Photo Courtesy: NDTV

ಮತಾಂತರ ಮಾಡುತ್ತಿದ್ದಾರೆ ಎಂದು ಶಂಕಿಸಿ ಇಬ್ಬರು ಕ್ರೈಸ್ತ ಸನ್ಯಾಸಿಗಳು (ನನ್‌ಗಳು) ಮತ್ತು ಅವರ ಇಬ್ಬರು ನವಶಿಷ್ಯೆಯರಿಗೆ ABVP ಕಾರ್ಯಕರ್ತರು ಕಿರುಕುಳ ನಿಡಿರುವ ಪ್ರಕರಣ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಕ್ರೈಸ್ತ ಸನ್ಯಾಸಿಗಳನ್ನು ABVP ಕಾರ್ಯಕರ್ತರು ರೈಲಿನಿಂದ ಕೆಳಗಿಳಿಸಿ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.

ಹಲವಾರು ಚರ್ಚ್‌ಗಳು ಈ ಘಟನೆ ಖಂಡಿಸಿದ್ದು, ಕೇರಳ ಚುನಾವಣೆ ಸಂದರ್ಭದಲ್ಲಿ ಇದು ಗಂಭೀರ ವಿಷಯವಾದ ಪರಿಣಾಮ, ಇಂದು ಗೃಹ ಸಚಿವ ಅಮಿತ್ ಶಾ ಆರೋಪಿಗಳ ಮೇಲೆ ಕ್ರಮ ಜರುಗಿಸುವ ಹೇಳಿಕೆ ನೀಡಿದ್ದಾರೆ.

ಘಟನೆ ಮಾರ್ಚ್ 19 ರಂದೇ ನಡೆದಿದ್ದು, ಕೇರಳ ಮುಖ್ಯಮಂತ್ರಿ ಈ ಕುರಿತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ನಂತರ, ಅಮಿತ್ ಶಾ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ಇಂದು ವರದಿ ಮಾಡಿದೆ.

ಯಾವುದೇ ಮತಾಂತರದ ಪ್ರಯತ್ನ ನಡೆದಿಲ್ಲ ಎಂಬುದನ್ನು ರೈಲ್ವೆ ಪೊಲೀಸರು ಖಾತ್ರಿ ಮಾಡಿಕೊಂಡ ನಂತರವಷ್ಟೇ ಆ ನಾಲ್ವರನ್ನು ಅವರಿಗೆ ಪ್ರಯಾಣದಲ್ಲಿ ಮುಂದುವರಿಯಲು ಅವಕಾಶ ನೀಡಲಾಯಿತು. ಈ ವಿಷಯದಲ್ಲಿ ABVP ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

‘ಝಾನ್ಸಿ ಸನ್ಯಾಸಿಗಳ ಕಿರುಕುಳ ಘಟನೆಯಲ್ಲಿ ಭಾಗಿಯಾದವರನ್ನು ಕಾನೂನಿನ ಮುಂದೆ ತರಲಾಗುವುದು” ಎಂದು ಶಾ ಇಂದು ಹೇಳಿದರು.

“ಇಂತಹ ಘಟನೆಗಳು ರಾಷ್ಟ್ರದ ಗೌರವ ಮತ್ತು ಅದರ ಪ್ರಾಚೀನ ಧಾರ್ಮಿಕ ಸಹಿಷ್ಣುತೆಯನ್ನು ಕೆಡಿಸುತ್ತವೆ. ಇಂತಹ ಘಟನೆಗಳಿಗೆ ಕೇಂದ್ರ ಸರ್ಕಾರದಿಂದ ಅತ್ಯಂತ ಖಂಡನೆ ಅಗತ್ಯ. ಅಡ್ಡಿಪಡಿಸುವ, ದುರ್ಬಲಗೊಳಿಸುವ ಎಲ್ಲ ಗುಂಪುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲು ನಿಮ್ಮ ಹಸ್ತಕ್ಷೇಪವನ್ನು ನಾನು ಕೋರುತ್ತೇನೆ. ಸಂವಿಧಾನವು ಖಾತರಿಪಡಿಸಿದ ವೈಯಕ್ತಿಕ ಹಕ್ಕುಗಳ ಸ್ವಾತಂತ್ರ‍್ಯ ಕಾಪಾಡಿ” ಎಂದು ಪಿಣರಾಯಿ ವಿಜಯನ್ ಬರೆದಿದ್ದರು.

ಕ್ರೈಸ್ತ ಸನ್ಯಾಸಿಗಳು ಮಾರ್ಚ್ 19 ರಂದು ಹರಿದ್ವಾರ-ಪುರಿ ಉತ್ಕಲ್ ಎಕ್ಸ್‌ಪ್ರೆಸ್‌‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ವಿಭಾಗದ 25 ಸೆಕೆಂಡುಗಳ ವೀಡಿಯೊದಲ್ಲಿ ಕೆಲವು ಪುರುಷರು ಸುತ್ತುವರೆದಿರುವ ಮಹಿಳೆಯರನ್ನು ತೋರಿಸಲಾಗಿದೆ, ಅವರಲ್ಲಿ ಕೆಲವರು ಪೊಲೀಸರಾಗಿ ಕಾಣಿಸಿಕೊಂಡಿದ್ದಾರೆ.

“ನಿಮ್ಮ ಲಗೇಜ್ ತೆಗೆದುಕೊಂಡು ಹೋಗಿ. ನೀವು ಹೇಳುತ್ತಿರುವುದು ಸರಿಯಾಗಿದ್ದರೆ ನಿಮ್ಮನ್ನು ಮನೆಗೆ ಕಳುಹಿಸಲಾಗುತ್ತದೆ” ಎಂದು ಒಬ್ಬ ಮನುಷ್ಯ ಹೇಳುತ್ತಾನೆ.
“ನೀವು ನೇತಾಗಿರಿಯಲ್ಲಿ ಏಕೆ ಪಾಲ್ಗೊಳ್ಳುತ್ತಿದ್ದೀರಿ” ಎಂದು ಮತ್ತೊಬ್ಬರು ಹೇಳುತ್ತಾರೆ.
“ಏನು ನೇತಾಗಿರಿ ಅರೇ. ಚಲಿಯೆ ಮೇಡಂ. ಜಲ್ದಿ ಉತಾವೋ ಸಾಮಾನ್” ಎಂದು ಮೂರನೆಯವರು ಹೇಳುತ್ತಾನೆ.

ರೈಲ್ವೆ ನಿಲ್ದಾಣದ ಇತರ ವೀಡಿಯೊಗಳು ಮತ್ತು ಛಾಯಾಚಿತ್ರಗಳು ಮಹಿಳೆಯರನ್ನು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ತೋರಿಸುತ್ತವೆ ಮತ್ತು ನಂತರ, ಝಾನ್ಸಿ ರೈಲ್ವೆ ಪೊಲೀಸ್ ಠಾಣೆ ಎಂದು ಕಾಣಿಸಿಕೊಳ್ಳುತ್ತದೆ.

“ಎಬಿವಿಪಿಯ ಕೆಲವು ಸದಸ್ಯರು ಉತ್ಸಲ್ ಎಕ್ಸ್‌ಪ್ರೆಸ್‌‌ ರೈಲಿನಲ್ಲಿ ಝಾನ್ಸಿಗೆ ರಿಷಿಕೇಶದ ತರಬೇತಿ ಶಿಬಿರದಿಂದ ಹಿಂದಿರುಗುತ್ತಿದ್ದರು. ನಾಲ್ಕು ಕ್ರಿಶ್ಚಿಯನ್ ಮಹಿಳೆಯರು ದೆಹಲಿಯ ಹಜರತ್ ನಿಜಾಮುದ್ದೀನ್‌ನಿಂದ ಒಡಿಶಾದ ರೂರ್ಕೆಲಾಕ್ಕೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರು ಸನ್ಯಾಸಿಗಳು ಮತ್ತು ಇಬ್ಬರು ತರಬೇತಿಯಲ್ಲಿದ್ದವರು. ಸನ್ಯಾಸಿಗಳು ಇತರ ಮಹಿಳೆಯರೊಂದಿಗೆ ಮಾತನಾಡುತ್ತಿರುವುದರಿಂದ ಈ ಇಬ್ಬರು ಸನ್ಯಾಸಿಗಳು ಇತರ ಇಬ್ಬರು ಮಹಿಳೆಯರನ್ನು ಮತಾಂತರಕ್ಕಾಗಿ ಕರೆದೊಯ್ಯುತ್ತಿದ್ದಾರೆ ಎಂದು ಎಬಿವಿಪಿಯ ಈ ಸದಸ್ಯರು ಶಂಕಿಸಿದ್ದಾರೆ. ಈ ಅನುಮಾನದ ಮೇಲೆ ಅವರು ರೈಲ್ವೆ ಸಂರಕ್ಷಣಾ ಪಡೆಗೆ ಮಾಹಿತಿ ನೀಡಿದರು. ಹುಟ್ಟಿನಿಂದ ನಾಲ್ವರು  ಮಹಿಳೆಯರು ಕ್ರಿಶ್ಚಿಯನ್ ಆಗಿದ್ದು ಯಾವುದೇ ಮತಾಂತರದಲ್ಲಿ ಪಾಲ್ಗೊಂಡಿಲ್ಲ. ಇದರ ನಂತರ ನಾವು ನಾಲ್ವರು ಮಹಿಳೆಯರನ್ನು ಒಡಿಶಾದ ಅವರ ಸ್ವಂತ ಸ್ಥಳಕ್ಕೆ ಕಳುಹಿಸಿದ್ದೇವೆ’ ಎಂದು ಝಾನ್ಸಿ ರೈಲ್ವೆ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ನಯೀಮ್ ಖಾನ್ ಮನ್ಸೂರಿ ವಿವರವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಿರುಕುಳ ಘಟನೆಯಲ್ಲಿ ಭಾಗಿಯಾಗಿದ್ದ ಎಬಿವಿಪಿ ಸದಸ್ಯರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.


ಇದನ್ನೂ ಓದಿ: ಕೇಜ್ರಿವಾಲ್‌ಗೆ ಬೆಂಬಲ: ದೆಹಲಿ ಮಸೂದೆ ಸೋಲಿಸಲು ಹಾರಿಬರುತ್ತಿರುವ ಟಿಎಂಸಿ ಸಂಸದರು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here