ಕೇರಳದಲ್ಲಿ ಸಾಕ್ಷರತೆಯಿದೆ, ಜನ ಯೋಚಿಸುತ್ತಾರೆ ಹಾಗಾಗಿ ಪಕ್ಷ ಬೆಳೆದಿಲ್ಲ: ಬಿಜೆಪಿಯ ಏಕೈಕ ಶಾಸಕ

ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೆ ಕೇರಳದಲ್ಲಿ ಒಬ್ಬರೇ ಒಬ್ಬ ಶಾಸಕರಿದ್ದಾರೆ. ರಾಜ್ಯದಲ್ಲಿ ಪಕ್ಷವು ವೇಗವಾಗಿ ಬೆಳೆಯದೆ ಇರಲು ಕಾರಣವನ್ನು ಕೇರಳ ಬಿಜೆಪಿಯ ಮುಖಂಡ ಹಾಗೂ ಪಕ್ಷದ ಒಂಟಿ ಶಾಸಕ ಒ. ರಾಜಗೋಪಾಲ್ ಬಹಿರಂಗ ಪಡಿಸಿದ್ದಾರೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣ 90% ಆಗಿದ್ದು, ಈ ಸಾಕ್ಷರತೆಯಿಂದಾಗಿ ಕೇರಳದಲ್ಲಿ ಬಿಜೆಪಿ ಬೆಳೆಯುತ್ತಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ: ಮೊದಲ ಬಾರಿ ಚುನಾವಣಾ ಕಣದಲ್ಲಿ ತೃತೀಯಲಿಂಗಿ ಅಭ್ಯರ್ಥಿ ಅನನ್ಯಾ

“ಕೇರಳವು ಬೇರೆಯೆ ರೀತಿಯ ರಾಜ್ಯವಾಗಿದೆ. ಇಲ್ಲಿ ಎರಡು-ಮೂರು ವಿಭಿನ್ನ ಅಂಶಗಳಿವೆ. ಕೇರಳದ ಸಾಕ್ಷರತೆಯ ಪ್ರಮಾಣ 90% ಆಗಿದ್ದು, ಅವರು ಯೋಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ಇವು ವಿದ್ಯಾವಂತರ ಅಭ್ಯಾಸಗಳಾಗಿದ್ದು, ಅದೂ ಒಂದು ಸಮಸ್ಯೆಯಾಗಿದೆ’’ ಎಂದು ಅವರು ಹೇಳಿದ್ದಾರೆ.

“ಎರಡನೇ ವಿಷಯವೆಂದರೆ ರಾಜ್ಯದಲ್ಲಿ 55% ಹಿಂದೂಗಳು ಮತ್ತು 45% ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಅದಕ್ಕಾಗಿಯೇ ಕೇರಳವನ್ನು ಬೇರೆ ಯಾವುದೇ ರಾಜ್ಯದೊಂದಿಗೆ ಹೋಲಿಸಲಾಗುವುದಿಲ್ಲ. ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ ಆದರೆ ನಾವು ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿದ್ದೇವೆ” ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ, ಮೂವರು ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

LEAVE A REPLY

Please enter your comment!
Please enter your name here