Homeಮುಖಪುಟಕೇರಳ: ಫೇಕ್ ನ್ಯೂಸ್‌ ಪತ್ತೆಹಚ್ಚುವ ತರಬೇತಿ ಪಡೆದ 19 ಲಕ್ಷ ವಿದ್ಯಾರ್ಥಿಗಳು

ಕೇರಳ: ಫೇಕ್ ನ್ಯೂಸ್‌ ಪತ್ತೆಹಚ್ಚುವ ತರಬೇತಿ ಪಡೆದ 19 ಲಕ್ಷ ವಿದ್ಯಾರ್ಥಿಗಳು

- Advertisement -
- Advertisement -

ಇಂದಿನ ಸಮಾಜದಲ್ಲಿ ಫೇಕ್‌ ನ್ಯೂಸ್‌ಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಜನರು ಯಾವುದು ನಿಜವಾದ ಸುದ್ದಿ, ಯಾವುದು ಸುಳ್ಳು ಸುದ್ದಿ ಎಂದು ತಿಳಿಯದೇ ಗೊಂದಲ ಮತ್ತು ಮೋಸಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಕೇರಳ ಸರ್ಕಾರವು ಶಿಕ್ಷಣ ಇಲಾಖೆಯ ಮೂಲಕ 19 ಲಕ್ಷ ವಿದ್ಯಾರ್ಥಿಗಳಿಗೆ ಫೇಕ್ ನ್ಯೂಸ್‌ ಪತ್ತೆಹಚ್ಚುವ ತರಬೇತಿ ನೀಡುವ ಮೂಲಕ ಗಮನ ಸೆಳೆದಿದೆ.

ಶಿಕ್ಷಣಕ್ಕಾಗಿ ಕೇರಳ ಮೂಲಸೌಕರ್ಯ ಮತ್ತು ತಂತ್ರಜ್ಞಾನ (KITE) ಎಂಬ ಸಂಸ್ಥೆಯ ಮೂಲಕ 5,920 ತರಬೇತುದಾರರು ಮೂರು ಹಂತಗಳಲ್ಲಿ “ಸತ್ಯಮೇವ ಜಯತೆ ಡಿಜಿಟಲ್ ಮೀಡಿಯಾ ಸಾಕ್ಷರತೆ ಕಾರ್ಯಕ್ರಮ”ವನ್ನು ಪೂರ್ಣಗೊಳಿಸಲಾಗಿದೆ ಎಂದು ಕೇರಳದ ಶಿಕ್ಷಣ ಸಚಿವ ವಿ.ಶಿವನಕುಟ್ಟಿ ತಿಳಿಸಿದ್ದಾರೆ.

ಕೇರಳದಾದ್ಯಂತ 5 ರಿಂದ 10 ನೇ ತರಗತಿ ಒಳಗಿನ 19.72 ಲಕ್ಷ ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳನ್ನು ಹರಡುವುದನ್ನು ತಡೆಯಲು ಮತ್ತು ಆ ಸಂದೇಶಗಳ ಹಿಂದಿನ ಸತ್ಯವನ್ನು ಅರ್ಥಮಾಡಿಕೊಳ್ಳುವ ಮೂಲಭೂತ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಳು ಸುದ್ದಿ (ಫೇಕ್ ನ್ಯೂಸ್) ಪತ್ತೆ ಹಚ್ಚುವುದು ಹೇಗೆ? ಇಲ್ಲಿವೆ ನೊಡಿ ಸರಳ ಮಾರ್ಗಗಳು

ಮೊದಲ ಹಂತದಲ್ಲಿ KITE VICTERS ಎಂಬ ಶೈಕ್ಷಣಿಕ ಚಾನಲ್ ಮೂಲಕ ಜಾಗೃತಿ ಮೂಡಿಸುವತ್ತ ಗಮನಹರಿಸಿತು. ಪ್ರತಿ ವಿದ್ಯಾರ್ಥಿಗೆ ದೈನಂದಿನ ಜೀವನದಲ್ಲಿ ಇಂಟರ್ನೆಟ್ ಬಳಕೆ, ಸಾಮಾಜಿಕ ಮಾಧ್ಯಮದಲ್ಲಿನ ಸರಿ ಮತ್ತು ತಪ್ಪುಗಳು ಮತ್ತು ನಕಲಿ ಸುದ್ದಿ ಹರಡುವುದನ್ನು ತಡೆಯುವುದು ಹೇಗೆ ಎಂಬ ನಾಲ್ಕು ವಿಭಾಗಗಳಲ್ಲಿ 2.5 ಗಂಟೆಗಳ ಅವಧಿಯ ತರಬೇತಿಯನ್ನು ನೀಡಲಾಯಿತು.

ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದ ಜೊತೆಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಲು KITE VICTERS ಚಾನೆಲ್ ಈ ಎಲ್ಲಾ ತರಗತಿಗಳನ್ನು ಅಕ್ಟೋಬರ್ 10 ರಿಂದ 13ರವರೆಗೆ ಸಂಜೆ 7 ಗಂಟೆಗೆ ನಾಲ್ಕು ಕಂತುಗಳಲ್ಲಿ ಪ್ರಸಾರ ಮಾಡಲಿದೆ ಎಂದು KITE ನ ಸಿಇಒ ಕೆ.ಅನ್ವರ್ ಸಾದತ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕೇರಳ ಸವಾರಿ’ – ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಆನ್‌ಲೈನ್ ಟ್ಯಾಕ್ಸಿ ಸೇವೆ ಉದ್ಘಾಟಿಸಿದ ಸಿಎಂ ಪಿಣರಾಯಿ ವಿಜಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...