ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆಯ ವೇಳೆ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಘೋಷಣೆ ಕೂಗಿರುವ ಆಡಿಯೋ ರೆಕಾರ್ಡ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ (ಎಫ್‌ಎಸ್‌ಎಲ್)ಗೆ ಸರ್ಕಾರ ಕಳುಹಿಸಿಕೊಟ್ಟಿದೆ. ಈ ನಡುವೆ ಬಿಜೆಪಿ ಮತ್ತು ಅದರ ನಾಯಕರು ಖಾಸಗಿ ಎಫ್ಎಸ್‌ಎಲ್ ವರದಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಖಾಸಗಿ ಎಫ್‌ಎಸ್‌ಎಲ್ ವರದಿಯನ್ನು ಹಂಚಿಕೊಂಡಿದ್ದು, “ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ, ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುವುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಝಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ ಎಫ್‌ಎಸ್‌ಎಲ್ ವರದಿಯಲ್ಲಿ ಬಟಾ ಬಯಲಾಗಿದೆ. ರಾಷ್ಟ್ರ ವಿರೋಧಿ ಧೋರಣೆಯ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು” ಎಂದು ಬರೆದುಕೊಳ್ಳಲಾಗಿದೆ.
ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.… pic.twitter.com/sf92Yy43Xv
— BJP Karnataka (@BJP4Karnataka) March 4, 2024
“ಬಿಜೆಪಿ ರಾಜ್ಯಾಧ್ಯಕ್ಷರ ಬಿವೈ ವಿಜಯೇಂದ್ರ ಕೂಡ ಖಾಸಗಿ ಎಫ್‌ಎಸ್‌ಎಲ್ ವರದಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಾನ್ಯ ಸಿದ್ದರಾಮ್ಯನವರೇ ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ, ದೇಶ ದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ. ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನ ಸೌಧಕ್ಕೆ ಧಾವಿಸಿ ಬಂದು ಪೋಲಿಸರ ಎದುರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವಷ್ಟರ ಮಟ್ಟಿಗೆ ವಿದ್ರೋಹಿಗಳು ಧೈರ್ಯ ತೋರುತ್ತಾರೆ. ಇದರ ಬೆನ್ನಲೇ ರಾಜಧಾನಿಯಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿ ಅಡಗಿ ಕುಳಿತಿದೆ ? ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ರಾಜ್ಯದ ಜನರನ್ನು ಕಾಡುತ್ತಿದೆ” ಎಂದಿದ್ದಾರೆ.
ಮಾನ್ಯ @siddaramaiah ನವರೇ,
ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ, ದೇಶ ದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ, ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನ ಸೌಧಕ್ಕೆ ಧಾವಿಸಿ ಬಂದು ಪೋಲಿಸರ ಎದುರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವಷ್ಟರ ಮಟ್ಟಿಗೆ ವಿದ್ರೋಹಿಗಳು… pic.twitter.com/RWWmeMcc4O— Vijayendra Yediyurappa (@BYVijayendra) March 4, 2024
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಶಕ್ತಿಗಳಿಗೆ ಸ್ವತಂತ್ರ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ. ಜನರು ಆತಂಕದ ನೆರಳಿನಲ್ಲಿ ಬದುಕುವ ಸ್ಥಿತಿ ಬಂದೊದಗಿದೆ.’ಬೆಂದ ಮನೆಯಲ್ಲಿ ಗಳ ಇರಿಯುವ’ ರಾಜಕಾರಣ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ. ವಿಧಾನ ಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿ ಬಂದರೆ ನಾವು ಕೈಕಟ್ಟಿ ಕೂರಬೇಕೇ? ಈ ಸಂಬಂಧ ಮಾಧ್ಯಮಗಳ ವರದಿ ನೀವು ನಂಬಲ್ಲಿಲ್ಲ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಲಿಸಲಿಲ್ಲ, ರಾಷ್ಟ್ರ ಹಿತಾಸಕ್ತಿಯ ಈ ಗಂಭೀರ ಪ್ರಕರಣದ ಬಗ್ಗೆ ತಾತ್ಸಾರ ತೋರುತ್ತಿರುವುದರ ನಿಮ್ಮ ವರ್ತನೆ ರಾಷ್ಟ್ರ ದ್ರೋಹಿಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿರುವಂತಿದೆ. ಖಾಸಗಿ ಎಫ್‌ಎಸ್‌ಎಲ್ ವರದಿ ಈಗಾಗಲೇ ಈ ಕುರಿತು ಧೃಡೀಕರಣ ನೀಡಿಯಾಗಿದೆ. ಸರ್ಕಾರಿ ವರದಿ ಕೂಡ ನಿಮ್ಮ ಕೈ ಸೇರಿದೆ. ಆದಾಗ್ಯೂ ವರದಿ ಇನ್ನೂ ತಲುಪಿಲ್ಲ ಎಂಬ ಹಸೀ ಸುಳ್ಳು ಹೇಳುತ್ತಿರುವ ನಿಮ್ಮ ನಡೆ, ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ” ಎಂದು ಬರೆದುಕೊಂಡಿದ್ದಾರೆ.
“ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೂಡ ಎಕ್ಸ್‌ನಲ್ಲಿ ವರದಿ ಹಂಚಿಕೊಂಡಿದ್ದು, “ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಸತ್ಯ ಎಂದು ಖಾಸಗಿ ವರದಿಯೊಂದು ಧೃಢ ಪಡಿಸಿದೆ. ಎಫ್‌ಎಸ್‌ಎಲ್ ವರದಿಯಲ್ಲೂ ಇದು ಖಚಿತವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಗೊಂದಲಕ್ಕೆಲ್ಲಾ ಒಂದು ಶಾಶ್ವತ ತೆರೆ ಎಳೆಯಬೇಕಾದರೆ ಸರ್ಕಾರ ಎಫ್‌ಎಸ್‌ಎಲ್ ವರದಿಯನ್ನು ತಕ್ಷಣ ಬಹಿರಂಗಪಡಿಸಬೇಕು. ಆದರೆ ವರದಿ ಬಹಿರಂಗಪಡಿಸಲು ಹಿಂದೆ ಮುಂದೆ ನೋಡುತ್ತಿರುವ ಸಿಎಂ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿಗೂಢ ನಡೆ ನೋಡುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಏನನ್ನೂ ಮುಚ್ಚಿಡಲು, ಯಾರನ್ನೋ ರಕ್ಷಿಸಲು, ಯಾವುದೋ ಒತ್ತಡದಲ್ಲಿ ಇರುವಂತೆ ಕಾಣಿಸುತ್ತಿದೆ” ಎಂದಿದ್ದಾರೆ.
ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಸತ್ಯ ಎಂದು ಖಾಸಗಿ ವರದಿಯೊಂದು ಧೃಢ ಪಡಿಸಿದೆ. FSL ವರದಿಯಲ್ಲೂ ಇದು ಖಚಿತವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಈ ಗೊಂದಲಕ್ಕೆಲ್ಲಾ ಒಂದು ಶಾಶ್ವತ ತೆರೆ ಎಳೆಯಬೇಕಾದರೆ ಸರ್ಕಾರ FSL ವರದಿಯನ್ನ ತಕ್ಷಣ ಬಹಿರಂಗಪಡಿಸಬೇಕು. ಆದರೆ ವರದಿ ಬಹಿರಂಗ ಪಡಿಸಲು… pic.twitter.com/N6Pn16Z3OJ
— R. Ashoka (ಮೋದಿ ಅವರ ಕುಟುಂಬ) (@RAshokaBJP) March 4, 2024
“ಸಿಎಂ ಸಿದ್ದರಾಮಯ್ಯನವರೇ, ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ತಾವು ಸತ್ಯವನ್ನ ತುಳಿದರೆ ಅದು ನಿಮಗೆ ಶೋಭೆ ತರುವುದಿಲ್ಲ. ದೇಶಕ್ಕಿಂತ ತಮಗೆ ಪಕ್ಷವೇ ಹೆಚ್ಚಾಗಿ ಹೋಯಿತೇ? ರಾಷ್ಟ್ರದ ಹಿತಾಸಕ್ತಿಗಿಂತ ವೋಟು ಬ್ಯಾಂಕ್ ರಾಜಕಾರಣವೇ ದೊಡ್ಡದಾಯಿತೇ? ಮೊದಲು ದೇಶ ಉಳಿದರೆ, ದೇಶ ಸುರಕ್ಷಿತವಾಗಿದ್ದರೆ ನಂತರ ನಿಮ್ಮ ಪಕ್ಷ, ವೋಟು, ಅಧಿಕಾರ ಎಲ್ಲಾ ಇರಲು ಸಾಧ್ಯ. ತಮಗೆ ಕಿಂಚಿತ್ತಾದರೂ ದೇಶಪ್ರೇಮವಿದ್ದರೆ ಈ ಕೂಡಲೇ ಎಫ್‌ಎಸ್‌ಎಲ್ ವರದಿ ಬಹಿರಂಗ ಮಾಡಿ ದೇಶದ ಜನತೆಗೆ ಕ್ಷಮೆ ಕೇಳಿ” ಎಂದು ಆಗ್ರಹಿಸಿದ್ದಾರೆ.
“ಬಿಜೆಪಿ ನಾಯಕರು ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್, ಸರ್ಕಾರದ ಅಧಿಕೃತ ಎಫ್‌ಎಸ್‌ಎಲ್ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಎಫ್‌ಎಸ್‌ಎಲ್ ವರದಿಯಲ್ಲಿ ತಿಳಿಯಬೇಕಾದ ಅಂಶ ವಿಡಿಯೋ ಅಸಲಿಯೋ ನಕಲಿಯೋ ಎನ್ನುವುದಕ್ಕಿಂತ ವಿಡಿಯೋದಲ್ಲಿ ಘೋಷಣೆ ಕೂಗಿದ್ದು ಪಾಕಿಸ್ತಾನ ಅಥವಾ ನಾಸಿರ್ ಸಾಬ್ ಎನ್ನುವುದು. ಯಾವುದೊ ನಕಲಿ ವರದಿಯನ್ನು ಸೃಷ್ಟಿ ಮಾಡಿದ ಬಿಜೆಪಿ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಸುಳ್ಳುಗಳ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿರುವ ಬಿಜೆಪಿ” ಎಂದು ಬರೆದುಕೊಂಡಿದೆ.
ಸರ್ಕಾರದ ಅಧಿಕೃತ FSL ವರದಿ ಇನ್ನೂ ಬಿಡುಗಡೆಯಗಿಲ್ಲ,
FSL ವರದಿಯಲ್ಲಿ ತಿಳಿಯಬೇಕಾದ ಅಂಶ ವಿಡಿಯೋ ಅಸಲಿಯೋ ನಕಲಿಯೋ ಎನ್ನುವುದಕ್ಕಿಂತ ವಿಡಿಯೋದಲ್ಲಿ ಘೋಷಣೆ ಕೂಗಿದ್ದು ಪಾಕಿಸ್ತಾನ ಅಥವಾ ನಾಸಿರ್ ಸಾಬ್ ಎನ್ನುವುದು.
ಯಾವುದೊ ನಕಲಿ ವರದಿಯನ್ನು ಸೃಷ್ಟಿ ಮಾಡಿದ @BJP4Karnataka ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ.
ಸುಳ್ಳುಗಳ… https://t.co/HIu4x3D1J0
— Karnataka Congress (@INCKarnataka) March 4, 2024
ಮತ್ತೊಂದು ಪೋಸ್ಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ಏನು ಬೇಕಿದ್ದರೂ ತಯಾರಾಗುತ್ತವೆ. ಪಾಕಿಸ್ತಾನ್ ಜಿಂದಾಬಾದ್ ಎನ್ನುವುದೂ ಬಿಜೆಪಿ ಫ್ಯಾಕ್ಟರಿಯಲ್ಲೇ ತಯಾರಾಗುತ್ತವೆ. ಎಫ್‌ಎಸ್‌ಎಲ್ ರಿಪೋರ್ಟ್‌ಗಳೂ ಬಿಜೆಪಿಯಲ್ಲೇ ತಯಾರಾಗುತ್ತವೆ. ಸುಳ್ಳು, ನಕಲಿತನವನ್ನು ಹುಟ್ಟಿಸಿದ ಅಪ್ಪ ಅಮ್ಮನೇ ಬಿಜೆಪಿ!. ನಕಲಿ, ಅನಧಿಕೃತ ಎಫ್‌ಎಸ್‌ಎಲ್ ವರದಿಯನ್ನು ತಯಾರಿಸಿದಯ ಫೇಕ್ ಫ್ಯಾಕ್ಟರಿಗೆ ಬೀಗ ಜಡಿಯುವುದು ನಮ್ಮ ಸರ್ಕಾರಕ್ಕೆ ತಿಳಿದಿದೆ” ಎಂದಿದೆ.
ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ಏನು ಬೇಕಿದ್ದರೂ ತಯಾರಾಗುತ್ತವೆ,
ಪಾಕಿಸ್ತಾನ್ ಜಿಂದಾಬಾದ್ ಎನ್ನುವುದೂ ಬಿಜೆಪಿ ಫ್ಯಾಕ್ಟರಿಯಲ್ಲೇ ತಯಾರಾಗುತ್ತವೆ, FSL ರಿಪೋರ್ಟ್ ಗಳೂ ಬಿಜೆಪಿಯಲ್ಲೇ ತಯಾರಾಗುತ್ತವೆ,
ಸುಳ್ಳು, ನಕಲಿತನವನ್ನು ಹುಟ್ಟಿಸಿದ ಅಪ್ಪ ಅಮ್ಮನೇ ಬಿಜೆಪಿ!
ನಕಲಿ, ಅನಧಿಕೃತ FSL ವರದಿಯನ್ನು ತಯಾರಿಸಿದ @BJP4Karnataka ಯ ಫೇಕ್…
— Karnataka Congress (@INCKarnataka) March 4, 2024
thesouthfirst.com ನ ಕಾರ್ಯ ನಿರ್ವಾಹಕ ಸಂಪಾದಕಿ ಅನುಶಾ ರವಿ ಸೂದ್ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, “ಸಂವಾದ ಫೌಂಡೇಶನ್ ಎಂಬ ಸಂಸ್ಥೆ ಖಾಸಗಿ ಏಜೆನ್ಸಿ ಮೂಲಕ ಮಾಡಿಸಿರುವ ವಿಧಿ ವಿಜ್ಞಾನ ಪರೀಕ್ಷೆಯ ವರದಿ ಇಲ್ಲಿದೆ. ಈ ವರದಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ದೃಢೀಕರಿಸಲಾಗಿದೆ. ಹಲವಾರು ಮಾಧ್ಯಮಗಳು ಇದನ್ನು ಅಧಿಕೃತ “ಎಫ್‌ಎಸ್‌ಎಲ್ ವರದಿ” ಎಂದು ಹಂಚಿಕೊಂಡಿದೆ. ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ಸ್ಪಷ್ಟವಾಗಿ ಹೇಳಿದೆ. ಅವರು ಈ ತೀರ್ಮಾನಕ್ಕೆ ಹೇಗೆ ಬಂದರು ಎಂಬುವುದು ಇಲ್ಲಿದೆ” ಎಂದು ಬರೆದುಕೊಂಡಿದ್ದು, ಖಾಸಗಿ ವರದಿಯನ್ನು ಹಂಚಿಕೊಂಡಿದ್ದಾರೆ.
Here is the Foresnsic Examination report by a private agency gotten done by Samvada Foundation whose contents was passed off as official "FSL report" by several media outlets as having "confirmed" pro-Pakistan slogan.
The report, at best says, it's "highly probable" & here's how… pic.twitter.com/FwRvHrMuIG
— Anusha Ravi Sood (@anusharavi10) March 4, 2024
ಖಾಸಗಿ ಎಫ್‌ಎಸ್‌ಎಲ್ ವರದಿ ಯಾರದ್ದು?
“ಸಂವಾದ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆಯು clue4evidence ಎಂಬ ಸಂಸ್ಥೆಯ ಮೂಲಕ ಎಫ್‌ಎಸ್‌ಎಲ್ ವರದಿ ಪಡೆದಿದೆ. ವರದಿ ನೀಡಿರುವುದು ಫಣೀಂದ್ರ ಬಿ.ಎನ್ ಎಂಬ ವ್ಯಕ್ತಿ. ಇವರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಷಯಗಳನ್ನು ಗಮನಿಸಿದರೆ, ಈತ ಮುಸ್ಲಿಂ ದ್ವೇಷ ಇರುವ ಸಂಘಪರಿವಾರದ ಕಾಲಾಳು ಎಂಬುದು ಸ್ಪಷ್ಟವಾಗುತ್ತದೆ. clue4evidence ಸಂಸ್ಥೆಯ ಮುಖ್ಯಕಚೇರಿ ಬೆಂಗಳೂರಿನ ಡಿಕನ್ ಸನ್ ರಸ್ತೆಯಲ್ಲಿದ್ದು, ಮೈಸೂರು ಮತ್ತು ಕೊಚ್ಚಿನ್ ನಲ್ಲಿ ಕಚೇರಿಗಳನ್ನು ಹೊಂದಿದೆ ಎಂದು ಅದರ ವೆಬ್ ಸೈಟ್ ಹೇಳುತ್ತದೆ. ಖಾಸಗಿಯಾಗಿ ಎಫ್‌ಎಸ್‌ಎಲ್ ವರದಿಗಳನ್ನು ಮಾಡುವ ಇದು, ಡಿಎನ್ ಎ ಅನಾಲಿಸಿಸ್ ಮಾಡುವುದಾಗಿಯೂ ಹೇಳಿಕೊಳ್ಳುತ್ತದೆ ಎಂದು kannadaplanet.com ವರದಿ ಮಾಡಿದೆ.

ಫಣೀಂದ್ರ ಬಿ.ಎನ್ ಸಹಿ ಮಾಡಿರುವ ಎಫ್‌ಎಸ್‌ಎಲ್ ವರದಿಯಲ್ಲಿ ನಾಸೀರ್ ಸಾಬ್ ಝಿಂದಾಬಾದ್ ಮತ್ತು ಪಾಕಿಸ್ತಾನ್ ಝಿಂದಾಬಾದ್ ಘೋಷಣೆಗಳ ನಡುವೆ ಪಾಕಿಸ್ತಾನ್ ಝಿಂದಾಬಾದ್ ಎಂದೇ ಕೂಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆಯಾದರೂ, ಪಾಕಿಸ್ತಾನ್ ಝಿಂದಾಬಾದ್ ಘೋಷಣೆಯನ್ನೇ ಕೂಗಲಾಗಿದೆ ಎಂದು ಹೇಳಿಲ್ಲ ಎಂದು ತಿಳಿಸಿದೆ.
ಗೃಹ ಸಚಿವರು ಹೇಳಿದ್ದೇನು?
ಖಾಸಗಿ ಸಂಸ್ಥೆಯವರು ನೀಡಿರುವ ಎಫ್ಎಸ್ಎಲ್ ವರದಿಯನ್ನು ಗಣನೆಗೆ ತೆಗೆದುಕೊಳ್ಳಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಎಫ್ಎಸ್ಎಲ್, ಗೃಹ ಇಲಾಖೆಯ ಫಾರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪಾಕಿಸ್ತಾನ್ ಘೋಷಣೆ ಕೂಗಿರುವ ಆರೋಪದ ಕುರಿತು ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರ ಆಪಾದಿತ ಆಡಿಯೋವನ್ನು ಸರ್ಕಾರದ ಅಧಿಕೃತ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದೆ. ಈ ಪರೀಕ್ಷೆಯ ವರದಿ ಬಂದ ಬಳಿಕ ಅಧಿಕೃತ ಎನ್ನಬಹುದು. ಅಲ್ಲದೆ, ಖಾಸಗಿ ವರದಿಯನ್ನು ನೂಡಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.
ಇದನ್ನೂ ಓದಿ : ಲೋಕಸಭೆ ಚುನಾವಣೆ: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರಿಲ್ಲ ಯಾಕೆ?


