Homeಎಕಾನಮಿಆತ್ಮನಿರ್ಭರ ಭಾರತ: ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸಿದ ನಿರ್ಮಲಾ ಸೀತಾರಾಮನ್

ಆತ್ಮನಿರ್ಭರ ಭಾರತ: ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸಿದ ನಿರ್ಮಲಾ ಸೀತಾರಾಮನ್

'ಆತ್ಮನಿರ್ಭರ್ ಭಾರತ್ ರೋಜ್‌ ಗಾರ್ ಯೋಜನೆ'ಯನ್ನು ಘೋಷಣೆ ಮಾಡಿ, ಹೊಸ ಉದ್ಯೋಗ ಸೃಷ್ಟಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದರು.

- Advertisement -
- Advertisement -

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಆತ್ಮನಿರ್ಭರತೆಯ ಭಾಗವಾಗಿ (3.0) ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸಿ, ಭಾರತದ ಆರ್ಥಿಕತೆಯಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆತ್ಮನಿರ್ಭರ್ ಭಾರತ್ ರೋಜ್‌ ಗಾರ್ ಯೋಜನೆ’ಯನ್ನು ಘೋಷಣೆ ಮಾಡಿ, “ಹೊಸ ಉದ್ಯೋಗ ಸೃಷ್ಟಿಗೆ ಈ ಯೋಜನೆ ಸಹಕಾರಿಯಾಗಲಿದೆ. ಹೊಸ ಯೋಜನೆಯಲ್ಲಿ ನೌಕರರಿಗೆ ಇಪಿಎಫ್ ಸೌಲಭ್ಯ ಸಿಗಲಿದೆ. ಮಾರ್ಚ್‌ನಿಂದ ಸೆಪ್ಟಂಬರ್ ಒಳಗೆ ಕೆಲಸ ಕಳೆದುಕೊಂಡವರಿಗೂ ಇಪಿಎಫ್ ಸೌಲಭ್ಯ ಸಿಗಲಿದೆ” ಎಂದು ಹೇಳಿದರು.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ!

ಕೊರೊನಾ ಬಿಕ್ಕಟ್ಟಿನ ನಡುವೆ ಕುಸಿದಿದ್ದ ಆರ್ಥಿಕತೆಯನ್ನು ಮೇಲೆತ್ತಲು ಈಗಾಗಲೇ ಕೈಗೊಂಡಿರುವ ಕ್ರಮಗಳನ್ನು ಉತ್ತೇಜಿಸಲು ಹೊಸ ಕ್ರಮಗಳನ್ನು ಘೋಷಿಸಿ, ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ಆರ್ಥಿಕತೆಯಲ್ಲಿ ವಿಶಿಷ್ಟ ಚೇತರಿಕೆಯನ್ನು ಬಿಂಬಿಸುವ ಕೆಲವು ಸೂಚಕಗಳು ಇವೆ” ಎಂದು ಹೇಳಿದರು.

ದೇಶದಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, “ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷದಿಂದ 4.89 ಲಕ್ಷಕ್ಕೆ ಇಳಿಕೆಯಾಗಿದೆ. ಒಟ್ಟು ಸಾವಿನ ಪ್ರಮಾಣವು ಶೇಕಡ 1.47 ರಷ್ಟಿದೆ” ಎಂದು ಹೇಳಿದರು.

ಇದನ್ನೂ ಓದಿ: ಭಾರತವು ವಿಶ್ವದ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲು ಇನ್ನೂ 30 ವರ್ಷ ಬೇಕು: ಅಧ್ಯಯನ

ಇದರ ನಡುವೆಯೇ, 2020ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಸಕಾರಾತ್ಮಕ ಬೆಳವಣಿಗೆಗೆ ಮರಳುವ ಸಾಧ್ಯತೆಯಿದೆ ಎಂದು ಆರ್‌ಬಿಐ ಊಹಿಸಿ ಹೇಳಿಕೆ ನೀಡಿದೆ.

ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿಯು ಶೇಕಡಾ 8.6 ರಷ್ಟು ಕುಗ್ಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ಅಧಿಕಾರಿಯೊಬ್ಬರು ಈ ಹಿಂದೆ ಪಿಟಿಐಗೆ ತಿಳಿಸಿದ್ದರು.

ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?

ಆರ್ಥಿಕತೆಯ ಚೇತರಿಕೆಯ ಸೂಚಕಗಳ ಕುರಿತು ಕೆಲವು ವಿವರಗಳು:

  • ಸಂಯೋಜಿತ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಅಕ್ಟೋಬರ್‌ನಲ್ಲಿ ಶೇ 58.9 ಕ್ಕೆ ಏರಿದ್ದು, ಹಿಂದಿನ ತಿಂಗಳಲ್ಲಿ ಇದು 54.6 ರಷ್ಟಿತ್ತು. ಇದು ಕಳೆದ ಒಂಬತ್ತು ವರ್ಷಗಳಲ್ಲಿ ಉತ್ಪಾದನೆಯಲ್ಲಿ ಪ್ರಬಲ ಹೆಚ್ಚಳವನ್ನು ದಾಖಲಿಸಿದೆ.
  • ಇಂಧನ ಬಳಕೆಯ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಶೇ 12 ಕ್ಕೆ ಏರಿಕೆಯಾಗುತ್ತಿದ್ದು, ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಶೇಕಡಾ 10 ರಷ್ಟು ಏರಿಕೆಯಾಗಿ 1.05 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.
  • ದೈನಂದಿನ ರೈಲ್ವೆ ಸರಕು ಸಾಗಣೆ ವರ್ಷದಿಂದ ವರ್ಷಕ್ಕೆ ಸರಾಸರಿ 20 ಶೇಕಡ ಮತ್ತು 12 ಪ್ರತಿಶತದಷ್ಟು ಹೆಚ್ಚಾಗಿದೆ. ಬ್ಯಾಂಕ್ ಸಾಲವನ್ನು 5.1 ಶೇಕಡಾ ಸುಧಾರಿಸಿದೆ.
  • ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಒಳಹರಿವು ಏಪ್ರಿಲ್-ಆಗಸ್ಟ್‌ನಲ್ಲಿ 35.37 ಬಿಲಿಯನ್ ಡಾಲರ್‌ಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 13 ರಷ್ಟು ಏರಿಕೆ ಕಂಡಿದೆ.
  • ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಯಶಸ್ವಿಯಾಗಿದೆ. ಸ್ವನಿಧಿ ಯೋಜನೆಯಡಿ 26.26 ಕೋ.ರೂ. ಸಾಲ ನೀಡಲಾಗಿದೆ ಎಂದಿರುವ ನಿರ್ಮಲಾ ದೇಶ ಅಭಿವೃದ್ಧಿಯತ್ತ ಸಾಗಿದೆ.
  • ಬೀದಿಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿ ಯೋಜನೆ ಸಾಲ ನೀಡಲಾಗಿದೆ. 26.62 ಲಕ್ಷ ಅರ್ಜಿಗಳು ಬಂದಿದ್ದವು. ಈವರೆಗೆ ಒಟ್ಟು 1373 ಕೋಟಿ ರೂ.ಸಾಲ ನೀಡಲಾಗಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಪೋರ್ಟಲ್ ತಯಾರು ಮಾಡುತ್ತಿದ್ದು, ಇದಕ್ಕೆ ರಾಜ್ಯ ಸರಕಾರಗಳ ಸಹಾಯ ಪಡೆಯುತ್ತಿದ್ದೇವೆ.

ಈಗಾಗಲೇ ಘೋಷಿಸಿರುವ ಯೋಜನೆಗಳೇ ಇನ್ನೂ ಜನಸಾಮಾನ್ಯರನ್ನು ತಲುಪಿಲ್ಲ. ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಏನಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಹಿಂದೆ ಆರ್‌ಬಿಐ ಉಪ ಗವರ್ನರ್ ಮಾತನಾಡಿ, ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲು ಇನ್ನೂ ಕೆಲವು ವರ್ಷಗಳೇ ಬೇಕಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹೀಗಿರುವಾಗ ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ. ಆದರೆ ಈ ಅಂಕಿ ಅಂಶಗಳಲ್ಲಿನ ಬದಲಾವಣೆ ದೇಶದ ಕಟ್ಟಕಡೆಯ ವ್ಯಕ್ತಿಯ ಜೀವನಮಟ್ಟದಲ್ಲಿ ಯಾವುದೇ ಗುರುತರವಾದ ಬದಲಾವಣೆಯನ್ನು ತರಲಾರದು ಎನ್ನುವುದಂತೂ ಖಚಿತ.


ಇದನ್ನೂ ಓದಿ: ಕೊರೊನಾ ಪ್ಯಾಕೇಜ್‌ ಅಸಮರ್ಪಕ, ದೇಶದ ಆರ್ಥಿಕತೆ ಕುಸಿಯುತ್ತಿದೆ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...