Homeಮುಖಪುಟಮೋದಿ ಮೋದಿ ಎಂದು ಕೂಗಿ ಲಕ್ಷಾಂತರ ಹಣ ದೋಚಿದ ಡಕಾಯಿತರು

ಮೋದಿ ಮೋದಿ ಎಂದು ಕೂಗಿ ಲಕ್ಷಾಂತರ ಹಣ ದೋಚಿದ ಡಕಾಯಿತರು

- Advertisement -
- Advertisement -

“ನಮ್ಮ ಮನೆಗೆ ಕಾಲಿಂಗ್ ಬೆಲ್ ಅವಶ್ಯಕತೆಯೇ ಇಲ್ಲ. ಬಂದವರು ‘ಮೋದಿ ಮೋದಿ’ ಎಂದು ಕೂಗಿದರೆ ಸಾಕು ನಾವು ಬಾಗಿಲು ತೆರೆಯುತ್ತೇವೆ”. ಮನೆಯ ಮುಂದೆ ಅಂಟಿಸಿದ್ದ ಹೀಗೊಂದು ಪೋಸ್ಟರ್ ಕೆಲದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಕೆಲ ಬಿಜೆಪಿಗರು ತಮ್ಮ ಕ್ರೆಡಿಟ್‍ಗಾಗಿಯೂ ಬಳಸಿದ್ದರು. ಈಗ ಅದೇ ಐಡಿಯಾ ಬಳಸಿಕೊಂಡು ‘ಮೋದಿ ಮೋದಿ’ ಎಂಬ ಪದ ಲಕ್ಷಾಂತರ ರೂ ಕಳ್ಳತನಕ್ಕೆ ಅವಕಾಶವಾಗಿದೆ ಎಂದರೆ ನೀವು ನಂಬಲೇಬೇಕು.

ಬಿಹಾರದ ಶಿವಾನ್‍ನಲ್ಲಿ ಈ ರೀತಿಯ ಆಶ್ಚರ್ಯಕರ ಘಟನೆ ಜರುಗಿದ್ದು ಚರ್ಚೆಗೆ ಗ್ರಾಸವಾಗಿದೆ. ಚಾಣಾಕ್ಷ ಡಕಾಯಿತರು ರಾತ್ರಿ ವೇಳೆ ಮನೆ ಮುಂದೆ ನಿಂತು ‘ಮೋದಿ ಮೋದಿ’ ಎಂದೂ ಕೂಗಿದ್ದಾರೆ. ಆ ಮನೆಯವರು ಯಾರೋ ಬಿಜೆಪಿಯವರು ಬಂದಿರಬೇಕೆಂದು ಬಾಗಿಲು ತೆರೆದಿದ್ದೆ ತಡ, ಒಳನುಗ್ಗಿದ ಡಕಾಯಿತರು ಲೂಟಿ ಮಾಡಿದ್ದಲ್ಲದೇ ಪ್ರತಿರೋಧ ವ್ಯಕ್ತಪಡಿಸಿದ ಮನೆಯವರಿಗೆ ಥಳಿಸಿದ್ದಾರೆ.

ಶಿವಾನ್‍ನ ಗುರ್ಗಾತ್ ಪ್ರದೇಶದ ಸ್ಥಳೀಯ ಪೊಲೀಸ್ ಠಾಣೆಯ ಹತ್ತಿರದಲ್ಲೇ ಈ ಘಟನೆ ನಡೆದಿರುವುದು ಇನ್ನೂ ಕುತೂಹಲವಾಗಿದೆ. “ಮೋದಿ ಮೋದಿ ಎಂಬ ಶಬ್ದ ಕೇಳಿದಾಗ, ಬಿಜೆಪಿಯ ಕಾರ್ಯಕರ್ತರಿರಬೇಕು ಓಟು ಕೇಳು ಬಂದಿದ್ದಾರೆ ಎಂದು ತಿಳಿದು ಬಾಗಿಲು ತೆಗೆದೆವು. ಆದರೆ ನಮಗೆ ಅಘಾತವಾಯಿತು. ಒಳನುಗ್ಗಿದ ಅವರು ಎಲ್ಲರಿಗೂ ಥಳಿಸಿರು, ನಮ್ಮ ಕಣ್ಣೆದುರಿಗೆ ಲಕ್ಷಾಂತರ ರೂಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದರು. ಇದರಿಂದ ನಮ್ಮ ಕುಟುಂಬದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ”. ಎನ್ನುತ್ತಾರೆ ಮನೆಯ ನಿವಾಸಿ ಉಪೇಂದ್ರ ರಾಜ್‍ರವರು.

ಕರ್ತವ್ಯನಿರತ ಶಿವಾನ್ ಪೊಲೀಸ್ ಅಧಿಕಾರಿ ಸಂತ್ರಸ್ತ ಕುಟುಂಬದ ಹೇಳಿಕೆಗಳನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ‘ಮೋದಿ ಮೋದಿ’ ಎಂದು ಕೂಗುತ್ತಿದ್ದ ಮತ್ತು ಕೂಗುತ್ತಿರುವವರ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಈ ಪ್ರಕರಣದ ಕುರಿತು ಯಾರನ್ನು ಬಂಧಿಸಿಲ್ಲ.

ಮೋದಿ ಮೋದಿ ಎಂಬ ಎಂಬ ಪದ ಇಷ್ಟೆಲ್ಲಾ ರಾಧ್ದಾಂತಗಳಿಗೆ ಕಾರಣವಾಗುತ್ತದೆ ಎಂದು ನಾವ್ಯಾರೂ ಊಹಿಸಿರಲಿಲ್ಲ. ಈ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವಾರು ತಮಾಷೆಯ ಜೋಕ್‍ಗಳು ಹರಿದಾಡುತ್ತಿವೆ. ಈ ಘಟನೆ ಮುಂಚೆ ಮನೆ ಬಾಗಿಲಿಗೆ ಮೋದಿ ಮೋದಿ ಎಂಬ ಪೋಸ್ಟರ್ ಅನ್ನು ಷೇರ್ ಮಾಡಿದವರನ್ನು ಪೇಚಿಗೆ ಸಿಲುಕಿಸಿದೆ.

ಇದನ್ನು ಓದಿ: ಬಿಜೆಪಿ ಪೋಸ್ಟ್ ಅನ್ನು ಯಥಾವತ್ತು ಕಾಪಿ ಪೇಸ್ಟ್ ಮಾಡಿದರೆ 3ರೂ, ರಾಹುಲ್ ಗಾಂಧಿ ಮೇಲಿನ ಪ್ರತಿ ಜೋಕಿಗೆ 100ರೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...