Homeಮುಖಪುಟಯೋಧನ ನಾಮಪತ್ರ ತಿರಸ್ಕೃತ: ಸೋಲಿನ ಭಯದಿಂದ ಮೋದಿಯ ದುಷ್ಕೃತ್ಯವೆಂದ ಟ್ರೋಲಿಗರು

ಯೋಧನ ನಾಮಪತ್ರ ತಿರಸ್ಕೃತ: ಸೋಲಿನ ಭಯದಿಂದ ಮೋದಿಯ ದುಷ್ಕೃತ್ಯವೆಂದ ಟ್ರೋಲಿಗರು

- Advertisement -
- Advertisement -

ತೇಜ್ ಬಹದ್ದೂರ್ ಯಾದವ್ ನಾಮಪತ್ರ ತಿರಸ್ಕೃತ: ಮೋದಿ ವಿರುದ್ಧ ಟ್ರೋಲ್‍ಗಳ ಆರಂಭ

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ ರಾಷ್ಟ್ರದ ಗಮನ ಸೆಳೆದಿದ್ದ ವಾರಣಾಸಿ ಲೋಕಸಭಾ ಕ್ಷೇತ್ರದ ಎಸ್ಪಿ ಬಿಎಸ್ಪಿ ಮೈತ್ರಿ ಅಭ್ಯರ್ಥಿ ತೇಜ್ ಬಹದ್ದೂರ್ ಯಾದವ್‍ರವರ ನಾಮಪತ್ರವನ್ನು ಚುನಾವನಾ ಆಯೋಗ ತಿರಸ್ಕರಿಸಿದೆ. ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟಿಸ್ ನೀಡಿದ್ದ ಚುನಾವಣಾ ಆಯೋಗ ಇಂದು ನಾಮಪತ್ರ ತಿರಸ್ಕರಿಸುವ ಮೂಲಕ ದೊಡ್ಡ ಅಚ್ಚರಿ ನೀಡಿದೆ. ಇದರಿಂದ ಕುಪಿತನಾಗಿರುವ ಮಾಜಿ ಯೋಧ ತೇಜ್ ಬಹದ್ದೂರ್ ಸುಪ್ರೀಂ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಯೊಬ್ಬ ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದ ಆರೋಪದಡಿಯಲ್ಲಿ ಸೇವೆಯಿಂದ ವಜಾಗೊಂಡಿದ್ದರೆ ಐದು ವರ್ಷಗಳ ಕಾಲ ಆತ ಚುನಾವಣಾ ಪ್ರಚಾರದಿಂದ ದೂರ ಉಳಿಯಬೇಕು ಎಂದು ಆಯೋಗ ನಿನ್ನೆ ನೋಟಿಸ್ ನೀಡಿತ್ತು. ಜೊತೆಗೆ ಮೇ1ರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‍ಗೆ ಉತ್ತರಿಸಬೇಕೆಂಬ ಗಡುವು ವಿಧಿಸಿತ್ತು.

ಇದರೊಂದಿಗೆ ತೇಜ್ ಬಹದ್ದೂರ್‍ರವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾಗ ಬಿಎಸ್‍ಎಫ್‍ನಿಂದ ವಜಾಗೊಂಡಿರುವುದಾಗಿ ಉಲ್ಲೇಖಿಸಿದ್ದರು ಆದರೆ ನಂತರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಈ ಮಾಹಿತಿ ಉಲ್ಲೇಖಿಸಿರಲಿಲ್ಲ ಹಾಗಾಗಿ ಇದಕ್ಕೂ ಕೂಡ ಉತ್ತರಿಸಬೇಕೆಂದು ಆಯೋಗ ಸೂಚಿಸಿತ್ತು.

ಎಎನ್‍ಐ ವರದಿ ಮಾಡಿರುವ ಪ್ರಕಾರ ‘ನಿನ್ನೆ ಸಂಜೆ 6.15 ಗಂಟೆಗೆ ಕೆಲವು ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಸರಿಯಾದ ಸಮಯಕ್ಕೆ ದಾಖಲೆಗಳನ್ನು ಸಲ್ಲಿಸಿದರೂ ಕೂಡ ವಿನಾಕಾರಣ ನಾಮಪತ್ರ ತಿರಸ್ಕರಿಸಲಾಗಿದೆ, ಇದರ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸುತ್ತೇನೆ, ಎಂದು ತೇಜ್ ಬಹದ್ದೂರ್ ಯಾದವ್ ತಿಳಿಸಿದ್ದಾರೆ.

ಸಾಮಾಜಿಕ ತಾಲತಾಣದಲ್ಲಿ ಮೋದಿ ವಿರುದ್ಧ ಟ್ರೋಲ್‍ಗಳ ಆರಂಭ
ನಾಮಪತ್ರ ತಿರಸ್ಕøತವಾದ ಸುದ್ದಿ ತಲುಪುತ್ತಲೇ ಮಾಜಿ ಯೋಧನನ್ನು ಬೆಂಬಲಿಸಿದ್ದ ಹಲವಾರು ಜಾಲತಾಣಿಗರು ಮೋದಿ ಸರ್ಕಾರದ ವಿರುದ್ದದ ಟ್ರೋಲ್ ಆರಂಭಿಸಿದ್ದಾರೆ. ಅಸಲಿ ಚೌಕಿದಾರನಿಗೆ ಹೆದರಿಕೊಂಡು ನಕಲಿ ಚೌಕಿದಾರ ಈ ರೀತಿ ಮಾಡಿಸಲಾಗಿದೆ, ಚುನಾವಣಾ ಆಯೋಗ ಮೋದಿಯ ಸೇವಕನಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಸೋಲಿನ ಭಯದಿಂದ ಮೋದಿ ಈ ಕೃತ್ಯ ಮಾಡಿಸಿರಬಹುದು ಎಂತಲೂ ಹಲವರು ಬರೆದಿದ್ದಾರೆ. ತೇಜ್ ಬಹದ್ದೂರ್ ನಾಮಪತ್ರ ಸಲ್ಲಿಸಿದಾಗಿನಿಂದ ಸಾವಿರಾರು ಜನ ಇವರನ್ನು ಬೆಂಬಲಿಸಿದ್ದರು. ಸಮಾಜವಾದಿ ಪಕ್ಷ ಟಿಕೇಟ್ ನೀಡಿದಾಗಲಂತೂ ಗೆಲುವಿನ ಸಾಧ್ಯತೆಯಿದ್ದು ಕಾಂಗ್ರೆಸ್ ಪಕ್ಷ ಕೂಡ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ತೆಗೆದುಕೊಂಡು ಈ ಮಾಜಿ ಯೋಧನಿಗೆ ಬೆಂಬಲ ನೀಡಬೇಕೆಂದು ಆಗ್ರಹಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...