ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ಬಜರಂಗದಳ ಮತ್ತು ವಿಎಚ್‌ಪಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಪೊಲೀಸರು ಸೋಮವಾರ ಮಾಧ್ಯಮಗಳೊಂದಿಗೆ ಅಧೀಕೃತವಾಗಿ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯನ್ನು ಕೆಲವೇ ಗಂಟೆಗಳಲ್ಲಿ ಅವರು ಹಿಂಪಡೆದಿದ್ದಾರೆ ಎಂದು DH ವರದಿ ಮಾಡಿದೆ.
ಹನುಮ ಜಯಂತಿ ಮೆರವಣಿಗೆಯ ನಂತರ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಶನಿವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರಕರಣವನ್ನು ದಾಖಲಿಸಿದ್ದರು. ಜೊತೆಗೆ ಅನುಮತಿ ಪಡೆಯದೆ ಮೆರವಣಿಗೆ ನಡೆಸಿದ್ದಕ್ಕೆ ಮೂರನೇ ಪ್ರಕರಣವನ್ನು ದಾಖಲಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರಂಭದಲ್ಲಿ, ಅನುಮತಿಯನ್ನು ಪಡೆಯದೆ ಮೆರವಣಿಗೆ ಮಾಡಿದ್ದಕ್ಕಾಗಿ ಮೆರವಣಿಗೆಯ ‘ಆಯೋಜಕರ’ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188 (ಸಾರ್ವಜನಿಕ ಸೇವಕನ ಆದೇಶಗಳನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆಯಲ್ಲಿ ಸಂಘಟಕರನ್ನು ಬಿಜಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ಎಂದು ಗುರುತಿಸಿತ್ತು.
ಇದನ್ನೂ ಓದಿ: ದೆಹಲಿ ಹನುಮ ಜಯಂತಿ ಘರ್ಷಣೆ: ಎರಡೂ ಸಮುದಾಯಗಳ 23 ಆರೋಪಿಗಳ ಬಂಧನ
ಪೊಲೀಸ್ ಹೇಳಿಕೆಯಲ್ಲಿ, “ದೆಹಲಿ ಪ್ರಾಂತ, ಮುಖರ್ಜಿ ನಗರ ಜಿಲ್ಲಾ, ಝಾಂಡೇವಾಲಾದ ವಿಎಚ್‌ಪಿ ಮತ್ತು ಬಜರಂಗದಳದವರು ಯಾವುದೇ ಅನುಮತಿಯಿಲ್ಲದೆ ಮೆರವಣಿಗೆ ಆಯೋಜಿಸಿದ್ದರು” ಎಂದು ಉಲ್ಲೇಖಿಸಿದ್ದಾರೆ. “ವಿಎಚ್‌ಪಿ ಜಿಲ್ಲಾ ಸೇವಾ ಪ್ರಮುಖ್ ಎಂಬ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ” ಎಂದೂ ಅದು ಹೇಳಿಕೆಯಲ್ಲಿ ತಿಳಿಸಿತ್ತು.
ಆದರೆ, ಕೆಲವೇ ಗಂಟೆಗಳಲ್ಲಿ, ಪೋಲೀಸರು ಹೇಳಿಕೆಯನ್ನು ಪರಿಷ್ಕರಿಸಿದ್ದು, ಸಂಘಟನೆಗಳು ಮತ್ತು ಬಂಧನದ ಬಗ್ಗೆಗಿನ ಉಲ್ಲೇಖವನ್ನು ಕೈಬಿಟ್ಟಿದ್ದಾರೆ. “ಯಾವುದೇ ಅನುಮತಿಯಿಲ್ಲದೆ (16/04/22 ರಂದು ಸಂಜೆ ಪಿಎಸ್ ಜಹಾಂಗೀರ್ಪುರಿ ಪ್ರದೇಶದಲ್ಲಿ) ಮೆರವಣಿಗೆಯನ್ನು ನಡೆಸಿದ್ದಕ್ಕಾಗಿ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಹೊಸ ಹೇಳಿಕೆ ತಿಳಿಸಿದೆ. “ಒಬ್ಬ ಆರೋಪಿ ತನಿಖೆಗೆ ಸೇರಿಕೊಂಡಿದ್ದಾನೆ” ಎಂದು ಅದು ಹೇಳಿದೆ.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪರಿಷ್ಕೃತ ಹೇಳಿಕೆ ತಿಳಿಸಿದೆ. ಏಪ್ರಿಲ್ 16 ರ ಬೆಳಿಗ್ಗೆ ಮತ್ತು ಮಧ್ಯಾಹ್ನ ಜಹಾಂಗೀರ್‌ಪುರಿಯಲ್ಲಿ ಸರಿಯಾದ ಅನುಮತಿಯೊಂದಿಗೆ ನಡೆಸಲಾದ ಇತರ ಎರಡು ಮೆರವಣಿಗೆಗಳನ್ನು ಸಹ ಇದು ಉಲ್ಲೇಖಿಸಿದೆ.
ಇದನ್ನೂ ಓದಿ: ಕೇಜ್ರಿವಾಲ್ ಅವರ ನಕಲಿ ವಿಡಿಯೋ ಪ್ರಸಾರ: ದೆಹಲಿ ಬಿಜೆಪಿ ನಾಯಕನ ಮನೆಯಲ್ಲಿ ಪಂಜಾಬ್ ಪೊಲೀಸರು!
ಶನಿವಾರದಂದು ಕಟ್ಟುನಿಟ್ಟಾದ ಸೆಕ್ಷನ್ 307 (ಕೊಲೆಗೆ ಯತ್ನ), 120 ಬಿ (ಕ್ರಿಮಿನಲ್ ಪಿತೂರಿ), 147 (ಗಲಭೆ) ಮತ್ತು ಇತರ ಸಂಬಂಧಿತ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾದ ಮೊದಲ ಪ್ರಕರಣದಲ್ಲಿ 21 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಇಬ್ಬರು ಅಪ್ರಾಪ್ತರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ.
ಅನುಮತಿಯಿಲ್ಲದೆ ಈ ಪ್ರದೇಶದಲ್ಲಿ ಮೆರವಣಿಗೆ ಸಾಗಲು ಹೇಗೆ ಸಾಧ್ಯ ಎಂಬುದಕ್ಕೆ ಪೊಲೀಸರು ಈಗ ಉತ್ತರಿಸಬೇಕಾಗಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅದರಲ್ಲೂ ಕನಿಷ್ಠ ಎರಡು ಪೋಲೀಸ್ ಜೀಪ್‌ಗಳು ಮೆರವಣಿಗೆಯ ಜೊತೆಯಲ್ಲಿರುತ್ತವೆ, ಒಟ್ಟು ಮೂರು ಮೆರವಣಿಗೆಗಳು ನಡೆದವು, ಮೂರನೆಯದ್ದು, ವಿಎಚ್‌ಪಿ ಮತ್ತು ಬಜರಂಗ ದಳದ ಮೆರವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮೆರವಣಿಗೆಯಲ್ಲಿದ್ದವರು ಕತ್ತಿ ಮತ್ತು ಬೇಸ್‌ಬಾಲ್ ಬ್ಯಾಟ್‌ಗಳನ್ನು ಹಿಡಿದುಕೊಂಡಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗುತ್ತಿರುವ ವೀಡಿಯೊಗಳಲ್ಲಿ ಬಹಿರಂಗವಾಗಿದೆ. ಕೆಲವರು ನಾಡ ಪಿಸ್ತೂಲ್‌ಗಳನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ ಎಂದು ಎಡಪಕ್ಷಗಳ ಸತ್ಯಶೋಧನಾ ತಂಡ ಸೋಮವಾರ ಹೇಳಿದೆ. “ಇದರ ನಂತರ ಅಲ್ಪಸಂಖ್ಯಾತ ಸಮುದಾಯದ ಕೆಲವು ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ತಂದಿದ್ದಾರೆ” ಎಂದು ತಂಡವು ಹೇಳಿದೆ.
ಇದನ್ನೂ ಓದಿ: ಎಎಪಿ ದಿಗ್ವಿಜಯಕ್ಕೆ ಹೆದರಿ, ದೆಹಲಿ ಮುನ್ಸಿಪಾಲ್ ಚುನಾವಣೆ ಮುಂದೂಡಲು ಬಯಸುತ್ತಿದೆಯೇ ಬಿಜೆಪಿ?
ಮೂರನೇ ಮೆರವಣಿಗೆಯ ಸದಸ್ಯರು ಪ್ರಾರ್ಥನೆಯ ಸಮಯದಲ್ಲಿ ಮಸೀದಿಯ ಮುಂದೆ ಮೆರವಣಿಗೆಯನ್ನು ನಿಲ್ಲಿಸಿ, ಅವರು ನುಡಿಸುತ್ತಿದ್ದ ಸಂಗೀತದ ಪ್ರಮಾಣವನ್ನು ಹೆಚ್ಚಿಸಿದರು ಎಂದು ಸ್ಥಳೀಯರು ಹೇಳಿದ್ದಾರೆ. ಮಸೀದಿಯ ಗೋಡೆಯ ಮೇಲೆ ಧ್ವಜ ಹಾರಿಸುವ ಯತ್ನ ನಡೆದಿದೆ ಎಂದು ಸ್ಥಳೀಯರು ಹೇಳಿದರೆ, ಪೊಲೀಸರು ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.



People can collect Money from Public is nothing but a Fraud….