Homeಅಂಕಣಗಳುಮೋದಿ ಅವನತಿ, ಕೆಸಿಆರ್ ಕಸರತ್ತು, ಅಮೀನ್ ಮಟ್ಟು ಕುರಿತು, ಮೇ ಸಾಹಿತ್ಯ ಮೇಳ, ತೇಜ್ ಬಹದ್ದೂರ್...

ಮೋದಿ ಅವನತಿ, ಕೆಸಿಆರ್ ಕಸರತ್ತು, ಅಮೀನ್ ಮಟ್ಟು ಕುರಿತು, ಮೇ ಸಾಹಿತ್ಯ ಮೇಳ, ತೇಜ್ ಬಹದ್ದೂರ್ ಇತ್ಯಾದಿ

- Advertisement -
ನಿನ್ನೆ ನಾನು ಗೌರಿ ಪತ್ರಿಕೆಯಲ್ಲಿ Naanu Gauri ಪ್ರಕಟವಾದ ಕೆಲ ಪ್ರಮುಖ ಲೇಖನಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಕಣ್ಣಾಡಿಸಿ
ವ್ಯಕ್ತಿಯ ಆತ್ಮವಿಶ್ವಾಸ ಅವನಾಡುವ ಮಾತುಗಳಿಂದ ಹೊರಹೊಮ್ಮುತ್ತದೆ. ಈ ವಿಚಾರದಲ್ಲಿ 2019ರ ಮೋದಿಯವರಿಗೂ 2014ರ ಮೋದಿಯವರಿಗೂ ಭಾರೀ ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ತುಂಬಾ ಕಾನ್ಫಿಡೆಂಟಾಗಿ ಯುಪಿಎ ಸರ್ಕಾರದ ವೈಫಲ್ಯಗಳ ಮೇಲೆ ಹರಿಹಾಯುತ್ತಿದ್ದ ಮೋದಿ ಐದು ವರ್ಷ ಕಳೆಯುವುದರೊಳಗೆ ತನ್ನದೇ ವೈಫಲ್ಯಗಳಿಂದ ಆತ್ಮವಿಶ್ವಾಸವನ್ನೆಲ್ಲ ಕಳೆದುಕೊಂಡು ಹತಾಶ ಹೇಳಿಕೆಗಷ್ಟೇ ಸೀಮಿತವಾಗುತ್ತಿದ್ದಾರೆ.
ಕರ್ನಾಟಕದ ಪ್ರಮುಖ ಪತ್ರಕರ್ತರಲ್ಲೊಬ್ಬರಾದ ದಿನೇಶ್ ಅಮೀನ್ ಮಟ್ಟು ಅವರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ 2013ರಲ್ಲಿ ನೇಮಕಗೊಂಡಾಗ, ಇನ್ನವರನ್ನು ವಿಧಾನಸೌಧ ಕಟ್ಟಿಹಾಕುತ್ತದೆ ಎಂದು ಹಲವರು ಭಾವಿಸಿದರು. ಆದರೆ, ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದಾಗ ಇದ್ದುದಕ್ಕಿಂತ ಸ್ವತಂತ್ರವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸಿದರು. ಸದಾಕಾಲ ಸಕ್ರಿಯರಾಗಿದ್ದು ತಮ್ಮದೇ ರೀತಿಯಲ್ಲಿ ಜನಪರವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ದಿನೇಶ್ ಅವರಿಗೀಗ 60 ವರ್ಷ. ಆ ಹಿನ್ನೆಲೆಯಲ್ಲಿ ಅವರ ಗೆಳೆಯರಾದ ಡಾ. ಪುರುಷೋತ್ತಮ ಬಿಳಿಮಲೆರವರು, ಮಟ್ಟು ಅವರ ಕುರಿತು ಈ ಲೇಖನ ಬರೆದಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿದ, ದಕ್ಷಿಣ ಭಾರತದ ಪ್ರಧಾನಿ ಮಂತ್ರಿಗಳಾಗುವ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದಾರೆ ಕೆ.ಸಿ.ಆರ್.
ಫೆಡರಲ್ ಫ್ರಂಟ್ ರಚಿಸಲು ಅಖಾಡಕ್ಕಿಳಿದ ಕೆ.ಸಿ.ಆರ್: ಎಚ್.ಡಿ.ಕೆ ಜೊತೆ ಚರ್ಚೆ, ಪಿಣರಾಯಿ ಮಾತಾಡಿಸಲು ಕೇರಳಕ್ಕೆ ಹೋಗಿದ್ದಾರೆ. ಮುಂದೇನಾಗಬಹುದೆಂಬ ಸಾಧ್ಯತೆಗಳ ನೋಟ ಇಲ್ಲಿದೆ.
6ನೇ ಮೇ ಸಾಹಿತ್ಯ ಮೇಳ: ಅಕ್ಷರ, ಮಾತು, ಚಿತ್ರಗಳ ಬೆಸೆದ ಹೋರಾಟ…
ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡವರು ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ವೃತ್ತಕ್ಕೆ (ಸರ್ಕಲ್) ಸೀಮಿತ ಆಗಿದ್ದಾರೆ. ಅಂಥಹ ವಿವಿಧ ವೃತ್ತಗಳು ಇಲ್ಲಿ ಒಟ್ಟಾಗಿ ಸೇರಿದ್ದವು. ಆದರೆ, ಈ ವೃತ್ತಗಳು ವಿಭಿನ್ನ ಸಂದರ್ಭಗಳಲ್ಲಿ ಪ್ರತ್ಯೇಕವಾಗಿಯೇ ತಮ್ಮ ಅಸ್ತಿತ್ವ ಮತ್ತ ಅಸ್ಮಿತೆಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿವೆ. ಅಂತಹ ವೃತ್ತಗಳೆಲ್ಲ ಒಂದು ಸದಾಶಯಕ್ಕಾಗಿ ಇಂತಹ ಮೇಳದಲ್ಲಿ ಪಾಲ್ಗೊಳ್ಳುವುದು ಆಶಾದಾಯಕ ಸಂಗತಿಯೇ.
ಕಾಣೆಯಾಗಿದ್ದ ಸುವರ್ಣ ತ್ರಿಭುಜ ದೋಣಿಗೆ ನೌಕಾಪಡೆಯ ಐಎನ್‍ಎಸ್ ಕೊಚ್ಚಿ ಡಿಕ್ಕಿಹೊಡೆದು 07 ಜನ ಸಾವನಪ್ಪಿರುವ ಸ್ಫೋಟಕ ಸತ್ಯ ತಡವಾಗಿ ಬೆಳಕಿಗೆ ಬಂದಿರುವುದರ ಕುರಿತು ಶುದ್ದೋದನರವರ ಲೇಖನವಿದೆ.
ತೇಜ್ ಬಹದ್ದೂರ್ ಹರಿಯಾಣದ ರಿಹಾರ್ ನಿವಾಸಿ. ಸೀಮಾ ಸುರಕ್ಷ ಪಡೆಯ(ಬಿ.ಎಸ್.ಎಫ್) ಸೈನಿಕನಾಗಿ ಕಳೆದ 21 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2017ರವರೆಗೂ ಅವರು ಸರಿಯಾಗಿಯೇ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆಗ ಅವರು ಮಾಡಿದ ಒಂದು ವಿಡಿಯೋ ಅವರನ್ನು ಇಲ್ಲಿಯವರೆಗೂ ಕರೆತಂದಿತ್ತು.
- Advertisement -

“ದುಡಿಮೆ ಮತ್ತು ಚೆಲುವು”

ಹಿಮಾಲಯದ ಜನಜೀವನದ ಕುರಿತು ಸೃಜನಶೀಲ ಬರಹಗಾರ ರಹಮತ್ ತರೀಕೆರೆರವರು ಹಾಸು ಹೊಕ್ಕು ಅಂಕಣದಲ್ಲಿ ಬರೆದಿದ್ದಾರೆ. ಓದಿಬಿಡಿ

“ದುಡಿಮೆ ಮತ್ತು ಚೆಲುವು”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...