Homeಮುಖಪುಟತೇಜ್ ಬಹದ್ದೂರ್ ಯಾರು? ಹಿನ್ನೆಲೆಯೇನು? ಪೂರ್ಣ ವಿವರ ತಿಳಿಯಿರಿ

ತೇಜ್ ಬಹದ್ದೂರ್ ಯಾರು? ಹಿನ್ನೆಲೆಯೇನು? ಪೂರ್ಣ ವಿವರ ತಿಳಿಯಿರಿ

- Advertisement -
ತೇಜ್ ಬಹದ್ದೂರ್ ಹರಿಯಾಣದ ರಿಹಾರ್ ನಿವಾಸಿ. ಸೀಮಾ ಸುರಕ್ಷ ಪಡೆಯ(ಬಿ.ಎಸ್.ಎಫ್) ಸೈನಿಕನಾಗಿ ಕಳೆದ 21 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2017ರವರೆಗೂ ಅವರು ಸರಿಯಾಗಿಯೇ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆಗ ಅವರು ಮಾಡಿದ ಒಂದು ವಿಡಿಯೋ ಅವರನ್ನು ಇಲ್ಲಿಯವರೆಗೂ ಕರೆತಂದಿತ್ತು.
‘ತೇಜ್ ಬಹಾದೂರ್ ಯಾದವ್ ಮೋದಿಯವರ ತೀವ್ರ ಬೆಂಬಲಿಗನಾಗಿದ್ದರು. ಅವರ ಫೇಸ್‍ಬುಕ್ ಟೈಂಲೈನ್‍ನಲ್ಲಿ ಮೋದಿಯವರಿಗೆ ಬಹಿರಂಗ ಬೆಂಬಲ ಸೂಚಿಸುವ ಮತ್ತು ದ್ವೇಷಪೂರಿತ ಪೋಸ್ಟ್‍ಗಳು ತುಂಬಿ ಹೋಗಿವೆ. ಬೇರಾವುದೇ ಮೋದಿ ಬೆಂಬಲಿಗನಂತೆ ಈತನೂ, ಮೋದಿ ದೊಡ್ಡ ಬದಲಾವಣೆ ತರುತ್ತಾರೆಂದು ಬಲವಾಗಿ ನಂಬಿದ್ದರು.
ಇದೇ ಭರವಸೆಯೊಂದಿಗೇನೇ, ತನಗೂ ಸಮಸ್ಯೆಯಾಗಿದ್ದ, ತನ್ನ ಸೈನಿಕ ಪಡೆಯಲ್ಲಿದ್ದ ಭ್ರಷ್ಟಾಚಾರವನ್ನು ಹೊರಗೆಳೆಯಲು ನಿರ್ಧರಿಸಿದ್ದರು. ಸೈನ್ಯದಲ್ಲಿ ನೀಡುವ ಕಳಪೆ ಆಹಾರ ಮತ್ತು ಮೇಲಾಧಿಕಾರಿಗಳ ಭ್ರಷ್ಟಚಾರದು ವಿಡಿಯೋ ಒಂದನ್ನು ಮಾಡಿ ಫೇಸ್ ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದರು. ಲಕ್ಷಾಂತರ ಜನ ಆ ವಿಡಿಯೋವನ್ನು ಮೆಚ್ಚಿಕೊಂಡು ಷೇರ್ ಮಾಡಿದ್ದರು. ಅದರಲ್ಲಿ ಆತನಂತೆಯೇ ಕೊರೆಯುವ ಛಳಿಯಲ್ಲಿ ಗಡಿ ಕಾಯುತ್ತಿದ್ದ ಸೈನಿಕರಿಗೆ ಕೊಳೆತ ಆಹಾರವನ್ನು ನೀಡುವುದರ ಬಗ್ಗೆ ಯಾದವ್ ಮಾತಾಡಿದ್ದರು.
ಸಾಮಾಜಿಕ ಜಾಲತಾಣಗಳನ್ನು ಗಮನಿಸುವ ಮತ್ತು ಭ್ರಷ್ಟಾಚಾರ ವಿರೋಧಿ ನಾಯಕ, ದೇವದೂತ ಮೋದಿಯವರು ತನ್ನ ವಿಡಿಯೋವನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ವ್ಯವಸ್ಥೆಯನ್ನು ಬದಲಿಸುತ್ತಾರೆಂದು ಆತನಿಗೆ ಅಪಾರವಾದ ವಿಶ್ವಾಸವಿತ್ತು.
ಆದರೆ, ಅಂಥದ್ದೇನೂ ಆಗಲಿಲ್ಲ. ಅದೇ ವ್ಯವಸ್ಥೆಯೇ ಆತನ ಮೇಲೆ ದಾಳಿ ಮಾಡಿತು, ತೇಜ್ ಬಹಾದೂರ್‍ರನ್ನು ಹುಚ್ಚನೆಂದು ಕರೆದು, ಕೆಲಸದಿಂದ ಹೊರದಬ್ಬಿತು. ಸೈನಿಕರಿಗಾಗಿ ಕಣ್ಣೀರು ಸುರಿಸುವ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ನಿರ್ಮೂಲನೆ ಮಾಡಲು ಬಯಸುವ ದೇವದೂತ ಮೋದಿಯವರು ಆತನ ಸಹಾಯಕ್ಕೆ ಬರಲಿಲ್ಲ.
ಅದೇ ಸಂದರ್ಭದಲ್ಲಿ ತೇಜ್ ಬಹಾದೂರ್ ಯಾದವ್‍ರು ಮಾಡಿದ್ದನ್ನು ಸೈನ್ಯದಲ್ಲಿ ಸಹಿಸುವುದು ಸಾಧ್ಯವೇ ಇರಲಿಲ್ಲ. ಸೈನಿಕ ಸೈನಿಕನಾಗಿರಬೇಕಷ್ಟೇ, ಬರುವ ತೊಂದರೆ ಅನುಭವಿಸಬೇಕು, ಇಲ್ಲವೇ ಹೊರನಡೆಯಬೇಕು. ಆತ ಹೊರಜಗತ್ತಿಗೆ ದೂರುವಂತಿಲ್ಲ. ಅಲ್ಲಿನ ನಿಯಮಗಳು ಏನು ಹೇಳುತ್ತವೋ ಅದಕ್ಕೆ ಬದ್ಧನಾಗಿರಬೇಕು.
ಆದರೆ, ತೇಜ್ ಬಹಾದೂರ್‍ರ ಭಿನ್ನಮತದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಆತನಿಗೆ, ಬಹುಶಃ, ಯಾವ ನಿವೃತ್ತಿಯ ಸೌಲಭ್ಯಗಳನ್ನೂ ನೀಡದೇ ಮನೆಗೆ ಕಳಿಸಲಾಯಿತು.
ಇದನ್ನು ತೇಜ್ ಬಹದ್ದೂರ್ ತನಗಾದ ದೊಡ್ಡ ಅವಮಾನವೆಂದು ಬಗೆದರು. ಈಗ ಆತ ಸಾಮಾನ್ಯ ನಾಗರಿಕ. ಯಾವುದನ್ನು ಸೈನಿಕನಾಗಿ ಮಾಡಲಾಗಲಿಲ್ಲವೋ, ಅದನ್ನೀಗ ಮಾಡುವುದು ಸುಲಭವಾಗಿದೆ. ತಾನು ಯಾರ ಮೇಲೆ ಭರವಸೆಯಿಟ್ಟಿದ್ದರೋ, ಆ ವ್ಯಕ್ತಿಯೆದುರಿಗೇ ಸೆಣಿಸಿ ಕೊಡಬೇಕಾದ ಸಂದೇಶವನ್ನು ಕೊಡಲು ನಿರ್ಧರಿಸಿದರು. 2019ರ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 30ರಂದು ಪ್ರಧಾನಿ ನರೇಂದ್ರ ಮೋದಿಯವರು ವಿರುದ್ಧ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಣಕ್ಕಿಳಯಲು ನಿರ್ಧರಿಸಿದರು.
ಹಲವು ಪಕ್ಷಗಳು ತಮ್ಮ ಪಕ್ಷದಿಂದ ಟಿಕೇಟ್ ನೀಡುವುದಾಗಿಯೂ, ತಮ್ಮ ಪಕ್ಷಕ್ಕೆ ಬರಬೇಕೆಂಬ ಮನವಿಯನ್ನು ತೇಜ್ ಬಹದ್ದೂರ್ ಒಪ್ಪಲಿಲ್ಲ. ಹಲವು ಮಾಜಿ ಸೈನಿಕರು, ಕೆಲವು ರೈತರ ಬೆಂಬಲದೊಂದಿಗೆ ವಾರಣಾಸಿಯಲ್ಲಿ ಪ್ರಚಾರ ಆರಂಭಿಸಿದರು. ಇದು ರಾಷ್ಟ್ರವ್ಯಾಪಿ ಸುದ್ದಿಯಾಯಿತು ಮಾತ್ರವಲ್ಲ ಈ ಮಾಜಿ ಯೋಧನಿಗೆ ಬೆಂಬಲದ ಮಹಾಪೂರವೇ ಹರಿದುಬಂದಿತು. ಏಪ್ರಿಲ್ 24ರಂದು ಇವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ತದನಂತರ ಸಮಾಜವಾದಿ ಪಕ್ಷವೂ ಇವರಿಗೆ ಬಿ ಫಾರಂ ನೀಡಿತು. ಅಲ್ಲಿಗೆ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಯಾದರು.
ಏಪ್ರಿಲ್ 30ರಂದು ಚುನಾವಣಾ ಆಯೋಗ ತೇಜ್ ಬಹದ್ದುರ್‍ರವರಿಗೆ ಸಂಜೆ ಆರು ಗಂಟೆಯ ಒಳಗೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕೆಂದು ನೋಟಿಸ್ ನೀಡಿತು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಯೊಬ್ಬ ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದ ಆರೋಪದಡಿಯಲ್ಲಿ ಸೇವೆಯಿಂದ ವಜಾಗೊಂಡಿದ್ದರೆ ಐದು ವರ್ಷಗಳ ಕಾಲ ಆತ ಚುನಾವಣಾ ಪ್ರಚಾರದಿಂದ ದೂರ ಉಳಿಯಬೇಕು ಎಂದು ಆಯೋಗ ನಿನ್ನೆ ನೋಟಿಸ್ ನೀಡಿತ್ತು ಜೊತೆಗೆ ಈ ವಿಚಾರವಾಗಿ ಮೂರು ಗಂಟೆಯೊಳಗೆ ಬಿಎಸ್‍ಎಫ್‍ನಿಂದ ಕ್ಲಿಯರೆನ್ಸ್ ಲೆಟರ್ ತರುವಂತೆ ಸೂಚಿಸಿತ್ತು. ನಂತರ ಅವರ ನಾಮಪತ್ರವನ್ನು ತಿರಸ್ಕರಿಸಿತು.
ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತಗೊಂಡಕೂಡಲೇ ಫೇಸ್‍ಬುಕ್ ಲೈವ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ದೇಶದ ನಾಗರಿಕರೆ, ತಾವು ನನಗೆ ಇದನ್ನು ತಿಳಿಸಿ. ಕಾನೂನು ಪ್ರಕಾರ ನಾನು ಪ್ರಮಾಣ ಪತ್ರವನ್ನು ಸಲ್ಲಿಸಿದ್ದೇನೆ, ಎಲ್ಲಾ ದಾಖಲೆಗಳನ್ನು ನೀಡಲಾಗಿದೆ. 24 ಎಪ್ರಿಲ್ ರಂದು ನಾಮಪತ್ರ ಸಲ್ಲಿಸಿದ್ದೇನೆ, ಅಂದು ನನ್ನ ಎಲ್ಲಾ ದಾಖಲೆ ಸರಿಯಿದೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿರುತ್ತಾರೆ. ಮತ್ತೆ 29 ನೇ ಎಪ್ರಿಲ್ ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದಾಗ ಅಂದು ಸಹ ನನಗೆ ಚುನಾವಣಾ ಆಯೋಗದಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.
30ನೇ ಎಪ್ರಿಲ್ ರಂದು ನರೇಂದ್ರ ಮೋದಿಯವರ ಚಮಚಾಗಳು ವಿಶೇಷ ವಿಮಾನದಲ್ಲಿ ವಾರಣಾಸಿಗೆ ಬಂದು ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ತೇಜ್ ಬಹುದ್ದೂರು ಅವರ ನಾಮಪತ್ರ ಯಾವುದೇ ಕಾರಣಕ್ಕೂ ಅಂಗೀಕಾರವಾಗಬಾರದು ಬದಲಿಗೆ ತಿರಸ್ಕಾರವಾಗಬೇಕೆಂದು ಹೇಳುತ್ತಾರೆ. ಜಿಲ್ಲಾ ಚುನಾವಣಾ ಅಧಿಕಾರಿ ಒತ್ತಡಕ್ಕೆ ಒಳಗಾಗಿ ಈ ರೀತಿ ನಡೆದುಕೊಂಡಿದ್ದಾರೆ.
ದೇಶದ ನಾಗರೀಕರಲ್ಲಿ ನನ್ನ ವಿನಂತಿ ಇದೆ, ಈಗ ತಾವು ಧ್ವನಿ ಎತ್ತದೆ ಇದ್ದರೆ ಪ್ರಜಾಪ್ರಭುತ್ವದ ಹತ್ಯೆಯಾಗುತ್ತದೆ. ಇವತ್ತು ಒಂದು ಅವಕಾಶವಿದೆ, ತಾವೆಲ್ಲರೂ ರಸ್ತೆಯ ಮೇಲೆ ಬನ್ನಿ ನನ್ನ ಪರವಾಗಿ ಪ್ರತಿಭಟನೆ ಮಾಡಿ. ಯಾಕೆಂದರೆ ಇದು ಸತ್ಯ ಮತ್ತು ಸುಳ್ಳಿನ ಹೋರಾಟವಾಗಿದೆ, ಇದೊಂದು ಷಡ್ಯಂತ್ರ ರಚಿಸಲಾಗಿದೆ. ದೇಶದ ನಿವಾಸಿಗಳೇ, ನೀವು ಎಲ್ಲೆ ಇರಿ, ಪ್ರತಿಭಟನೆ ದಾಖಲು ಮಾಡಿ, ಫೇಸ್‍ಬುಕ್, ವಾಟ್ಸ್‍ಆಪ್, ಟ್ವಿಟರ್ ಮೂಲಕ ಬರೆಯಿರಿ. ಪ್ರಶ್ನೆ ಮಾಡಿ, ತೇಜ ಬಹುದ್ದೂರ ಅವರ ನಾಮಪತ್ರ ತಿರಸ್ಕರಿಸುವ ಅಧಿಕಾರ ನಿಮಗೆ ಯಾರು ನೀಡಿದ್ದಾರೆ ಎಂದು ಕೇಳಿ, ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ಇದನ್ನು ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
ಇದಾದ ನಂತರ ಬಿಜೆಪಿ ಕಾರ್ಯಕರ್ತರು ತೇಜ್ ಬಹದ್ದೂರ್ ಮೇಲೆ ಆರೋಪಗಳ ಸುರಿಮಳೆ ಸುರಿಸಿದರು. ಆತನನ್ನು ಐದಾರು ಬಾರಿ ಡಿಸ್‍ಮಿಸ್ ಮಾಡಲಾಗಿತ್ತು, ಆತ ಮದ್ಯಪಾನಿಯಾಗಿದ್ದ, ಆತನಿಗೆ ಫೇಸ್‍ಬುಕ್‍ನಲ್ಲಿ 500 ಜನ ಸ್ನೇಹಿತರಿದ್ದರು ಎಂದೆಲ್ಲಾ ಫೇಕ್ ನ್ಯೂಸ್‍ಗಳನ್ನು ಹರಡಲಾಯಿತು.
ತೇಜ್ ಬಹದ್ದೂರ್‍ರವರು ಮೇ 06ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ತನ್ನ ನಾಮಪತ್ರ ಅಸಿಂಧುಗೊಳಿಸಿದ ಚುನಾವನಾ ಆಯೋಗದ ಕ್ರಮವನ್ನು ಪ್ರಶ್ನಿಸಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...