Homeಮುಖಪುಟಹೆಲಿಕಾಪ್ಟರ್‌, ಚಂದ್ರಯಾನ, ಐಪೋನ್, ಕೋಟಿ ಹಣ-ತಮಿಳುನಾಡು ಚುನಾವಣಾ ಅಭ್ಯರ್ಥಿಯ ಪ್ರಣಾಳಿಕೆ!

ಹೆಲಿಕಾಪ್ಟರ್‌, ಚಂದ್ರಯಾನ, ಐಪೋನ್, ಕೋಟಿ ಹಣ-ತಮಿಳುನಾಡು ಚುನಾವಣಾ ಅಭ್ಯರ್ಥಿಯ ಪ್ರಣಾಳಿಕೆ!

- Advertisement -
- Advertisement -

ಮಿನಿ ಹೆಲಿಕಾಪ್ಟರ್, ಉಚಿತ ಐಫೋನ್, ಪ್ರತಿ ಮನೆಗೆ ಒಂದು ಕೋಟಿ ವಾರ್ಷಿಕ ಠೇವಣಿ, ಮದುವೆಗಳಿಗೆ ಚಿನ್ನಾಭರಣ, ಮೂರು ಅಂತಸ್ತಿನ ಮನೆ ಮತ್ತು ಚಂದ್ರಯಾನ ಇದೆಲ್ಲಾ ತಮಿಳುನಾಡಿನ ಅಭ್ಯರ್ಥಿಯೊಬ್ಬರು ಮತದಾರರಿಗೆ ನೀಡಿರುವ ಭರವಸೆ.

ಏಪ್ರಿಲ್ 6 ರಂದು ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ 34 ವರ್ಷದ ಪಕ್ಷೇತರ ಅಭ್ಯರ್ಥಿ ತುಳಂ ಸರವಣನ್ ಮಧುರೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಚುನಾವಣೆಗೆ ಅವರು ನೀಡಿರುವ ಭರವಸೆಗಳು ಹಾಗೂ ತಾನು ಚುನಾವಣೆಗೆ ಕಣಕ್ಕಿಳಿದಿರುವ ಬಗ್ಗೆ ನೀಡಿರುವ ಕಾರಣದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾದ ತುಳಂ ಸರವಣನ್ ಮತದಾರರಿಗೆ ಉಚಿತ ಐಫೋನ್, ಚಂದ್ರ ಗ್ರಹಕ್ಕೆ 100 ದಿನ ಉಚಿತ ಟ್ರಿಪ್, ಪ್ರತಿ ಮನೆಗೆ 20 ಲಕ್ಷ ರೂಪಾಯಿ ಮೌಲ್ಯದ ಕಾರು, ಹೆಲಿಕಾಪ್ಟರ್, ದೋಣಿ, ಮನೆಕೆಲಸಗಳಿಗೆ ಸಹಾಯ ಮಾಡಲು ಗೃಹಿಣಿಯರಿಗೆ ರೋಬೋಟ್, ಈಜುಕೊಳ ಇರುವ ಮೂರು ಅಂತಸ್ತಿನ ಮನೆ ಮತ್ತು ಯುವಕರಿಗೆ ವ್ಯವಹಾರ ಪ್ರಾರಂಭಿಸಲು 1 ಕೋಟಿ ರೂಪಾಯಿ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಏಕಪತ್ನಿ ವ್ರತಸ್ಥ ವಿವಾದ: ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ತಮ್ಮ ವೈವಾಹಿಕ ಸಂಬಂಧವನ್ನು ಬಹಿರಂಗಪಡಿಸಲಿ- ಸಿದ್ದರಾಮಯ್ಯ

“ರಾಜಕೀಯ ಪಕ್ಷಗಳಿಂದ ಉಚಿತವಾಗಿ ಸಿಗುವ ವಸ್ತುಗಳ ಹಿಂದೆ ಬೀಳುವ ಜನರಲ್ಲಿ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಮತದಾರರು ಸಾಮಾನ್ಯ ವಿನಮ್ರ ವ್ಯಕ್ತಿಗಳಾದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ನಾನು ಬಯಸುತ್ತೇನೆ” ಎಂದು ಸರವಣನ್ ಹೇಳಿದ್ದಾರೆ.

’ಚುನಾವಣೆಗೆ ನಿಂತಿರುವ ಉದ್ದೇಶ ಕೂರ ರಾಜಕೀಯದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದೇ ಆಗಿದೆ. ನನ್ನ ಚಿಹ್ನೆ ಕೂಡ ಡಸ್ಟ್‌ಬಿನ್ ಆಗಿದೆ. ಇಡೀ ವಿಶ್ವದಲ್ಲಿ ಯಾರೂ ಕೂಡ ನೀಡದಂಥ ಹಾಗೂ ಯಾರೂ ಈಡೇರಿಸಲಾಗದಂಥ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ಧೇನೆ. ಜನರನ್ನು ಜಾಗೃತಿಗೊಳಿಸುವ ಉದ್ದೇಶ ಇದು’ ಎಂದಿದ್ದಾರೆ.

ಇವರ ಭರವಸೆಗಳು ಇಷ್ಟಕ್ಕೆ ನಿಂತಿಲ್ಲ. ಬೇಸಿಗೆಯ ಉಷ್ಣತೆಯ ವಿರುದ್ಧ ಹೋರಾಡಲು ಬಾಹ್ಯಾಕಾಶ ಸಂಶೋಧನಾ ಕೇಂದ್ರ, 300 ಅಡಿ ಎತ್ತರದ ಹಿಮ ಬೆಟ್ಟ, ಮದುವೆಗೆ 800 ಗ್ರಾಂ ಚಿನ್ನ ಮತ್ತು ಚಂದ್ರನ ಪ್ರವಾಸಕ್ಕಾಗಿ ಕ್ಷೇತ್ರದಲ್ಲಿ ರಾಕೆಟ್ ಉಡಾವಣಾ ಪ್ಯಾಡ್ ಸಹ ನಿರ್ಮಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ 1 ವರ್ಷ: ಬೀದಿ ವ್ಯಾಪಾರಿಗಳಿಗೆ ಇನ್ನೂ ಕಾಡುತ್ತಿರುವ ಲಾಕ್‌ಡೌನ್ ಭೂತ

ತಮ್ಮ ವಯಸ್ಸಾದ ಹೆತ್ತವರೊಂದಿಗೆ ವಾಸಿಸುತ್ತಿರುವ ಸರವಣನ್, ತನ್ನ ನಾಮಪತ್ರಗಳನ್ನು ಸಲ್ಲಿಸಲು 20,000 ರೂಪಾಯಿ ಠೇವಣಿ ಪಾವತಿಸಲು ಬಡ್ಡಿಗಾಗಿ ಹಣವನ್ನು ಎರವಲು ಪಡೆದಿದ್ದೇನೆ ಎಂದು ಹೇಳಿದ್ದಾರೆ.

“ಅಧಿಕಾರದಲ್ಲಿದ್ದಾಗ ರಾಜಕೀಯ ಪಕ್ಷಗಳು ಉದ್ಯೋಗ ಒದಗಿಸಲು, ಕೃಷಿಗಾಗಿ ಅಥವಾ ನದಿಗಳನ್ನು ಜೋಡಿಸಲು ಸಹ ಕೆಲಸ ಮಾಡುವುದಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ಅವರು ಹಣವನ್ನು ಎಸೆದು ಜನರಿಗೆ ಆಮಿಷವೊಡ್ಡುತ್ತಾರೆ. ಈ ಪಕ್ಷಗಳು ರಾಜಕೀಯವನ್ನು ಕಲುಷಿತಗೊಳಿಸಿದ್ದಾರೆ ಮತ್ತು ಅದನ್ನು ಶ್ರೀಮಂತರ ಸಂರಕ್ಷಣೆಗಾಗಿ ಪರಿವರ್ತಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

“ಚುನಾವಣಾ ಪ್ರಚಾರ ನಡೆಸಲು ನನ್ನ ಬಳಿ ಹಣವಿಲ್ಲ. ಆದರೆ ನನ್ನ ವಾಟ್ಸಾಪ್ ಸಂದೇಶವು ವೈರಲ್ ಆಗಿದೆ. ಜನರು ನನ್ನ ಭರವಸೆಗಳ ಬಗ್ಗೆ ಮತ್ತು ಅದರ ಹಿಂದಿನ ಆಲೋಚನೆಯ ಬಗ್ಗೆ ಯೋಚಿಸುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಗೆಲ್ಲದಿದ್ದರೂ ಇದು ನನ್ನ ಗೆಲುವು” ಎಂದು ಸರವಣನ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.


ಇದನ್ನೂ ಓದಿ: ದಶಕಗಳಿಂದ ದುಡಿದರೂ ಕನಿಷ್ಟ ಭದ್ರತೆಯಿಲ್ಲ: ಕೂಲಿ ನೇಕಾರ ಕಾರ್ಮಿಕರ ಗೋಳು ಕೇಳುವವರ್ಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...