಎಂದು ಸೂಚಿಸಿದೆ.

2020 ರ ಬಿಹಾರ ಚುನಾವಣೆಯ 243 ಸ್ಥಾನಗಳಲ್ಲಿ 125 ಸ್ಥಾನಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಪಡೆದಿದ್ದರೆ, 110 ಸ್ಥಾನಗಳಲ್ಲಿ ಪ್ರತಿಸ್ಪರ್ಧಿ ಮಹಾಘಟಬಂಧನ್ ಪಡೆಯಿತು. ಇದರಲ್ಲಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳವು 75 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಇದನ್ನೂಓದಿ: ಬಿಹಾರ ಫಲಿತಾಂಶ: ಜನ ಕೆಲವೊಮ್ಮೆ ಎರಡನೇ ಅವಕಾಶ ನೀಡುತ್ತಾರೆ- ಸೋನು ಸೂದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...