ಕೇರಳದಲ್ಲಿ ಕೇವಲ ಒಂದೇ ಒಂದು ಸ್ಥಾನದಲ್ಲಿ ಬಿಜೆಪಿ ಖಾತೆ ತೆರೆದಿದೆ. ಈ ಚುನಾವಣೆಯಲ್ಲಿ ಆ ಖಾತೆಯನ್ನು ಸಹ ಮುಚ್ಚುತ್ತೇವೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಅವರು, “ಕೇರಳದಲ್ಲಿ ಕಾಂಗ್ರೆಸ್‌ನೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಕಾರಣದಿಂದಲೇ ಬಿಜೆಪಿಯು ಪ್ರಪ್ರಥಮ ಬಾರಿಗೆ ನೇಮಂ ಎಂಬ ಒಂದು ಸ್ಥಾನದಲ್ಲಿ ಖಾತೆ ತೆರೆದಿತ್ತು. ಈ ಬಾರಿ ಅದನ್ನು ಕ್ಲೋಸ್ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
BJP opened their first ever account in Kerala as a result of match fixing with INC. This time around, we will close their account, for sure. pic.twitter.com/w0uPT2EGyZ
— Pinarayi Vijayan (@vijayanpinarayi) March 30, 2021
ಇನ್ನು ನಿನ್ನೆ ಕಾಂಗ್ರೆಸ್ ಪಿಣರಾಯಿ ವಿಜಯನ್ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿತ್ತು. “ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ “ರಹಸ್ಯ ಹೊಂದಾಣಿಕೆ” ಹೊಂದಿದ್ದಾರೆಂದು ತೋರುತ್ತಿದೆ, ಯಾಕೆಂದರೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಎಂ ವಿರುದ್ಧ ಯಾವುದೇ ಎಫ್ಐಆರ್ ಇದುವರೆಗೂ ದಾಖಲಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಆರೋಪಿಸಿದ್ದರು.
ಈ ಬೆನ್ನಿಗೆ ಇಂದು ಪ್ರತಿಕ್ರಿಯಿಸಿರುವ ಕೇರಳ ಸಿಎಂ, ಕಾಂಗ್ರೆಸ್ ಬಿಜೆಪಿ ಮ್ಯಾಚ್ ಫಿಕ್ಸಿಂಗ್‌ನಿಂದಲೇ ಕೇರಳದಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲಲು ಸಾಧ್ಯವಾಯಿತು ಎಂದಿದ್ದಾರೆ.
ಇನ್ನೊಂದೆಡೆ ಪಾಲಕ್ಕಾಡ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, “ಕೇರಳ ಮತ್ತು ಪ್ರವಾಸೋದ್ಯಮಕ್ಕೆ ನಿಕಟ ಸಂಬಂಧವಿದೆ. ದುಃಖಕರ ವಿಷಯವೆಂದರೆ, ಇಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಸುಧಾರಿಸಲು LDF ಮತ್ತು UDF ಹೆಚ್ಚು ಕೆಲಸ ಮಾಡಿಲ್ಲ. ಈ ಬೆಳವಣಿಗೆಗೆ ಆಧಾರವಾಗಿ ಕಾರ್ಯನಿರ್ವಹಿಸ ತಂತ್ರಜ್ಞಾನವನ್ನು ನಾವು ಬಯಸುತ್ತೇವೆ” ಎಂದಿದ್ದಾರೆ.
ಏಪ್ರಿಲ್ 06 ರಂದು ಕೇರಳದಲ್ಲಿ ಚುನಾವಣೆ ನಡೆಯಲಿದ್ದು, ಮೇ 02 ರಂದು ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ: ಕೇರಳ ಮುಖ್ಯಮಂತ್ರಿ ಮತ್ತು ಪ್ರಧಾನಿ ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ: ಕಾಂಗ್ರೆಸ್


