ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನಿನ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಲು, ಲೂಧಿಯಾನದ ರಾಷ್ಟ್ರೀಯ ಅಂಧರ ಒಕ್ಕೂಟ ಶನಿವಾರ ದೆಹಲಿಯ ಟಿಕ್ರಿ ಗಡಿಗೆ ಬಂದು ತಲುಪಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟ ಇಂದಿಗೆ ಒಂದು ತಿಂಗಳಾಗಿದೆ.
ಕಳೆದ ಒಂದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಕೇಂದ್ರದ ಜೊತೆ ಆರು ಸುತ್ತಿನ ಮಾತುಕತೆ ಮುರಿದು ಬಿದ್ದಿದೆ. ರೈತರು ಕೇಂದ್ರವು ಪರಿಚಯಿಸಿದ ನೂತನ ಕಾನೂನುಗಳನ್ನು ವಾಪಾಸು ಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದರೆ ಕೇಂದ್ರ ಸರ್ಕಾರ ಇದ್ಯಾವುದನ್ನೂ ಕಿವಿಗೆ ಹಾಕಿಕೊಂಡಿಲ್ಲ. ಶುಕ್ರವಾರ ಕೂಡಾ ಪ್ರಧಾನಿ ನರೇಂದ್ರ ಮೋದಿ ಕಾನೂನನ್ನು ಸಮರ್ಥನೆ ಮಾಡಿಕೊಂಡಿದ್ದು, ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ರೈತರು ತಮ್ಮ ಹೋರಾಟದ ಬಗ್ಗೆ ಸ್ಫಷ್ಟತೆ ಇದೆ, ನಮ್ಮನ್ನು ಯಾರೂ ದಾರಿ ತಪ್ಪಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ: ಹೋರಾಟ ನಿರತ ರೈತರ ಆರೋಪ
Delhi: Specially-abled people from the National Federation of the Blind in Ludhiana join farmers' protest at the Tikri border. pic.twitter.com/W7GnjOSuob
— ANI (@ANI) December 26, 2020
ರೈತ ಹೋರಾಟಕ್ಕೆ ಅಂಧರ ಒಕ್ಕೂಟದ ಬೆಂಬಲ ನೀಡಿರುವುದನ್ನು ಹಲವಾರು ಜನರು ಬೆಂಬಲಿಸಿದ್ದಾರೆ. ಡಾ. ಸುಯಾಸ್, “ವಿಶೇಷ ಸಾಮರ್ಥ್ಯದ (ಕುರುಡು) ಜನರು ಕೂಡಾ ರೈತರ ನೋವನ್ನು ನೋಡಲು ಸಮರ್ಥರಾಗಿದ್ದಾರೆ. ಆದರೆ ರೈತರು ಮತ ಚಲಾಯಿಸಿದ ಸರ್ಕಾರವು ರೈತರ ಸಮಸ್ಯೆಗಳನ್ನು ಕೇಳದೆ ಕಿವುಡಾಗಿ ವರ್ತಿಸುತ್ತಿದೆ. ರೈತರ ಸಂಕಟವನ್ನು ಕುರುಡರು ನೋಡುತ್ತಾರೆ, ಹಾಗೂ ಅವರ ಪರವಾಗಿ ಮೂಗರೂ ಮಾತನಾಡುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಈ ರೈತ ದೆಹಲಿಯ ರೈತ ಹೋರಾಟದಲ್ಲಿ ಮೃತಪಟ್ಟಿದ್ದಾರೆಯೇ?
Specially abled (Blind) people are able to see the pain of Farmers but the government whom they voted is acting deaf to hear their problems, blind to see their agony and Dumb to speak for them.#kisanandolan #FarmersProtest
— Dr. Suyash Bakliwal?? (@Suyashbakliwal) December 26, 2020
ಒಂದು ತಿಂಗಳಾದರೂ ತಮ್ಮ ಅಳಲನ್ನು ಕೇಳದ ಸರ್ಕಾರದ ವಿರುದ್ದ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದು, ಶನಿವಾರ ದೆಹಲಿ-ಗಾಜಿಯಾಬಾದ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 9 ಮತ್ತು 24 ಗಳನ್ನು ತಡೆದಿದ್ದಾರೆ.
ಶುಕ್ರವಾರ ಪೊಲೀಸರು ಶುಕ್ರವಾರ ಸಿಂಘೂ, ಗಾಜಿಪುರ, ಪಿಯಾವ್ ಮಣಿಯಾರಿ ಮತ್ತು ಇತರ ಗಡಿ ಕೇಂದ್ರಗಳನನ್ನು ಬಂದ್ ಮಾಡಿದ್ದು, ಪ್ರಯಾಣಿಕರನ್ನು ಲಾಂಪೂರ್, ಸಫಿಯಾಬಾದ್, ಪಲ್ಲಾ, ಮತ್ತು ಸಿಂಘೂ ಸ್ಕೂಲ್ ಟೋಲ್ ಗಡಿಗಳಲ್ಲಿ ಪ್ರಯಾಣಿಸುವಂತೆ ಹೇಳಿದ್ದರು. ಪ್ರತಿಭಟನೆಗಳು ತೀವ್ರಗೊಂಡ ಹಿನ್ನಲೆಯಲ್ಲಿ ಹಿಂಸಾತ್ಮಕ ತಿರುವು ಪಡೆಯದಂತೆ ಗಾಜಿಪುರ ಗಡಿಯಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ತೀವ್ರಗೊಂಡ ದೆಹಲಿ ಹೋರಾಟ – ಎರಡು ಹೆದ್ದಾರಿಗಳನ್ನು ಮುಚ್ಚಿದ ರೈತರು!


