Homeಮುಖಪುಟಕೇರಳದಲ್ಲಿ ಬಿಜೆಪಿ ಕಿಂಗ್‌ಮೇಕರ್‌ ಆಗಲಿದೆ - ರಾಜ್ಯ ಬಿಜೆಪಿ ನಾಯಕ ಇ. ಶ್ರೀಧರನ್‌

ಕೇರಳದಲ್ಲಿ ಬಿಜೆಪಿ ಕಿಂಗ್‌ಮೇಕರ್‌ ಆಗಲಿದೆ – ರಾಜ್ಯ ಬಿಜೆಪಿ ನಾಯಕ ಇ. ಶ್ರೀಧರನ್‌

- Advertisement -
- Advertisement -

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ದೊಡ್ಡ ಲಾಭ ಗಳಿಸಲಿದೆ ಎಂದು ‘ಮೆಟ್ರೊಮನ್’ ಇ ಶ್ರೀಧರನ್ ಬುಧವಾರ ಪ್ರತಿಪಾದಿಸಿದ್ದಾರೆ. ಚುನಾವಣೆಯ ನಂತರ ಬಿಜೆಪಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಬಹುದು ಎಂದು ಶ್ರೀಧರನ್ ಹೇಳಿದ್ದಾರೆ.

“ನನ್ನ ಪ್ರಕಾರ ಬಿಜೆಪಿಗೆ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಉತ್ತಮ ನಿರೀಕ್ಷೆಗಳಿವೆ. ಇದು ಸಂಪೂರ್ಣ ಬಹುಮತವಾಗಿರಬಹುದು ಅಥವಾ ಕಿಂಗ್‌ಮೇಕರ್‌ಗಳಾಗುವಷ್ಟು ಸಂಖ್ಯೆಯಲ್ಲಿ ಶಾಸಕಕರು ಇಲ್ಲಿ ಗೆಲ್ಲಲಿದ್ದಾರೆ” ಎಂದು ಹೇಳಿದ್ದಾರೆ.

ಪ್ರಸ್ತುತ ಕೇರಳದಲ್ಲಿ ಕೇವಲ ಒಬ್ಬ ಶಾಸಕರಿದ್ದಾರೆ. ನೇಮಂ ಕ್ಷೇತ್ರದ ಈ ಸ್ಥಾನವು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಕೈತಪ್ಪಿ ಹೋಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೇರಳ ಚುನಾವಣೆ : ಪಿಣರಾಯಿ ತೆಕ್ಕೆಗೆ ಮತ್ತೆ ಅಧಿಕಾರ ಎಂದ ಸಿ-ವೋಟರ್‌ ಸಮೀಕ್ಷೆಗಳು

ಶ್ರೀಧರನ್ ಅವರು ಮುಂಬರುವ ಕೇರಳ ಚುನಾವಣೆಯಲ್ಲಿ ಪಾಲಕ್ಕಾಡ್‌ನಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಬುಧವಾರ ಅವರು ಪಕ್ಷದ ಹಿರಿಯ ಮುಖಂಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಾಲಕ್ಕಾಡ್‌ನ ಮಲಂಪ್ಪುರಂನಲ್ಲಿ ಪ್ರಚಾರ ನಡೆಸಿದರು.

ದೆಹಲಿ ಮೆಟ್ರೋ ಯೋಜನೆಯ ನೇತೃತ್ವ ವಹಿಸಿದ್ದಕ್ಕಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟ ನಿವೃತ್ತ ಎಂಜಿನಿಯರ್, ಶ್ರೀಧರನ್‌ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರಿದರು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಸಿಪಿಐ-ಎಂ ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ನೇರ ಹಣಾಹಣಿ ನಡೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ, ಯುಡಿಎಫ್ ಮತ್ತು ಎಲ್ಡಿಎಫ್ ಮೈತ್ರಿಕೂಟಗಳು ರಾಜ್ಯದಲ್ಲಿ ಆಡಳಿತ ನಡೆಸುತ್ತಾ ಬಂದಿದೆ.

ಕೇರಳದ 14 ನೇ ವಿಧಾನಸಭೆಯ ಅಧಿಕಾರಾವಧಿ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. 140 ಸದಸ್ಯರ ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 2,67,88,268 ಮತದಾರರು ಕೇರಳದಲ್ಲಿ 15 ನೇ ವಿಧಾನಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

ಇದನ್ನೂ ಓದಿ: ಕೇರಳದಲ್ಲಿ ಸಾಕ್ಷರತೆಯಿದೆ, ಜನ ಯೋಚಿಸುತ್ತಾರೆ ಹಾಗಾಗಿ ಪಕ್ಷ ಬೆಳೆದಿಲ್ಲ: ಬಿಜೆಪಿಯ ಏಕೈಕ ಶಾಸಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...