Homeಮುಖಪುಟಪ್ರತಿಭಟನಾ ನಿರತ ರೈತರಿಗೆ ನೆರಳು ನೀಡುತ್ತಿದ್ದ ಮರಗಳ ಕೊಂಬೆ ಕತ್ತರಿಸಿದ ಬಿಜೆಪಿ ಸರ್ಕಾರ!

ಪ್ರತಿಭಟನಾ ನಿರತ ರೈತರಿಗೆ ನೆರಳು ನೀಡುತ್ತಿದ್ದ ಮರಗಳ ಕೊಂಬೆ ಕತ್ತರಿಸಿದ ಬಿಜೆಪಿ ಸರ್ಕಾರ!

‘ಚಕ್ರವರ್ತಿ ಬೆತ್ತಲಾಗಿದ್ದಾನೆ’ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ

- Advertisement -
- Advertisement -

ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ಒಕ್ಕೂಟ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕರ್ನಲ್‌ನಲ್ಲಿ ಇತ್ತೀಚೆಗೆ ರೈತರ ಮೇಲೆ ಹಲ್ಲೆ ನಡೆಸಿದ್ದ ಹರಿಯಾಣದ ಮನೋಹರ್‌‌ಲಾಲ್‌ ಕಟ್ಟರ್‌ ಸರ್ಕಾರದ ವಿರುದ್ದವು ರೈತರು ಹೋರಾಟಕ್ಕೆ ವೇದಿಕೆ ಸಿದ್ದಗೊಳಿಸಿದ್ದಾರೆ. ಕಳೆದ ಕೆಲವು ದಿನದಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟದ ಮಾದರಿಯಲ್ಲಿ ರಾಜ್ಯದ ಕರ್ನಲ್‌ ಜಿಲ್ಲಾ ಕೇಂದ್ರವನ್ನು ರೈತರು ಶಾಶ್ವತ ರೈತ ಹೋರಾಟದ ಸ್ಥಳವನ್ನಾಗಿ ಮಾಡಿದ್ದಾರೆ.

ರೈತರು ಕರ್ನಲ್‌ನ ಮಿನಿ ಸೆಕ್ರೆಟರಿಯೇಟ್‌ನ ಹೊರಗೆ ಹೋರಾಟ ಮಾಡುತ್ತಿದ್ದಾರೆ. ಈ ವೇಳೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸೆಕ್ರಟರಿಯೇಟ್‌ನ ಹೊರಗೆ ಇರುವ ಮರಗಳನ್ನು ರೈತರು ನೆರಳಿಗಾಗಿ ಆಶ್ರಯಿಸಿದ್ದರು. ಆದರೆ ಗುರುವಾರ ರಾತ್ರಿ ಈ ಮರಗಳ ಕೊಂಬೆಗಳನ್ನು ಸರ್ಕಾರ ಕತ್ತರಿಸಿದೆ ಎಂದು ವರದಿಯಾಗಿದೆ. ಈ ಮೂಲಕ, ಸಾಧ್ಯವಿರುವ ಎಲ್ಲಾ ದಾರಿಯ ಮುಖಾಂತರ ರೈತರನ್ನು ಮಣಿಸಲು ಸರ್ಕಾರ ಹೊರಟಿದೆ ಎಂದು ಸಾಬೀತುಪಡಿಸಿದೆ.

ಇದನ್ನೂ ಓದಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’

ಹೋರಾಟಗಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ‘ಚಕ್ರವರ್ತಿ ಬೆತ್ತಲಾಗಿದ್ದಾನೆ’ ಎಂದು ಕಿಡಿ ಕಾರಿದ್ದಾರೆ.

“ರೈತರು ಮತ್ತು ಪೊಲೀಸರು ಕರ್ನಾಲ್‌ನ ಮಿನಿ ಸೆಕ್ರೆಟರಿಯೇಟ್‌ ಹೊರಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರಗಳ ಕೆಳಗೆ ಕುಳಿತುಕೊಳ್ಳುತ್ತಿದ್ದರು. ರೈತರಿಗೆ ಕಷ್ಟಕರವಾಗಲು ಹರಿಯಾಣ ಆಡಳಿತವು ಮರದ ಕೊಂಬೆಗಳನ್ನು ಕತ್ತರಿಸಿದೆ. ನಿನ್ನೆ ರಾತ್ರಿ ಆ ಮರಗಳ ಕೊಂಬೆಗಳನ್ನು ಕತ್ತರಿಸಲಾಗಿದೆ ಎಂದು ವರದಿಯಾಗಿದೆ. ಚಕ್ರವರ್ತಿ ಬೆತ್ತಲಾಗಿದ್ದಾನೆ” ಎಂದು ರೈತ ಹೋರಾಟಗಳನ್ನು ನಿರಂತರವಾಗಿ ವರದಿ ಮಾಡುತ್ತಿರುವ ಹೋರಾಟಗಾರ ಸಂದೀಪ್‌ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಅವರು ಅಲ್ಲಿನ ವಿಡಿಯೋಗಳನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿ V/s ಬಿಜೆಪಿ: ವಿಪಕ್ಷ ನಾಯಕನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಬಿಜೆಪಿಯ ಹಿರಿಯ ನಾಯಕ

ಸಂದೀಪ್‌ ಸಿಂಗ್ ಅವರ ವಿಡಿಯೊವನ್ನು ಶೇರ್‌ ಮಾಡಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು, “ಪ್ರತಿಭಟನಾ ನಿರತ ರೈತರ ಮೇಲೆ ದಾಳಿ ಮಾಡಲು ಮರದ ಕೊಂಬೆಗಳನ್ನು ಕತ್ತರಿಸಿದ ಖಟ್ಟರ್ ಆಡಳಿತಕ್ಕೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಖ್ಯಾತ ವಕೀಲ, ಮಾನವ ಹಕ್ಕುಗಳ ಹೋರಾಟಗಾರ ಪ್ರಶಾಂತ್ ಭೂಷಣ್‌ ಅವರು, “ರೈತರು ನೆರಳಿನಲ್ಲಿ ಕುಳಿತುಕೊಳ್ಳಬಾರದು ಎಂದು ಖಟ್ಟರ್ ಸರ್ಕಾರವು ಮರಗಳ ಕೊಂಬೆಗಳನ್ನು ಕತ್ತರಿಸಿತು. ತಮ್ಮ ಮೇಲೆ ಕ್ರೂರ ಲಾಠಿ ಚಾರ್ಜ್ ಮಾಡಿರುವುದನ್ನು ವಿರೋಧಿಸಿ ರೈತರು ಆ ಮರಗಳ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಬಿಜೆಪಿಯ ಭ್ರಷ್ಟತನ, ಕ್ರೌರ್ಯ ಮತ್ತು ಅಮಾನವೀಯ ನಡೆಯನ್ನು ಎಂದಿಗೂ ಕನಿಷ್ಠವಾಗಿ ಅಂದಾಜಿಸಬೇಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತ್ರಿಪುರ: ಹಲವು ಪತ್ರಿಕಾ ಕಚೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ- ಸಿಪಿಎಂ ಕಚೇರಿಗೆ ಬೆಂಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...