Homeಮುಖಪುಟ‘ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ಬಂಗಾಳಿ ಸಂಸ್ಕೃತಿಯಲ್ಲ’- ‘ಬರ್ಮುಡಾ’ ಹೇಳಿಕೆ ಸಮರ್ಥಿಸಿದ ಬಿಜೆಪಿ ಅಧ್ಯಕ್ಷ

‘ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ಬಂಗಾಳಿ ಸಂಸ್ಕೃತಿಯಲ್ಲ’- ‘ಬರ್ಮುಡಾ’ ಹೇಳಿಕೆ ಸಮರ್ಥಿಸಿದ ಬಿಜೆಪಿ ಅಧ್ಯಕ್ಷ

- Advertisement -
- Advertisement -

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ದ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ‘ಮಹಿಳೆಯೊಬ್ಬಳು ಸೀರೆ ಧರಿಸಿ ಕಾಲು ಪ್ರದರ್ಶಿಸುತ್ತಿರುವುದು ಬಂಗಾಳಿ ಸಂಸ್ಕೃತಿಯ ಪ್ರತೀಕವಲ್ಲ’ ಎಂದು ಗುರುವಾರ ಹೇಳಿದ್ದಾರೆ.

ಮಂಗಳವಾರ ಪುರುಲಿಯಾದಲ್ಲಿ ನಡೆದ ಚುನಾವಣಾ ರ್‍ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದ ದಿಲೀಪ್ ಘೋಷ್, ಮಮತಾ ಬ್ಯಾನರ್ಜಿ ಅವರ ಗಾಯಗೊಂಡ ಕಾಲನ್ನು ಗುರಿಯಾಗಿಸಿಕೊಂಡಿದ್ದರು. ಮತಗಳಿಗಾಗಿ ಅವರು ತನ್ನ ಮುರಿದ ಕಾಲನ್ನು ಪ್ರದರ್ಶಿಸುತ್ತಿದ್ದಾರೆ. ಅದಕ್ಕಾಗಿ ಅವರು ಬರ್ಮುಡಾ ಶಾರ್ಟ್ಸ್ ಧರಿಸಲಿ, ಆಗ ಜನರಿಗೆ ಅವರ ಕಾಲು ಸ್ಪಷ್ಟವಾಗಿ ಕಾಣುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ’ಮಮತಾ ಬರ್ಮುಡಾ ಧರಿಸಲಿ’ ಎಂಬ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿಕೆಗೆ ವ್ಯಾಪಕ ಟೀಕೆ

ತಮ್ಮ ಹೇಳಿಕೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದಿಲೀಪ್ ಘೋಷ್‌, “ಮಹಿಳಾ ಮುಖ್ಯಮಂತ್ರಿ ಆಗಿರುವುದರಿಂದ ಬಂಗಾಳದ ಸಂಸ್ಕೃತಿ, ಸಂಪ್ರದಾಯ ಹಾಗೂ ಬಂಗಾಳಿ ಮಹಿಳೆಯ ಮೌಲ್ಯಗಳೊಂದಿಗೆ ಉತ್ತಮವಾದ ಸಭ್ಯತೆಯನ್ನು ನಾವು ಖಂಡಿತವಾಗಿಯೂ ನಿರೀಕ್ಷಿಸುತ್ತೇವೆ” ಎಂದು ಹೇಳಿದ್ದಾರೆ.

“ಆದಾಗ್ಯೂ, ಸೀರೆ ಧರಿಸಿದ ಮಹಿಳೆಯು ತನ್ನ ಕಾಲುಗಳನ್ನು ಪ್ರರ್ಶಿಸುತ್ತಿರುವುದನ್ನು ನಾವು ಆಗಾಗ್ಗೆ ನೋಡುತ್ತಿದ್ದೇವೆ. ಇದನ್ನು ನೀವು ಬಂಗಾಳದ ಸಂಸ್ಕೃತಿಯ ಪ್ರತಿಬಿಂಬವೆಂದು ಪರಿಗಣಿಸುತ್ತೀರಾ? ಇದನ್ನು ನಾನು ಸಭೆಯಲ್ಲಿ ವಿರೋಧಿಸಿದ್ದೇನೆ” ಎಂದು ಅವರು ತನ್ನ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದಿಲೀಪ್‌ ಘೋಷ್ ಅವರ ಸಮರ್ಥನೆಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್, “ಬಿಜೆಪಿಯ ಅಧ್ಯಕ್ಷರು ಬಂಗಾಳದ ಮಗಳಿಗೆ ಮಾಡಿದ ಅವಮಾನವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸ್ತ್ರೀದ್ವೇಷಕ್ಕೆ ಜನರು ಶಿಕ್ಷೆ ವಿಧಿಸುತ್ತಾರೆ. ಸೀರೆ ಧರಿಸಿರುವ ಮಹಿಳೆಯರಾಗಲಿ ಅಥವಾ ಸೀಳಿರುವ ಜೀನ್ಸ್ ಧರಿಸಿದವರಾಗಿರಲಿ, ಬಂಗಾಳ ಕ್ಷಮಿಸುವುದಿಲ್ಲ!” ಎಂದು ಹೇಳಿದೆ.

ಇದನ್ನೂ ಓದಿ: ಎನ್‌ಸಿಪಿ ನಾಯಕ ಶರದ್ ಪವಾರ್‌‌ ಬಂಗಾಳದಲ್ಲಿ ತೃಣಮೂಲ ಪರ ಪ್ರಚಾರ!

“ಅಂತಹ ಮನಸ್ಥಿತಿಯ ಜನರಿಗೆ ಬಂಗಾಳದ ಮಹಿಳೆಯರು ಒಂದೇ ಮತ ನೀಡುವುದಿಲ್ಲ” ಎಂದು ರಾಜ್ಯ ಸಚಿವ ಚಂದ್ರೀಮಾ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ನಟಿ, ರಾಜಕಾರಣಿ ನುಸ್ರತ್ ಜಹಾನ್, “ಸ್ತ್ರೀದ್ವೇಷ ಮತ್ತು ಪುರುಷರ ಇಚ್ಛೆಯಂತೆ ಮಹಿಳೆಯರನ್ನು ನಿಯಂತ್ರಿಸುವ ಬಯಕೆಯು ಬಿಜೆಪಿ ನಾಯಕರಲ್ಲಿ ಎಷ್ಟು ಆಳವಾಗಿ ಹುದುಗಿದೆ ಎಂದರೆ ಅದು ಈಗ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾಳ ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ದಿಲೀಪ್ ಘೋಷ್‌ ಈ ಹಿಂದಿನಿಂದಲೂ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೆ ಬರುತ್ತಿದ್ದಾರೆ. ಹಿಂದೆ ಅವರು “ಸ್ಥಳೀಯ ಹಸುಗಳ ಹಾಲಿನಲ್ಲಿ ಚಿನ್ನದ ಅಂಶವಿದೆ”, “ಕಮ್ಯುನಿಸ್ಟರನ್ನು ಹೊರಹಾಕಲು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಬಾಲಕೋಟ್ ತರಹದ ಸರ್ಜಿಕರಲ್‌ ಸ್ಟ್ರೈಕ್ ನಡೆಸಬೇಕು” ಎಂಬ ಹೇಳಿಕೆಯನ್ನು ನೀಡಿದ್ದರು.

ಮಾರ್ಚ್ 10 ರಂದು ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ್ದ ಮಮತಾ ಅವರ ಕಾಲಿಗೆ ತೀವ್ರ ತರದ ಗಾಯವಾಗಿತ್ತು. ಅದರ ನಂತರ ಅವರು ತನ್ನ ಎಡಗಾಲಿಗೆ ಪ್ಲ್ಯಾಸ್ಟರ್ ಹಾಕಿದ್ದು ಗಾಲಿಕುರ್ಚಿಯಲ್ಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ಫೈನಲ್ ಲಿಸ್ಟ್ ಬಿಡುಗಡೆ: ಮಿಥುನ್ ಚಕ್ರವರ್ತಿಗೆ ಟಿಕೆಟ್ ಇಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...