ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾನುವಾರ ಮತ್ತೊಮ್ಮೆ ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಿದೆ. ಕಳೆದ ಹದಿಮೂರು ದಿನಗಳಿಂದ ಇಂಧನ ದರ ಹೆಚ್ಚಳವಾಗುತ್ತಲೆ ಇದ್ದು, ಐದು ರಾಜ್ಯಗಳ ಚುನಾವಣೆ ನಡೆದ ನಂತರ ಲೀಟರ್‌ಗೆ 8 ರೂ. ಇದುವರೆಗೂ ಏರಿಕೆಯಾಗಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರವು ನಿನ್ನೆಯ 102.61 ರೂ. ನಿಂದ 103.41 ರೂಗೆ ಏರಿಕೆಯಾಗಿದೆ. ಡೀಸೆಲ್ ದರಗಳು ಲೀಟರ್‌ಗೆ 93.87 ರೂ. ನಿಂದ 94.67 ರೂ.ಗೆ ಏರಿದೆ. ಈ ಬೆಲೆ ಏರಿಕೆಯೊಂದಿಗೆ ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 88 ಪೈಸೆ ಮತ್ತು 81 ಪೈಸೆ ಏರಿಕೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಬೆಂಗಳೂರಿನಲ್ಲಿ 85 ಪೈಸೆ ಪೆಟ್ರೋಲ್‌ಗೆ ಮತ್ತು 78 ಪೈಸೆ ಡೀಸೆಲ್‌ಗೆ ಏರಿಕೆಯಾಗಿದ್ದು, ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ,108.99 ರೂ. ಮತ್ತು 92.83 ರೂ.ಗೆ ತಲುಪಿದೆ.
ಇಂದಿನ ಬೆಲೆ ಏರಿಕೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಪೆಟ್ರೋಲ್‌ಗೆ ಬರೋಬ್ಬರಿ 2 ರೂ. ಏರಿಕೆಯಾಗಿದ್ದು, ಡೀಸೆಲ್‌ಗೆ 1.83 ರೂ. ಏರಿಕೆಯಾಗಿದೆ. ಇದು ಇಂದು ರಾಜ್ಯದಲ್ಲೇ ಅತೀ ಹೆಚ್ಚು ಇಂಧನ ದರ ಏರಿಕೆಯಾದ ಜಿಲ್ಲೆಯಾಗಿದೆ. ಇದರೊಂದಿಗೆ ಅಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ, 110.46 ರೂ. ಮತ್ತು 94.17 ರೂ.ಗೆ ತಲುಪಿದೆ.
ಇದನ್ನೂ ಓದಿ: ‘ಹಲಾಲ್ ವಿಚಾರದಲ್ಲಿ ನಾವು ಸಂಘಟನೆಗಳ ಪರವಾಗಿದ್ದೇವೆ’: ಕಿಡಿಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಂಡ ಸಚಿವೆ ಜೊಲ್ಲೆ
ಪ್ರಸ್ತುತ ರಾಜ್ಯದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರ ಇರುವ ಜಿಲ್ಲೆಯಾಗಿ ದಾವಣಗೆರೆ ಹೊರಹೊಮ್ಮಿದೆ. ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 110.95 ರೂ.ಗೆ ತಲುಪಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 110 ರೂ. ದಾಟುತ್ತಿದೆ. ಜಿಲ್ಲಾವಾರು ಬೆಲೆ ಏರಿಕೆಯ ಪಟ್ಟಿ ಕೆಳಗಿನಂತಿದೆ.
ಐದು ರಾಜ್ಯಗಳಲ್ಲಿ ಚುನಾವಣೆ ಇದ್ದುದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏರಿಸಿರಲಿಲ್ಲ. ಇದರ ಬಂತರ ದರ ಪರಿಷ್ಕರಣೆ ಮಾರ್ಚ್ 22 ರ ನಂತರ ಮತ್ತೆ ಪ್ರಾರಂಭವಾಗಿತ್ತು.
ಶುಕ್ರವಾರದಂದು ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿರಲಿಲ್ಲ. ಅದರ ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ಬಳಸುವ 19 KG ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏಕಾಏಕಿ 250ರೂ.ಗೆ ಏರಿಸಿ, ಗ್ರಾಹಕರ ಕಿಸೆಗೆ ಕನ್ನ ಹಾಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ


