ಮುಂದಿನ ಜನಗಣತಿಯ ಜೊತೆಗೆ ಜಾತಿ ಗಣತಿ ಕೂಡಾ ನಡೆಸುವುದಾಗಿ ಕೇಂದ್ರ ಸರ್ಕಾರವು ಏಪ್ರಿಲ್ 30ರ ಬುಧವಾರ ಘೋಷಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟದ ರಾಜಕೀಯ ವಿಷಯಗಳ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಈ ಘೋಷಣೆಯು ದೇಶಾದ್ಯಂತ ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕ ಚರ್ಚೆಗಳಿಗೆ ನಾಂದಿ ಹಾಡಿದೆ. ಬಿಜೆಪಿ ಯೂಟರ್ನ್
ಜಾತಿ ಗಣತಿಯು ಚುನಾವಣೆಯ ಪ್ರಮುಖ ವಿಷಯವಾಗಿ ವಿಪಕ್ಷಗಳು ಪ್ರಚಾರ ಮಾಡುತ್ತಿದ್ದಾಗ ಬಿಜೆಪಿ ಅದಕ್ಕೆ ತದ್ವಿರುದ್ಧವಾಗಿ ತೀವ್ರ ವಿರೋಧ ಮಾಡಿ ಪ್ರಚಾರ ಕೈಗೊಂಡಿತ್ತು. ಅದರ ನಾಯಕರು ಈ ಹಿಂದಿನಿಂದಲೂ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಲೆ ಬಂದಿದ್ದಾರೆ. ಆದರೆ, ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡ ನಂತರ ಇಡೀ ಬಿಜೆಪಿ, ಅದರ ಮಿತ್ರ ಪಕ್ಷಗಳು, ಸಂಘಪರಿವಾರ ಮತ್ತು ಅದರ ಬೆಂಬಲಿಗರು ಸಂಪೂರ್ಣವಾಗಿ ಯೂಟರ್ನ್ ಮಾಡಿದ್ದಾರೆ. ಈ ಹಿಂದೆ ಜಾತಿಗಣತಿಯ್ನು ವಿರೋಧ ಮಾಡಿದ್ದ ಪ್ರಮುಖ ವ್ಯಕ್ತಿಗಳ ಪಟ್ಟಿ ಕೆಳಗಿದೆ.
ಜಾತಿ ಗಣತಿ ವಿರೋಧ ಮಾಡಿದ್ದ ಪ್ರಮುಖ ನಾಯಕರು
- ಪ್ರಧಾನಿ ನರೇಂದ್ರ ಮೋದಿ
2023 ರಲ್ಲಿ ಮಾತನಾಡಿದ್ದ ಮೋದಿ ಜಾತಿ ಗಣತಿಯನ್ನು “ಜಾತಿಯ ಆಧಾರದಲ್ಲಿ ದೇಶವನ್ನು ಒಡೆಯುವ ಪಾಪಕೃತ್ಯ” ಎಂದು ಟೀಕಿಸಿದ್ದರು. ಜಾತಿ ಗಣತಿ ಒಂದು ”ಮಾವೋವಾದಿ ಚಿಂತನೆ” ಎಂದು ಅವರು ಹೇಳಿದ್ದು, ವಿರೋಧ ಪಕ್ಷಗಳು “ನಗರ ನಕ್ಸಲ್” ಚಿಂತನೆಯ ಭಾಗವಾಗಿ ಇದನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದರು.ಇಂತಹ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ಅವರ ಸರ್ಕಾರವೇ ಜಾತಿ ಗಣತಿಯನ್ನು ಮುಂದಿನ ಜನಗಣತಿಯ ಜೊತೆಗೆ ನಡೆಸಲು ನಿರ್ಧರಿಸಿದೆ.
“जातिगत जनगणना एक माओवादी विचार है”
— प्रधानमंत्री मोदी जी pic.twitter.com/9tMjJuqtg0— Uday Bhanu Chib (@UdayBhanuIYC) April 30, 2025
- ಗೃಹ ಸಚಿವ ಅಮಿತ್ ಶಾ
ಜಾತಿ ಗಣತಿಯನ್ನು ಒಂದು ಸಂಕೀರ್ಣ ವಿಷಯವೆಂದು ಪರಿಗಣಿಸಿದ್ದ ಅಮಿತ್ ಶಾ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಲು ವಿರೋಧಿಸಿತು. 2021 ರಲ್ಲಿ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಜಾತಿ ಗಣತಿಯನ್ನು ವಿರೋಧಿಸಿತು, ಇದು “ರಾಜಕೀಯ ಪ್ರೇರಿತ ಫಲಿತಾಂಶಗಳಿಗೆ” ಕಾರಣವಾಗಲಿದೆ ಎಂದು ಹೇಳಿತ್ತು.
ಅಕ್ಟೋಬರ್ 2, 2023ರಂದು ಬಿಹಾರದ ಜಾತಿ ಸಮೀಕ್ಷೆಯ ಫಲಿತಾಂಶ ಬಿಡುಗಡೆಯಾದಾಗ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ಅದನ್ನು “ತಪ್ಪು ರಾಜಕಾರಣ” ಎಂದು ಕರೆದಿದ್ದರು. “ಯಾದವ್ ಮತ್ತು ಮುಸ್ಲಿಂ ಸಮುದಾಯಗಳ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗಿದೆ” ಎಂದು ಆರೋಪಿಸಿದ್ದ ಅವರು ಇದು ನೀತಿಶ್ ಕುಮಾರ್ ಸರ್ಕಾರದ “ಅಪಾಯಕಾರಿ ರಾಜಕಾರಣ” ಎಂದು ಟೀಕಿಸಿದ್ದರು.
VIDEO | “Today, Amit Shah said that BJP was part of the government that took the decision of caste census. But, he should have also said that it was his government at the Centre that rejected the proposal of a countrywide caste census and hindered the caste survey in Bihar by… pic.twitter.com/1pWZYipcn0
— Press Trust of India (@PTI_News) November 5, 2023
ಅದಗ್ಯೂ, ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಹೇಳಿಕೆಯಿಂದ ಸಂಪೂರ್ಣವಾಗಿ ಯೂಟರ್ನ್ ಮಾಡಿದ್ದು, ಜಾತಿ ಗಣತಿಯನ್ನು ಮುಂದಿನ ಜನಗಣತಿಯಲ್ಲಿ ಸೇರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಏಪ್ರಿಲ್ 30, 2025ರಂದು “ಐತಿಹಾಸಿಕ” ಎಂದು ಕೊಂಡಾಡಿದ್ದಾರೆ.
“ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಮೋದಿ ಸರ್ಕಾರವು ಇಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ CCPA (ಕ್ಯಾಬಿನೆಟ್ ಕಮಿಟಿ ಆನ್ ಪೊಲಿಟಿಕಲ್ ಅಫೇರ್ಸ್) ಸಭೆಯಲ್ಲಿ, ಮುಂದಿನ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವ ನಿರ್ಧಾರವು ಸಾಮಾಜಿಕ ಸಮಾನತೆ ಮತ್ತು ಪ್ರತಿಯೊಂದು ವರ್ಗದ ಹಕ್ಕುಗಳಿಗೆ ಬಲವಾದ ಸಂದೇಶವನ್ನು ನೀಡಿದೆ. ಈ ನಿರ್ಧಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನು ಸಬಲೀಕರಣಗೊಳಿಸಲಿದೆ, ಒಗ್ಗಟ್ಟನ್ನು ಉತ್ತೇಜಿಸಲಿದೆ ಮತ್ತು ವಂಚಿತರ ಉನ್ನತಿಗೆ ಹೊಸ ಮಾರ್ಗಗಳನ್ನು ತೆರೆಯಲಿದೆ.” ಎಂದು ಅಮಿತ್ ಶಾ ಹೇಳಿದ್ದಾರೆ.
- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ಏಪ್ರಿಲ್ 12, 2024ರಂದು ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ನಡ್ಡಾ, “ನಾವು ಜಾತಿ ಗಣತಿಯನ್ನು ವಿರೋಧಿಸುತ್ತಿಲ್ಲ, ಆದರೆ ಕಾಂಗ್ರೆಸ್ ಈ ವಿಷಯವನ್ನು ಜನರನ್ನು ಒಡೆಯಲು ಬಳಸುತ್ತಿದೆ. ಪ್ರಧಾನಿ ಮೋದಿಯವರು ರಾಜಕೀಯವನ್ನು ಜಾತಿ, ಧರ್ಮ, ಪ್ರದೇಶದ ಆಧಾರದಿಂದ ದೂರವಿಟ್ಟು ಅಭಿವೃದ್ಧಿಯ ಕಡೆಗೆ ಕೊಂಡೊಯ್ದಿದ್ದಾರೆ.” ಎಂದು ಹೇಳಿದ್ದರು.
ಏಪ್ರಿಲ್ 30, 2025ರಂದು ಜೆ.ಪಿ. ನಡ್ಡಾ ಅವರು ಜಾತಿಗಣತಿ ನಿರ್ಧಾರವನ್ನು “ಐತಿಹಾಸಿಕ” ಎಂದು ಕೊಂಡಾಡಿದ್ದಾರೆ. “ಈ ನಿರ್ಧಾರವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನು ಮುಖ್ಯವಾಹಿನಿಗೆ ಕೊಂಡುಬರುವಲ್ಲಿ ಮತ್ತು ದೀರ್ಘಕಾಲದಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ಘನತೆಯನ್ನು ಮರುಸ್ಥಾಪಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ.” ಎಂದು ಹೇಳಿದ್ದಾರೆ.
- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಯೂಟರ್ನ್
ಯೋಗಿ ಆದಿತ್ಯನಾಥ್ ಅವರು ಜಾತಿ ಗಣತಿಯನ್ನು ಈ ಹಿಂದೆ ವಿರೋಧಿಸಿದ್ದರು. “ಜಾತಿಗಣತಿ ಕೈಗೊಳ್ಳುವವರು ದೇಶವನ್ನು ಒಡೆಯಲು ಬಯಸುತ್ತಾರೆ” ಎಂದು ಅವರು ಹೇಳಿದ್ದರು. ಜಾತಿ ಗಣತಿಯು ಸಾಮಾಜಿಕ ಒಡಕು ಮತ್ತು ಅಶಾಂತಿಗೆ ಕಾರಣವಾಗಬಹುದು ಎಂಬ ಅವರು ಆತಂಕ ವ್ಯಕ್ತಪಡಿಸಿದ್ದರು.
जातिगत जनगणना कराने वाले लोग देश को बांटना चाहते हैं- CM योगी pic.twitter.com/8KJp69gIaV
— ANURAG SINGH (@anuragsinghliv) April 30, 2025
ಅದಾಗ್ಯೂ, ಇದೀಗ ಆದಿತ್ಯನಾಥ್ ಅವರು ಜಾತಿಗಣತಿ ಬಗ್ಗೆಗಿನ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರವು “ಅಭೂತಪೂರ್ವ ನಿರ್ಧಾರ” ಎಂದು ಕರೆದಿದ್ದಾರೆ.
जातीय जनगणना पर सीएम योगी का पोस्ट
पीएम मोदी का फैसला स्वागत योग्य – योगी#CasteCensus #PMModi @ParidhiJoshiUK pic.twitter.com/yE1EKRd4dq— Zee Uttar Pradesh Uttarakhand (@ZEEUPUK) May 1, 2025
- ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ ಅವರ ಜಾತಿ ಗಣತಿಯ ಬಗೆಗಿನ ನಿಲುವು ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಬದಲಾಗಿದೆ. 2024ರಲ್ಲಿ ಅವರು ಕಾಂಗ್ರೆಸ್‌ನ ಜಾತಿ ಗಣತಿಯ ಬೇಡಿಕೆಯನ್ನು ರಾಜಕೀಯ ತಂತ್ರವೆಂದು ಟೀಕಿಸಿದ್ದರು. ಆದರೆ, 2025ರಲ್ಲಿ, ಕೇಂದ್ರ ಸರ್ಕಾರದ ಜಾತಿ ಗಣತಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
2023ರ ಅಕ್ಟೋಬರ್ 31ರಂದು, “ಜಾತಿ ಆಧಾರಿತ ವಿಭಜನೆಗಳು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಹಿಂದೂ ಸುಧಾರಕರು ಅವುಗಳನ್ನು ಸ್ಪಷ್ಟವಾಗಿ ಖಂಡಿಸಿದ್ದಾರೆ. ಈ ಯುಗದಲ್ಲಿ, ಜಾತಿಯ ಆಧಾರದ ಮೇಲೆ ನಮ್ಮನ್ನು ನಾವು ವಿಭಜಿಸಿಕೊಳ್ಳುವ ಬದಲು ಒಂದಾಗುವುದು ನಮ್ಮ ಕರ್ತವ್ಯವಾಗಿದೆ.” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಆದರೆ ಇದೀಗ ಅವರು ಸಂಪೂರ್ಣವಾಗಿ ಯೂಟರ್ನ್ ತೆಗೆದುಕೊಂಡಿದ್ದಾರೆ.
ಈ ತರ ರಾಜಕಾರಣ ಮಾಡ್ಬೇಕಾ ಸಾರ್ 🤣🤣🤣 pic.twitter.com/7g0b5dFb4b
— AllRounder Analyyst (@AllAnalyysstt) May 1, 2025
- ಕೇಂದ್ರ ಬೃಹತ್ ಕೈಗಾಗರಿಕಾ ಸಚಿವ ಕುಮಾರಸ್ವಾಮಿ ಬಿಜೆಪಿ ಯೂಟರ್ನ್
ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಾತಿ ಗಣತಿಯ ಬಗ್ಗೆ ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ. ಒಂದೆಡೆ, ಅವರು ಕರ್ನಾಟಕದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ತೀವ್ರವಾಗಿ ವಿರೋಧಿಸಿದ್ದು, ಇದನ್ನು “ದ್ವೇಷದ ಗಣತಿ” ಎಂದು ಕರೆದು ರಾಜಕೀಯ ಷಡ್ಯಂತ್ರವೆಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಕೇಂದ್ರ ಸರ್ಕಾರದ ಜಾತಿ ಗಣತಿಯ ನಿರ್ಧಾರವನ್ನು “ಐತಿಹಾಸಿಕ ಮತ್ತು ದೂರದೃಷ್ಟಿಯ” ಕ್ರಮವೆಂದು ಶ್ಲಾಘಿಸಿದ್ದಾರೆ.
ಅಲೆಲೆಲೆ ಕುಮಾರಣ್ಣ!
ನಿನ್ ಬಿಟ್ರೆ ಯಾರು ಇಲ್ಲ ಕಣ್ಣಣ್ಣ 🙏 pic.twitter.com/FydjSJEsc8
— Mr IG (@Isvaguru) April 30, 2025
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಿಚಾರಣೆ ಹಂತದಲ್ಲಿ 1,700 ಕ್ಕೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಪ್ರಕರಣಗಳು: ಇಡಿ
ವಿಚಾರಣೆ ಹಂತದಲ್ಲಿ 1,700 ಕ್ಕೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಪ್ರಕರಣಗಳು: ಇಡಿ

