Homeಮುಖಪುಟಬಿಜೆಪಿ ಪಟ್ಟಿ: ವಿ.ಸೋಮಣ್ಣ, ಆರ್.ಅಶೋಕ್ ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ

ಬಿಜೆಪಿ ಪಟ್ಟಿ: ವಿ.ಸೋಮಣ್ಣ, ಆರ್.ಅಶೋಕ್ ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ

ಆರ್ ಅಶೋಕ್‌ ಪದ್ಮನಾಭನಗರ ಮತ್ತು ಕನಕಪುರದಲ್ಲಿ ಸೋಮಣ್ಣ ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ.

- Advertisement -
- Advertisement -

ಇಂದು ಬಿಡುಗಡೆಯಾದ 189 ಅಭ್ಯರ್ಥಿಗಳ ಬಿಜೆಪಿ ಪಟ್ಟಿಯಲ್ಲಿ ಸಚಿವ ವಿ.ಸೋಮಣ್ಣನವರ ಹೆಸರು ಕಡೆ ಬಂದಿದ್ದು, ಅವರು ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಘೋಷಿಸಿದೆ.

ಇದುವರೆಗೂ ವಿ.ಸೋಮಣ್ಣನವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಈ ಬಾರಿ ಅವರನ್ನು ಸಿದ್ದರಾಮಯ್ಯನವರನ್ನು ಎದುರಿಸಲು ಬಿಜೆಪಿ ಕಳುಹಿಸಿದೆ. ಆದರೆ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಎದುರು ಗೆಲುವು ಸುಲಭವಲ್ಲ ಎಂದು ಅರಿತು ಚಾಮರಾಜನರದಲ್ಲಿಯೂ ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ. ಈ ಮೊದಲು ವರುಣದಲ್ಲಿ ಬಿ.ಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಬಿ.ಎಸ್ ಯಡಿಯೂರಪ್ಪ ಅದನ್ನು ನಿರಾಕರಿಸಿದ್ದರು. ವಿಜಯೇಂದ್ರರವರಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಲಾಗಿದೆ.

ಅದೇ ರೀತಿ ಸಚಿವ ಆರ್ ಅಶೋಕ್‌ರವರು ಸಹ ಬೆಂಗಳೂರಿನ ಪದ್ಮನಾಭನಗರ ಮತ್ತು ಕನಕಪುರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಕನಕಪುರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರು ಪ್ರತಿನಿಧಿಸುವ ಕ್ಷೇತ್ರವಾಗಿದೆ.

ಅಶೋಕ್‌ರವರು ಶಿವಕುಮಾರ್‌ರನ್ನು, ಸೋಮಣ್ಣನವರು ಸಿದ್ದರಾಮಯ್ಯನವರನ್ನು ಮಣಿಸಲು ಸ್ಪರ್ಧಿಸುತ್ತಿರುವುದು ಸರಿ. ಆದರೆ ಅವರು ಬೇರೆ ಎರಡು ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತಿರುವುದರಿಂದ ಇದು ಕೇವಲ ನಾಮಕವಸ್ತೆ ಸ್ಪರ್ಧೆಯಾಗಿದ್ದು, ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಂತೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದನ್ನೂ ಓದಿ; 189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ವರುಣಾದಿಂದ ಸೋಮಣ್ಣ ಸ್ಪರ್ಧೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್

0
ದೆಹಲಿ ಅಬಕಾರಿ ನೀತಿ ಪ್ರಕರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೂನ್ 2 ರಂದು ಜೈಲಿಗೆ ವಾಪಸಾಗಬೇಕಿದ್ದು, ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಕೆಲವು ವೈದ್ಯಕೀಯ...