ಬಿಜೆಪಿ ಪಕ್ಷವು ಬೆಳಿಗ್ಗೆ ತಾನೇ ತಮ್ಮ ಪಕ್ಷಕ್ಕೆ ಸೇರಿದ 13 ಜನ ಅನರ್ಹ ಶಾಸಕರಿಗೆ ಟಿಕೆಟ್ ನೀಡಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಶಿವಾಜಿನಗರದಿಂದ ರೋಷನ್ ಬೇಗ್ ಮತ್ತು ರಾಣಿಬೆನ್ನೂರಿನ ಆರ್. ಶಂಕರ್ ರವರ ಹೆಸರು ಸೇರಿಸದೇ ಅಚ್ಚರಿ ಮೂಡಿಸಿದೆ.
ರೋಷನ್ ಬೇಗ್ ಐಎಂಎ ಕೇಸಿನಲ್ಲಿರುವುದು ಕಾರಣವಾದರೆ, ರಾಣಿಬೆನ್ನೂರಿನಲ್ಲಿ ಕೆ.ಎಸ್ ಈಶ್ವರಪ್ಪ ಶತಾಯಗತಾಯ ತನ್ನ ಮಗನನ್ನು ಕಣಕ್ಕಿಳಿಸಲು ಒತ್ತಾಯ ಮಾಡಿರುವುದು ಕಾರಣವಿರಬಹುದೆಂದು ಹೇಳಲಾಗುತ್ತಿದೆ. ಉಳಿದಂತೆ ಇನ್ನ 13 ಕ್ಷೇತ್ರಗಳ ಪಟ್ಟಿ ಕೆಳಗಿನಂತಿದೆ.

1 ಕಾಗವಾಡ- ಶ್ರೀಮಂತಗೌಡ ಪಾಟಿಲ
2. ಗೋಕಾಕ್- ರಮೇಶ್ ಜಾರಕಿಹೊಳಿ
3. ಅಥಣಿ- ಮಹೇಶ್ ಕುಮಟಳ್ಳಿ
4. ಹೊಸಪೇಟೆ (ವಿಜಯನಗರ) – ಆನಂದ್ ಸಿಂಗ್
5. ಕೆ ಆರ್ ಪುರಂ – ಭೈರತಿ ಬಸವರಾಜು
6. ಯಶವಂತಪುರ – ಎಸ್.ಟಿ ಸೋಮಶೇಖರ್
7. ಮಹಾಲಕ್ಷ್ಮಿಲೇಔಟ್ – ಕೆ. ಗೋಪಾಲಯ್ಯ
8. ಕೆ.ಆರ್.ಪೇಟೆ – ನಾರಾಯಣಗೌಡ
9. ಹಿರೇಕೆರೂರು – ಬಿ.ಸಿ ಪಾಟೀಲ್
10. ಹುಣಸೂರು – ಎಚ್.ವಿಶ್ವನಾಥ್
11. ಹೊಸಕೋಟೆ – ಎಂ.ಟಿ.ಬಿ ನಾಗರಾಜ್
12. ಚಿಕ್ಕಬಳ್ಳಾಪುರ – ಡಾ. ಕೆ ಸುಧಾಕರ್
13. ಯಲ್ಲಾಪುರ – ಶಿವರಾಮ ಹೆಬ್ಬಾರ್
ಇದನ್ನೂ ಓದಿ: ಉಪಚುನಾವಣೆ: 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್


