ಕೇರಳ ಮುಖ್ಯಮಂತ್ರಿ ಮತ್ತು ಪ್ರಧಾನಿ ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ: ಕಾಂಗ್ರೆಸ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ “ರಹಸ್ಯ ಹೊಂದಾಣಿಕೆ” ಹೊಂದಿದ್ದಾರೆಂದು ತೋರುತ್ತಿದೆ, ಯಾಕೆಂದರೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಎಂ ವಿರುದ್ಧ ಯಾವುದೇ ಎಫ್ಐಆರ್ ಇದುವರೆಗೂ ದಾಖಲಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಸೋಮವಾರ ಆರೋಪಿಸಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಸುರ್ಜೇವಾಲ, “ಕೇರಳ ಸಿಎಂ ಮತ್ತು ಪಿಎಂ ಮೋದಿ ನಡುವೆ ರಹಸ್ಯ ಹೊಂದಾಣಿಕೆ ಇದೆ ಎಂದು ತೋರುತ್ತದೆ. ಅದಾನಿ ಗ್ರೂಪ್‌ನಿಂದ 2.85 ಪೈಸೆ ಮತ್ತು 2.90 ಪೈಸೆ ದರದಲ್ಲಿ 25 ವರ್ಷಗಳ ಕಾಲ 300 ಮೆಗಾವ್ಯಾಟ್ ಪವನ ವಿದ್ಯುತ್ ಖರೀದಿಸುವ ನಿರ್ಧಾರವನ್ನು ಕೇರಳ ಸರ್ಕಾರ ಮಾಡಿದೆ ಎಂಬುದು ಸರಿಯಲ್ಲವೇ?. ಇದರ ವೆಚ್ಚ 8,700 ಕೋಟಿ ರೂ.ಗಲಾಗಿದ್ದು, ಇದು ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಮುಚ್ಚಿಹಾಕಲು ಮಾಡಿರುವ ವಚ್ಚವೆ” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೇರಳ ಚುನಾವಣೆ : ಪಿಣರಾಯಿ ತೆಕ್ಕೆಗೆ ಮತ್ತೆ ಅಧಿಕಾರ ಎಂದ ಸಿ-ವೋಟರ್‌ ಸಮೀಕ್ಷೆಗಳು

“300 ಮೆಗಾವ್ಯಾಟ್ ಪವನ ಶಕ್ತಿಯನ್ನು ಕೇರಳ ಸರ್ಕಾರ ಖರೀದಿಸಿದೆ ಎಂಬುದು ಸರಿಯಲ್ಲವೇ. ಸೌರಶಕ್ತಿ ಯುನಿಟ್‌ಗೆ 1.90 ಪೈಸೆ ದರದಲ್ಲಿ ಲಭ್ಯವಿದೆ ಆದರೆ, 2.90 ಪೈಸೆ ದರದಲ್ಲಿ ಲಭ್ಯವಿರುವ ವಿದ್ಯುತ್ ಖರೀದಿಲಾಗಿದೆ. ಇದು ಬಹುತೇಕ ಒಂದು ರೂಪಾಯಿ ಹೆಚ್ಚಳವಾಗಿದೆ” ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆಯು ಮುಖ್ಯಮಂತ್ರಿ ಮತ್ತು ಇತರ ಸಚಿವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ, ಇದು ಕೂಡಾ ಅವರ ಹೊಂದಾಣಿಕೆಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

“ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಇಡಿ, ಸಿಬಿಐ ಆದಾಯ ತೆರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಪಿಣರಾಯಿ ವಿಜಯನ್, ಅವರ ಕ್ಯಾಬಿನೆಟ್ ಮಂತ್ರಿಗಳು ಮತ್ತು ಕೇರಳ ವಿಧಾನಸಭೆಯ ಸ್ಪೀಕರ್ ವಿರುದ್ದ‌ ಎಫ್‌ಐಆರ್‌ ಇಲ್ಲವೇ?” ಎಂದು ಸುರ್ಜೇವಾಲ ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿ ಕಿಂಗ್‌ಮೇಕರ್‌ ಆಗಲಿದೆ – ರಾಜ್ಯ ಬಿಜೆಪಿ ನಾಯಕ ಇ. ಶ್ರೀಧರನ್‌

LEAVE A REPLY

Please enter your comment!
Please enter your name here