ಬಿಜೆಪಿ ಆಡಳಿತದ ಅವಧಿಯಲ್ಲಿ, 2020 ರಿಂದ 2023 ರ ನಡುವೆ ನೀರಾವರಿ ಕಾಮಗಾರಿಗಳಿಗಾಗಿ ಸ್ಥಾಪಿಸಲಾಗಿರುವ ಕರ್ನಾಟಕ ನೀರಾವಾರಿ ನಿಗಮ ಲಿಮಿಟೆಡ್ (KNNL)ನ ಸುಮಾರು 300 ಕೋಟಿ ರೂ. ಗಳನ್ನು ಬೇರೆ ಉದ್ದೇಶಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ಬುಧವಾರ ವರದಿ ಮಾಡಿದೆ. KNNL ಹಣವನ್ನು ಸಮುದಾಯ ಭವನಗಳು, ಮಠಗಳು ಮತ್ತು ಬೆರಳೆಣಿಕೆಯಷ್ಟು ಶಾದಿ ಮಹಲ್‌ಗಳನ್ನು ನಿರ್ಮಿಸಲು ಖರ್ಚು ಮಾಡಲಾಗಿದೆ ಎಂದು ವರದಿ ಹೇಳಿದೆ. ಬಿಜೆಪಿ ಅವಧಿಯಲ್ಲಿ
ಶಿವಮೊಗ್ಗ ಜಿಲ್ಲೆಯ ಶಾಸಕರು ಮತ್ತು ಸಂಸದರ ಕೋರಿಕೆಯ ಆಧಾರದ ಮೇಲೆ ಈ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ವರದಿ ಉಲ್ಲೇಖಿಸಲಾಗಿದೆ. ಬಿಜೆಪಿ ಸರ್ಕಾರದ ಈ ನೀತಿಯಿಂದ ಕಳೆದ ಒಂದು ವರ್ಷದಲ್ಲಿ ಕೆಎನ್‌ಎನ್‌ಎಲ್‌ನಲ್ಲಿ ನಗದು ಕೊರತೆಯಾಗಿದ್ದು, ಕಾಲುವೆಗಳ ದುರಸ್ತಿಯಂತಹ ನಿರ್ಣಾಯಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಉಲ್ಲೇಖಿಸಿದೆ. ಬಿಜೆಪಿ ಅವಧಿಯಲ್ಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಗುತ್ತಿಗೆದಾರರಿಗೆ ಪಾವತಿ ಮಾಡಬೇಕಾಗಿರುವ ಬಾಕಿ 6,000 ಕೋಟಿ ರೂ.ಗಳಷ್ಟು ಇವೆ. 2 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಲವು ತಿಂಗಳು ಕಾಯಿಸಿ ನಂತರ 8 ಲಕ್ಷ ರೂ. ನೀಡಲಾಗಿದೆ. ಶಿವಮೊಗ್ಗ ಒಂದೆ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಹಲವು ಯೋಜನೆಗಳಿಗೆ ಸುಮಾರು 2 ಸಾವಿರ ಕೋಟಿ ರೂ.ಗಳ ಅಗತ್ಯವಿದೆ” ಎಂದು KNNL ಅಧಿಕಾರಿಗಳು ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ. ಬಿಜೆಪಿ ಅವಧಿಯಲ್ಲಿ
ಆಗಿನ ಶಿಕಾರಿಪುರ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಮನವಿ ಮೇರೆಗೆ ಈ ಹಣವನ್ನು ನೀರಾವರಿಯೇತರ ಕಾಮಗಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ ಎಂದು ವರದಿ ಉಲ್ಲೇಖಿಸಿದೆ.
KNNL ಮಂಡಳಿಯು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿದ್ದು, ತುಂಗಾ ಮೇಲ್ದಂಡೆ ಯೋಜನೆಯ ಜಲಾನಯನ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನೆಪದಲ್ಲಿ ಮಂಡಳಿಯು ಸಮುದಾಯ ಭವನ ಹಾಗೂ ಮಠಗಳ ನವೀಕರಣಕ್ಕೆ ಸುಮಾರು 300 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿ ಹೇಳಿದೆ.
KNNL ಹಣದಲ್ಲಿ ಬಸವತತ್ವ ಮಂದಿರ, ರಾಘವೇಂದ್ರ ಸ್ವಾಮಿ ದೇವಸ್ಥಾನ, ಸದ್ಗುರು ಸೇವಾ ಟ್ರಸ್ಟ್, ಬಸವೇಶ್ವರ ದೇವಸ್ಥಾನ, ಕಾಲಭೈರವೇಶ್ವರ ದೇವಸ್ಥಾನ, ನಂದಿಗುಡಿ ಬೃಹನ್ಮಠ, ತರಳಬಾಳು ಮಠ ಸೇರಿದಂತೆ ಧಾರ್ಮಿಕ ಸಭಾಂಗಣಗಳು ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅದು ಹೇಳಿದೆ.
ಈ ಹಣದಲ್ಲಿ ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆರಳೆಣಿಕೆಯಷ್ಟು ಕಾಮಗಾರಿಗಳನ್ನು ಮಾಡಲಾಗಿದ್ದು, ಉಳಿದೆಲ್ಲ ಕಾಮಗಾರಿಗಳನ್ನು ಶಿವಮೊಗ್ಗದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬ್ರಾಹ್ಮಣರು, ಬಿಲ್ಲವರು, ವಿಶ್ವಕರ್ಮ, ವಾಲ್ಮೀಕಿ ಮತ್ತು ಇತರ ಸಮುದಾಯಗಳ ಕೆಲವು ಸಭಾಂಗಣಗಳನ್ನು ನಿರ್ಮಿಸಲಾಗಿದ್ದು, ಉಳಿದವು ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿ ಬಳಸಲಾಗಿವೆ.
ಇದನ್ನೂ ಓದಿ: ‘ಈಶಾನ್ಯ ಭಾರತದಲ್ಲಿ ಕೇವಲ 38 ಜನರ ಹತ್ಯೆ!’ | ಸ್ಥಾಯಿ ಸಮಿತಿ ಮುಂದೆ ಸುಳ್ಳು ಹೇಳಿದ ಕೇಂದ್ರ ಗೃಹ ಸಚಿವಾಲಯ
‘ಈಶಾನ್ಯ ಭಾರತದಲ್ಲಿ ಕೇವಲ 38 ಜನರ ಹತ್ಯೆ!’ | ಸ್ಥಾಯಿ ಸಮಿತಿ ಮುಂದೆ ಸುಳ್ಳು ಹೇಳಿದ ಕೇಂದ್ರ ಗೃಹ ಸಚಿವಾಲಯ


