Homeಅಂತರಾಷ್ಟ್ರೀಯಭಾರತೀಯ ಮೀನುಗಾರರು ಶ್ರೀಲಂಕಾ ನೌಕಾಪಡೆಯ ವಶಕ್ಕೆ: ಬಂಧಿತರ ಸಂಖ್ಯೆ 54 ಕ್ಕೆ ಏರಿಕೆ

ಭಾರತೀಯ ಮೀನುಗಾರರು ಶ್ರೀಲಂಕಾ ನೌಕಾಪಡೆಯ ವಶಕ್ಕೆ: ಬಂಧಿತರ ಸಂಖ್ಯೆ 54 ಕ್ಕೆ ಏರಿಕೆ

- Advertisement -
- Advertisement -

ಶ್ರೀಲಂಕಾ ನೌಕಾಪಡೆಯು ದೇಶದ ಸರಹದ್ದಿನ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಐದು ಮೀನುಗಾರಿಕಾ ಬೋಟ್‌ ಮತ್ತು ಕನಿಷ್ಠ 54 ಭಾರತೀಯ ಮೀನುಗಾರರನ್ನು ಬಂಧಿಸಿದೆ ಎಂದು ಅಧಿಕೃತವಾಗಿ ಗುರುವಾರ ತಿಳಿಸಿದೆ. ಉತ್ತರ ಮತ್ತು ಈಶಾನ್ಯ ಪ್ರದೇಶಗಳ ಕರಾವಳಿಯಲ್ಲಿ ನೌಕಾಪಡೆಯು ಮೀನುಗಾರರನ್ನು ಬುಧವಾರ ಬಂಧಿಸಿದ್ದಾಗಿ ಅದು ತಿಳಿಸಿದೆ.

“ಶ್ರೀಲಂಕಾದ ತೀರದಲ್ಲಿ ವಿದೇಶಿಯರು ಮೀನುಗಾರಿಕೆ ಮಾಡುತ್ತಿರುವುದರಿಂದ ಸ್ಥಳೀಯ ಮೀನುಗಾರಿಕಾ ಸಮುದಾಯದ ಮೇಲೆ ಪರೀಣಾಮ ಬೀಡುತ್ತಿದೆ. ಶ್ರೀಲಂಕಾದ ಮೀನುಗಾರಿಕೆ ಸಂಪನ್ಮೂಲಗಳ ಸುಸ್ಥಿರತೆಯನ್ನು ಪರಿಗಣಿಸಿದ ನೌಕಾಪಡೆಯು ಶ್ರೀಲಂಕಾದ ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ಚಟುವಟಿಕೆಗಳನ್ನು ತಡೆಯಲು ನಿಯಮಿತವಾಗಿ ಗಸ್ತು ನಡೆಸುತ್ತಿದೆ” ಎಂದು ನೌಕಾಪಡೆ ಹೇಳಿಕೆ ತಿಳಿಸಿದೆ .

ನೌಕಾಪಡೆಯು 14 ಮೀನುಗಾರರನ್ನೊಳಗೊಂಡು ಭಾರತೀಯ ಮೀನುಗಾರಿಕೆಯ ದೊಡ್ಡ ಹಡಗನ್ನು ಜಾಫ್ನಾದ ಕೋವಿಲಾನ್ ಕರಾವಳಿಯ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಬಂಧಿಸಿತು.

ಇದನ್ನೂ ಓದಿ: 20 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ 20 ಸಿಬ್ಬಂದಿಗಳೊಂದಿಗೆ ಇನ್ನೂ ಎರಡು ಭಾರತೀಯ ಮೀನುಗಾರಿಕಾ ಹಡಗುಗಳನ್ನು ಪೆನಲೈ, ಮನ್ನಾರ್‌ನಿಂದ 7 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮತ್ತು ಇರಾನಾಟಿವು ದ್ವೀಪದಿಂದ 5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮುಲ್ಲೈತೀವ್‌‌ನಿಂದ 7.5 ಮತ್ತು 8.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 20 ಸಿಬ್ಬಂದಿಗಳನ್ನು ಹೊಂದಿರುವ ಇನ್ನೆರಡು ಭಾರತೀಯ ಮೀನುಗಾರಿಕಾ ಹಡಗುಗಳನ್ನು ಬಂಧಿಸಲಾಗಿದೆ.

ಈ ಎರಡು ಹಡಗುಗಳು ಶ್ರೀಲಂಕಾದ ಸಮುದ್ರವನ್ನು 62 ನಾಟಿಕಲ್ ಮೈಲುಗಳಷ್ಟು ಉಲ್ಲಂಘಿಸಿದ್ದು, ಅಂತರರಾಷ್ಟ್ರೀಯ ಗಡಿರೇಖೆಯನ್ನು (ಐಎಂಬಿಎಲ್) ದಾಟಿತ್ತು ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೇರಳ: ಮೊದಲ ಬಾರಿ ಚುನಾವಣಾ ಕಣದಲ್ಲಿ ತೃತೀಯಲಿಂಗಿ ಅಭ್ಯರ್ಥಿ ಅನನ್ಯಾ

ಭಾರತೀಯ ಮೀನುಗಾರರಿಂದ ಇದೇ ರೀತಿಯ ಮೀನುಗಾರಿಕಾ ಘಟನೆಗಳು ವರದಿಯಾದಾಗ ಈ ಹಿಂದೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ನೌಕಾಪಡೆ ತಿಳಿಸಿದೆ.

“ಶ್ರೀಲಂಕಾದ ಸಮುದ್ರಕ್ಕೆ ವಿದೇಶಿ ಮೀನುಗಾರರ ಅಕ್ರಮ ಪ್ರವೇಶ ಮತ್ತು ನಿಷೇಧಿತ ಮೀನುಗಾರಿಕೆ ವಿಧಾನಗಳಿಂದಾಗಿ ಸಮುದ್ರ ಪರಿಸರ ವ್ಯವಸ್ಥೆಯನ್ನು ಗಂಭೀರವಾಗಿ ಪರಿಣಾಮವನ್ನು ಉಂಟುಮಾಡಿದೆ. ಅಲ್ಲದೆ ಇದು ದ್ವೀಪದ ಉತ್ತರ ಭಾಗದಲ್ಲಿನ ಮೀನುಗಾರರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡಿದೆ” ಎಂದು ನೌಕಾಪಡೆ ಹೇಳಿದೆ.

ಜನವರಿಯಲ್ಲಿ ದೇಶದ ಸಮುದ್ರದ ಸರಹದ್ದಿನಲ್ಲಿ ಮೀನುಗಾರಿಕೆ ಮಾಡಿದ್ದಕ್ಕಾಗಿ ಒಂದು ಯಾಂತ್ರಿಕೃತ ದೋಣಿ ಸಹಿತ ಒಂಬತ್ತು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.

ಇದನ್ನೂ ಓದಿ: ಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ಶಾಸಕರ ಮೇಲೆ ಪೊಲೀಸರಿಂದ ತೀವ್ರ ಹಲ್ಲೆ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...