“ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು” ಎಂದು ಪಶ್ಚಿಮ ದೆಹಲಿ ಭಾರತೀಯ ಜನತಾ ಪಕ್ಷದ ಸಂಸದ ಪರ್ವೇಶ್ ವರ್ಮಾ ಅವರು ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ತಿಂಗಳು ಮೂವರು ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಮನೀಶ್ ಎಂಬವರ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ಬಲಪಂಥಿಯ ಸಂಘಟನೆಗಳು ‘ವಿರಾಟ್ ಹಿಂದೂ ಸಭಾ’ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಬಿಜೆಪಿ ಪರ್ವೇಶ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾಗಪುರದ ದಸರಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ “ಅಲ್ಪಸಂಖ್ಯಾತರಿಗೆ ಅಪಾಯವಿಲ್ಲ” ಎಂದು ಹೇಳಿಕೆ ಕೊಟ್ಟಿದ್ದರು. ಇದೀಗ ಬಿಜೆಪಿಯ ಸಂಸದರ ಮುಸ್ಲಿಂ ಸಮುದಾಯದ ಬಹಿಷ್ಕಾರದ ಕರೆ ಎಲ್ಲೆಡೆ ಟೀಕೆಗೆ ಗುರಿಯಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಂಸದರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರ್ಮಾ ಅವರಿಗಿಂತ ಮೊದಲು ಮಾತನಾಡಿದ ವಿಎಚ್‌ಪಿ ಅಂತರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, “ಒಂದು ನಿರ್ದಿಷ್ಟ ಸಮುದಾಯದ ಜನರು ದೆಹಲಿಯನ್ನು ಮಿನಿ ಪಾಕಿಸ್ತಾನ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
भाजपा-RSS का सांसद देश के राजधानी में, खुली सभा में मुसलमानों का बहिष्कार करने की शपथ ले रहा है। RSS के मोहन ने कहा था कि मुसलमानों में झूठा डर फैलाया जा रहा है।सच तो यही है कि BJP ने मुसलमानों के खिलाफ़ जंग का आगाज़ कर दिया है।दिल्ली CM और @amitshah दिनों ने चुप्पी साध ली है 1/2 pic.twitter.com/X2xMFKLCef
— Asaduddin Owaisi (@asadowaisi) October 9, 2022
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪರ್ವೇಶ್ ವರ್ಮಾ, “ಮುಸ್ಲಿಮರು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ನಾವು ಅವರ ಅಂಗಡಿಗಳಿಂದ ತರಕಾರಿ ಖರೀದಿಸುವುದನ್ನು ನಿಲ್ಲಿಸಬೇಕು. ಮಾಂಸಾಹಾರ ಮಾರಾಟ ಮಾಡುತ್ತಿದ್ದಾರೆ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗೆ ಹೇಳಿ ಪರವಾನಗಿ ಇಲ್ಲದ ಅಂಗಡಿಗಳನ್ನು ಮುಚ್ಚಬೇಕು. ಅವರು ನಡೆಸುವ ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸಬೇಕು” ಎಂದು ಪ್ರಚೋದಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, “ಅವರಿಗೆ ಪಾಠ ಕಲಿಸಲು ನೀವು ಬಯಸುವುದಾದರೆ ಅದಕ್ಕೆ ಸಂಪೂರ್ಣ ಬಹಿಷ್ಕಾರವೊಂದೇ ದಾರಿ” ಎಂದು ಕರೆ ಕೊಟ್ಟ ಪರ್ವೇಶ್ ವರ್ಮಾ, ತಮ್ಮ ಮಾತಿಗೆ ಒಪ್ಪುವುದಾದರೆ ಕೈ ಮೇಲೆತ್ತುವಂತೆ ಜನರನ್ನು ಕೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಬೌದ್ಧಧಮ್ಮದ ಅನುಯಾಯಿ ರಾಜೇಂದ್ರ ಪಾಲ್ ರಾಜೀನಾಮೆ; ಎಎಪಿಯ ಮೃದು ಹಿಂದುತ್ವ ಮುನ್ನೆಲೆಗೆ
“ನಾವು ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸುತ್ತೇವೆ ಎಂದು ನನ್ನೊಂದಿಗೆ ಹೇಳಿ. ನಾವು ಅವರಿಂದ ಏನನ್ನೂ ಖರೀದಿಸುವುದಿಲ್ಲ. ನಾವು ಅವರಿಗೆ ಯಾವುದೇ ವೇತನ ನೀಡುವುದಿಲ್ಲ” ಎಂದಿರುವ ವರ್ಮಾ ಪ್ರತಿಭಟನೆಯಲ್ಲಿ ಹಾಜರಿದ್ದ ಎಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ಬಿಜೆಪಿ ಸಂಸದರ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಂಸದ ಅಸಾವುದ್ದಿನ್ ಓವೈಸಿ, “ಆರ್‌ಎಸ್‌ಎಸ್‌ನ ಮೋಹನ್ ಭಾಗವತ್, ಮುಸ್ಲಿಮರಲ್ಲಿ ಹುಸಿಭಯ ಹರಡಿಸಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಿಜೆಪಿ-ಆರ್‌ಎಸ್‌ಎಸ್ ನಾಯಕರು ಮುಸ್ಲಿಮರನ್ನು ಬಹಿಷ್ಕರಿಸುವ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಾಸ್ತವ ಏನೆಂದರೆ ಬಿಜೆಪಿಯು ಮುಸ್ಲಿಮರ ವಿರುದ್ಧ ಸಮರ ಆರಂಭಿಸಿದೆ. ಈ ಕುರಿತು ದೆಹಲಿ ಮುಖ್ಯಮಂತ್ರಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಮೌನವಹಿಸಿದ್ದಾರೆ” ಎಂದು ಟೀಕಿಸಿದ್ದಾರೆ.



ಯಾರನ್ನು ಬಹಿಷ್ಕರಿಸಬೇಕು ಅನ್ನೋದನ್ನ ಜನರು ತೀರ್ಮಾನಿಸಲಿ