Homeಕರ್ನಾಟಕ189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು ಬಿಜೆಪಿ ತನ್ನ ಮೊದಲ ಪಟ್ಟಿ ಪ್ರಕಟಿಸಿದೆ. 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿ, ವರುಣ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯನವರ ಎದುರು ಸೋಮಣ್ಣನವರನ್ನು ಕಣಕ್ಕೆ ಇಳಿಸುತ್ತಿದೆ. ಜೊತೆಗೆ ಚಾಮರಾಜನಗರ ಕ್ಷೇತ್ರದಿಂದಲೂ ಲಿಂಗಾಯತ ಸಮುದಾಯದ ಸೋಮಣ್ಣನವರನ್ನು ಹುರಿಯಾಳು ಮಾಡಲಾಗಿದೆ.

ಒಕ್ಕಲಿಗ ಸಮುದಾಯದ ಆರ್‌.ಅಶೋಕ್ ಅವರನ್ನೂ ಎರಡು ಕಡೆಯಲ್ಲಿ ಕಣಕ್ಕೆ ಇಳಿಸಲಾಗುತ್ತಿದೆ. ಅಶೋಕ್ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಪದ್ಮನಾಭನಗರ ಸೇರಿದಂತೆ ಕನಕಪುರದಿಂದ ಸ್ಪರ್ಧಿಸಲಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಅಶೋಕ್ ಅವರನ್ನು ನಿಲ್ಲಿಸಲಾಗುತ್ತಿದೆ.

ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್‌ಸಿ –30, ಎಸ್‌ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.

ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಈಗಾಗಲೇ 166 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇತ್ತ ಜೆಡಿಎಸ್‌ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ.

ಬಿಜೆಪಿ ಅಭ್ಯರ್ಥಿಗಳು:

ಶಿಗ್ಗಾವಿ– ಬಸವರಾಜ ಬೊಮ್ಮಾಯಿ

ನಿಪ್ಪಾಣಿ– ಶಶಿಕಲಾ ಜೊಲ್ಲೆ

ಚಿಕ್ಕೋಡಿ–ಸದಲಗ– ರಮೇಶ್‌ ಕತ್ತಿ

ಅಥಣಿ– ಮಹೇಶ ಕುಮಠಳ್ಳಿ

ಕಾಗವಾಡ– ಶ್ರೀಮಂತ ಪಾಟೀಲ

ಕುಡಚಿ(ಎಸ್‌ಸಿ) – ಪಿ. ರಾಜೀವ್‌

ರಾಯಭಾಗ (ಎಸ್‌ಸಿ)– ದುರ್ಯೋಧನ ಐಹೊಳೆ

ಹುಕ್ಕೇರಿ– ನಿಖಿಲ್‌ ಕತ್ತಿ

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ– ರಮೇಶ ಜಾರಕಿಹೊಳಿ

ಯಮಕನಮರಡಿ(ಎಸ್‌ಟಿ) – ಬಸವರಾಜ ಹುಂದ್ರಿ

ಬೆಳಗಾವಿ ಉತ್ತರ– ಡಾ. ರವಿ ‍ಪಾಟೀಲ

ಬೆಳಗಾವಿ ದಕ್ಷಿಣ– ಅಭಯ ಪಾಟೀಲ

ಬೆಳಗಾವಿ ಗ್ರಾಮಾಂತರ– ನಾಗೇಶ್‌ ಮನ್ನೋಳ್ಕರ್‌

ಖಾನಾಪುರ– ವಿಠಲ ಹಲಗೇಕರ್‌

ಕಿತ್ತೂರು– ಮಹಾಂತೇಶ್‌ ದೊಡ್ಡಗೌಡರ

ಬೈಲಹೊಂಗಲ– ಜಗದೀಶ್‌ ಚನ್ನಪ್ಪ ಮೆಟಗುಡ್ಡ

ಸವದತ್ತಿ– ಯಲ್ಲಮ್ಮ– ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ– ಚಿಕ್ಕರೇವಣ್ಣ

ಮುಧೋಳ(ಎಸ್‌ಸಿ) – ಗೋವಿಂದ ಕಾರಜೋಳ

ತೇರದಾಳ– ಸಿದ್ದು ಸವದಿ

ಜಮಖಂಡಿ– ಜಗದೀಶ್‌ ಗುಡಗುಂಟಿ

ಬೀಳಗಿ– ಮುರುಗೇಶ ನಿರಾಣಿ

ಬಾದಾಮಿ– ಶಾಂತಾ ಗೌಡ ಪಾಟೀಲ

ಬಾಗಲಕೋಟೆ– ವೀರಭದ್ರಯ್ಯ ಚರಂತಿಮಠ

ಹುನಗುಂದ– ದೊಡ್ಡನಗೌಡ ಜಿ. ಪಾಟೀಲ

ಮುದ್ದೇಬಿಹಾಳ– ಎ.ಎಸ್‌. ಪಾಟೀಲ ನಡಹಳ್ಳಿ

ಬಬಲೇಶ್ವರ– ವಿಜು ಗೌಡ ಎಸ್‌. ಪಾಟೀಲ

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ

ಸಿಂದಗಿ– ರಮೇಶ ಭೂಸನೂರ

ಫಜಲಪುರ– ಮಾಲೀಕಯ್ಯ ಗುತ್ತೇದಾರ

ಜೇವರ್ಗಿ– ಶಿವನಗೌಡ ಪಾಟೀಲ ರಡ್ಡೇವಾಡಗಿ

ಸುರಪುರ (ಎಸ್‌ಟಿ)– ನರಸಿಂಹ ನಾಯಕ (ರಾಜೂ ಗೌಡ)

ಶಹಾ‍ಪುರ– ಅಮೀನ್‌ರೆಡ್ಡಿ ಯಾಲಗಿ

ಯಾದಗಿರಿ– ವೆಂಕಟರೆಡ್ಡಿ ಮುದ್ನಾಳ

ಚಿತ್ತಾಪುರ (ಎಸ್‌ಸಿ)– ಮಣಿಕಂಠ ರಾಠೋಡ್‌

ಚಿಂಚೋಳಿ (ಎಸ್‌ಸಿ)– ಡಾ.ಅವಿನಾಶ್ ಜಾಧವ್‌

ಕಲಬುರಗಿ ಗ್ರಾಮಾಂತರ (ಎಸ್‌ಸಿ)– ಬಸವರಾಜ ಮತ್ತಿಮೂಡ

ಕಲಬುರಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ ಉತ್ತರ– ಚಂದ್ರಕಾಂತ್ ಪಾಟೀಲ

ಆಳಂದ– ಸುಭಾಷ್‌ ಗುತ್ತೇದಾರ

ಬಸವಕಲ್ಯಾಣ– ಶರಣು ಸಲಗರ

ಹುಮ್ನಾಬಾದ್‌– ಸಿದ್ದು ಪಾಟೀಲ

ಬೀದರ್‌ ದಕ್ಷಿಣ– ಡಾ. ಶೈಲೇಂದ್ರ ಬೆಲ್ದಾಳೆ

ಔರಾದ್‌ (ಎಸ್‌ಸಿ)– ಪ್ರಭು ಚವ್ಹಾಣ್‌

ರಾಯಚೂರು ಗ್ರಾಮಾಂತರ (ಎಸ್‌ಟಿ)– ತಿಪ್ಪರಾಜು ಹವಾಲ್ದಾರ್‌

ರಾಯಚೂರು– ಡಾ. ಶಿವರಾಜ ಪಾಟೀಲ

ದೇವದುರ್ಗ (ಎಸ್‌ಟಿ)– ಕೆ. ಶಿವನಗೌಡ ನಾಯಕ

ಲಿಂಗಸುಗೂರು (ಎಸ್‌ಸಿ)– ಮಾನಪ್ಪ ಡಿ. ವಜ್ಜಲ್‌

ಸಿಂಧನೂರು– ಕೆ. ಕರಿಯಪ್ಪ

ಮಸ್ಕಿ (ಎಸ್‌ಟಿ)– ಪ್ರತಾಪಗೌಡ ಪಾಟೀಲ

ಕುಷ್ಟಗಿ– ದೊಡ್ಡನಗೌಡ ಪಾಟೀಲ

ಕನಕಗಿರಿ (ಎಸ್‌ಸಿ)– ಬಸವರಾಜ ದಢೇಸಗೂರು

ಯಲಬುರ್ಗಾ– ಹಾಲಪ್ಪ ಬಸಪ್ಪ ಆಚಾರ್

ಶಿರಹಟ್ಟಿ (ಎಸ್‌ಸಿ)– ಡಾ. ಚಂದ್ರು ಲಮಾಣಿ

ಗದಗ– ಅನಿಲ್‌ ಮೆಣಸಿನಕಾಯಿ

ನರಗುಂದ– ಸಿ.ಸಿ. ಪಾಟೀಲ

ನವಲಗುಂದ– ಶಂಕರ ಪಾಟೀಲ ಮುನೇನಕೊಪ್ಪ

ಕುಂದಗೋಳ– ಎಂ.ಆರ್‌. ಪಾಟೀಲ

ಧಾರವಾಡ– ಅಮೃತ ಅಯ್ಯಪ್ಪ ದೇಸಾಯಿ

ಹುಬ್ಬಳ್ಳಿ– ಧಾರವಾಡ ಪೂರ್ವ (ಎಸ್‌ಸಿ)– ಡಾ. ಕ್ರಾಂತಿ ಕಿರಣ್‌

ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ

ಹಳಿಯಾಳ– ಸುನೀಲ್‌ ಹೆಗ್ಡೆ

ಕಾರವಾರ– ರೂಪಾಲಿ ನಾಯ್ಕ

ಕುಮಟಾ– ದಿನಕರ ಶೆಟ್ಟಿ

ಭಟ್ಕಳ– ಸುನೀಲ್‌ ನಾಯ್ಕ

ಶಿರಸಿ– ವಿಶ್ವೇಶ್ವರ ಹಗಡೆ ಕಾಗೇರಿ

ಯಲ್ಲಾಪುರ– ಶಿವರಾಂ ಹೆಬ್ಬಾರ್‌

ಬ್ಯಾಡಗಿ– ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು– ಬಿ.ಸಿ. ಪಾಟೀಲ

ರಾಣೆಬೆನ್ನೂರು– ಅರುಣ್‌ ಕುಮಾರ್‌ ಪೂಜಾರ

ಹಡಗಲಿ (ಎಸ್‌ಸಿ)– ಕೃಷ್ಣಾ ನಾಯ್ಕ್‌

ಕಂಪ್ಲಿ (ಎಸ್‌ಟಿ)– ಟಿ.ಎಚ್‌. ಸುರೇಶ್‌ ಬಾಬು

ಸಿರಗುಪ್ಪ (ಎಸ್‌ಟಿ)– ಎಂ.ಎಸ್‌. ಸೋಮಲಿಂಗಪ್ಪ

ಬಳ್ಳಾರಿ (ಎಸ್‌ಟಿ)– ಬಿ. ಶ್ರೀರಾಮುಲು

ಬಳ್ಳಾರಿ ನಗರ– ಗಾಲಿ ಸೋಮಶೇಖರ ರೆಡ್ಡಿ

ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ (ಎಸ್‌ಟಿ)– ಲೋಕೇಶ್‌ ವಿ. ನಾಯಕ್‌

ಮೊಳಕಾಲ್ಮುರು (ಎಸ್‌ಟಿ)– ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ (ಎಸ್‌ಟಿ)– ಅನಿಲ್‌ ಕುಮಾರ್‌

ಚಿತ್ರದುರ್ಗ– ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು– ಪೂರ್ಣಿಮಾ ಶ್ರೀನಿವಾಸ್‌

ಹೊಳಲ್ಕೆರೆ (ಎಸ್‌ಸಿ)– ಎಂ. ಚಂದ್ರಪ್ಪ

ಜಗಳೂರು (ಎಸ್‌ಟಿ)– ಎಸ್‌.ವಿ. ರಾಮಚಂದ್ರ

ಹರಿಹರ– ಬಿ.ಪಿ. ಹರೀಶ್‌

ಹೊನ್ನಾಳಿ– ಎಂ.‍ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)– ಅಶೋಕ್‌ ನಾಯ್ಕ್‌

ಭದ್ರಾವತಿ– ಮಂಗೋಟಿ ರುದ್ರೇಶ್‌

ತೀರ್ಥಹಳ್ಳಿ– ಆರಗ ಜ್ಞಾನೇಂದ್ರ

ಶಿಕಾರಿಪುರ– ಬಿ.ವೈ. ವಿಜಯೇಂದ್ರ

ಸೊರಬ– ಕುಮಾರ್‌ ಬಂಗಾರಪ್ಪ

ಸಾಗರ– ಹರತಾಳು ಎಚ್‌. ಹಾಲಪ್ಪ

ಕುಂದಾಪುರ– ಕಿರಣ್‌ ಕುಮಾರ್‌ ಕೊಡ್ಗಿ’

ಉಡುಪಿ– ಯಶ್ಪಾಲ್‌ ಸುವರ್ಣ

ಕಾಪು– ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ– ವಿ. ಸುನಿಲ್‌ ಕುಮಾರ್‌

ಶೃಂಗೇರಿ– ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು– ಸಿ.ಟಿ. ರವಿ

ತರೀಕೆರೆ–ಡಿ.ಎಸ್. ಸುರೇಶ್

ಕಡೂರು– ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ–ಜೆ.ಸಿ. ಮಾಧುಸ್ವಾಮಿ

ತಿಪಟೂರು–ಬಿ.ಸಿ. ನಾಗೇಶ್

ತುರುವೇಕೆರೆ– ಮಸಾಲಾ ಜಯರಾಂ

ಕುಣಿಗಲ್–ಡಿ.ಕೃಷ್ಣಕುಮಾರ್

ತುಮಕೂರು ನಗರ–ಜಿ.ಬಿ. ಜ್ಯೋತಿಗಣೇಶ್

ತುಮಕೂರು ಗ್ರಾಮಾಂತರ–ಬಿ. ಸುರೇಶ್ ಗೌಡ ‌

ಕೊರಟಗೆರೆ–ಬಿ.ಎಚ್. ಅನಿಲ್‌ ಕುಮಾರ್

ಶಿರಾ–ರಾಜೇಶಗೌಡ

ಪಾವಗಡ–ಕೃಷ್ಣ ನಾಯಕ್

ಮಧುಗಿರಿ–ಎಲ್.ಸಿ. ನಾಗರಾಜ್

ಗೌರಿಬಿದನೂರು–ಶಶಿಧರ್

ಬಾಗೇಪಲ್ಲಿ–ಸಿ. ಮುನಿರಾಜು

ಚಿಕ್ಕಬಳ್ಳಾಪುರ–ಕೆ. ಸುಧಾಕರ್

ಚಿಂತಾಮಣಿ–ವೇಣುಗೋಪಾಲ್ ‌

ಶ್ರೀನಿವಾಸಪುರ–ಗುಂಜೂರು ಶ್ರೀನಿವಾಸರೆಡ್ಡಿ

ಮುಳಬಾಗಿಲು–ಶೀಗೇಹಳ್ಳಿ ಸುಂದರ್

ಬಂಗಾರಪೇಟೆ–ಎಂ. ನಾರಾಯಣಸ್ವಾಮಿ

ಕೋಲಾರ–ವರ್ತೂರು ಪ್ರಕಾಶ್

ಮಾಲೂರು–ಕೆ.ಎಸ್. ಮಂಜುನಾಥ ಗೌಡ

ಯಲಹಂಕ–ಎಸ್.ಆರ್. ವಿಶ್ವನಾಥ್

ಕೆ.ಆರ್.ಪುರ–ಬೈರತಿ ಬಸವರಾಜ್

ಬ್ಯಾಟರಾಯನಪುರ–ತಮ್ಮೇಶ್ ಗೌಡ

ಯಶವಂತಪುರ–ಎಸ್.ಟಿ. ಸೋಮಶೇಖರ್

ಆರ್.ಆರ್. ನಗರ–ಮುನಿರತ್ನ ನಾಯ್ಡು

ದಾಸರಹಳ್ಳಿ–ಎಸ್. ಮುನಿರಾಜು

ಮಹಾಲಕ್ಷ್ಮೀ ಲೇ ಔಟ್–ಕೆ.ಗೋಪಾಲಯ್ಯ

ಮಲ್ಲೇಶ್ವರ– ಸಿ.ಎನ್. ಅಶ್ವತ್ಥನಾರಾಯಣ

ಪುಲಕೇಶಿ ನಗರ– ಮುರಳಿ

ಸರ್ವಜ್ಞನಗರ–ಪದ್ಮನಾಭ ರೆಡ್ಡಿ

ಸಿ.ವಿ.ರಾಮನ್ ನಗರ–ಎಸ್.ರಘು

ಶಿವಾಜಿನಗರ–ಎನ್. ಚಂದ್ರ

ಶಾಂತಿನಗರ–ಶಿವಕುಮಾರ್

ಗಾಂಧಿನಗರ– ಎ.ಆರ್. ಸಪ್ತಗಿರಿಗೌಡ

ರಾಜಾಜಿನಗರ–ಎಸ್.ಸುರೇಶ್‌ಕುಮಾರ್

ವಿಜಯನಗರ–ಎಚ್‌.ರವೀಂದ್ರ

ಚಾಮರಾಜಪೇಟೆ–ಭಾಸ್ಕರರಾವ್

ಚಿಕ್ಕಪೇಟೆ–ಉದಯ ಗರುಡಾಚಾರ್

ಬಸವನಗುಡಿ–ಎಲ್.ಎ. ರವಿಸುಬ್ರಹ್ಮಣ್ಯ

ಪದ್ಮನಾಭಗರ–ಆರ್.ಅಶೋಕ

ಬಿ.ಟಿ.ಎಂ. ಲೇ ಔಟ್–ಶ್ರೀಧರ ರೆಡ್ಡಿ

ಜಯನಗರ–ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ–ಸತೀಶ ರೆಡ್ಡಿ

ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ

ಆನೇಕಲ್–ಹುಲ್ಲಳ್ಳಿ ಶ್ರೀನಿವಾಸ್‌

ಹೊಸಕೋಟೆ–ಎಂ.ಟಿ.ಬಿ. ನಾಗರಾಜ್

ದೇವನಹಳ್ಳಿ–ಪಿಳ್ಳ ಮುನಿಶ್ಯಾಮಪ್ಪ

ದೊಡ್ಡಬಳ್ಳಾಪುರ–ಧೀರಜ್ ಮುನಿರಾಜು

ನೆಲಮಂಗಲ–ಸಪ್ತಗಿರಿ ನಾಯ್ಕ್

ಮಾಗಡಿ–ಪ್ರಸಾದ್ ಗೌಡ

ರಾಮನಗರ–ಗೌತಮಗೌಡ

ಕನಕಪುರ–ಆರ್. ಅಶೋಕ ‌

ಚನ್ನಪಟ್ಟಣ–ಸಿ.ಪಿ. ಯೋಗೇಶ್ವರ್

ಮಳವಳ್ಳಿ–ಮುನಿರಾಜು

ಮದ್ದೂರು–ಎಸ್.ಪಿ. ಸ್ವಾಮಿ

ಮೇಲುಕೋಟೆ–ಇಂದ್ರೇಶ್ ಕುಮಾರ್

ಮಂಡ್ಯ–ಅಶೋಕ ಜಯರಾಂ

ಶ್ರೀರಂಗಪಟ್ಟಣ–ಇಂಡವಾಳು ಸಚ್ಚಿದಾನಂದ

ನಾಗಮಂಗಲ–ಸುಧಾ ಶಿವರಾಂ

ಕೆ.ಆರ್. ಪೇಟೆ–ಕೆ.ಸಿ. ನಾರಾಯಣಗೌಡ

ಬೇಲೂರು–ಉಳ್ಳಳ್ಳಿ ಸುರೇಶ್

ಹಾಸನ–ಜೆ. ಪ್ರೀತಂಗೌಡ ‌

ಹೊಳೆನರಸೀಪುರ–ದೇವರಾಜೇಗೌಡ

ಅರಕಲಗೂಡು–ಯೋಗಾ ರಮೇಶ್

ಸಕಲೇಶ ‍ಪುರ–ಸಿಮೆಂಟ್ ಮಂಜು

ಬೆಳ್ತಂಗಡಿ–ಹರೀಶ್ ಪೂಂಜ

ಮೂಡಬಿದರೆ–ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ–ಭರತ್ ಶೆಟ್ಟಿ

ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್ ‌

ಮಂಗಳೂರು–ಸತೀಶ್ ಕುಂಪಲ

ಬಂಟ್ವಾಳ–ರಾಜೇಶ ನಾಯಕ ‌

ಪುತ್ತೂರು–ಆಶಾ ತಿಮ್ಮಪ್ಪ

ಸುಳ್ಯ–ಭಾಗೀರಥಿ ಮುರುಲ್ಯ

ಮಡಿಕೇರಿ–ಅಪ್ಚಚ್ಚು ರಂಜನ್

ವಿರಾಜಪೇಟೆ–ಕೆ.ಜಿ. ಬೋಪಯ್ಯ

ಪಿರಿಯಾಪಟ್ಟಣ–ಸಿ.ಎಚ್. ವಿಜಯಶಂಕರ್

ಕೆ.ಆರ್. ನಗರ–ವೆಂಕಟೇಶ್ ಹೊಸಳ್ಳಿ ‌

ಹುಣಸೂರು–ದೇವರಹಳ್ಳಿ ಸೋಮಶೇಖರ್

ನಂಜನಗೂಡು–ಬಿ. ಹರ್ಷವರ್ಧನ

ಚಾಮುಂಡೇಶ್ವರಿ–ಕವೀಶ್ ಗೌಡ

ಚಾಮರಾಜ–ಎಲ್. ನಾಗೇಂದ್ರ

ನರಸಿಂಹರಾಜ–ಸಂದೇಶ ಸ್ವಾಮಿ

ವರುಣ–ವಿ. ಸೋಮಣ್ಣ ಟಿ.

ನರಸೀಪುರ–ರೇವಣ್ಣ

ಹನೂರು–ಪ್ರೀತಂ ನಾಗಪ್ಪ

ಕೊಳ್ಳೇಗಾಲ–ಎನ್. ಮಹೇಶ್

ಚಾಮರಾಜನಗರ–ವಿ.ಸೋಮಣ್ಣ

ಗುಂಡ್ಲುಪೇಟೆ–ಸಿ.ಎಸ್. ನಿರಂಜನಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...