Homeದಿಟನಾಗರಫ್ಯಾಕ್ಟ್‌ಚೆಕ್: ಈ ರೈತ ದೆಹಲಿಯ ರೈತ ಹೋರಾಟದಲ್ಲಿ ಮೃತಪಟ್ಟಿದ್ದಾರೆಯೇ?

ಫ್ಯಾಕ್ಟ್‌ಚೆಕ್: ಈ ರೈತ ದೆಹಲಿಯ ರೈತ ಹೋರಾಟದಲ್ಲಿ ಮೃತಪಟ್ಟಿದ್ದಾರೆಯೇ?

"ದೆಹಲಿಯ ರೈತ ಆಂದೋಲನದಲ್ಲಿ ಮತ್ತೊಬ್ಬ ರೈತ ಸಹೋದರ ಮೃತಪಟ್ಟಿದ್ದಾರೆ. ಅವರಿಗೆ ನಮ್ಮ ನಮನಗಳು" ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

- Advertisement -
- Advertisement -

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಮತ್ತೊಬ್ಬ ಸಿಖ್ ರೈತ ಮೃತಪಟ್ಟಿದ್ದಾರೆ ಎಂದು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಖ್‌ ವ್ಯಕ್ತಿಯೊಬ್ಬ ನೆಲೆದ ಮೇಲೆ ಮಲಗಿರುವ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.

ಇಂಡಿಯನ್ ಫಾರ್ಮರ್ ಎನ್ನುವ ಖಾತೆಯಿಂದ ಈ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, “ದೆಹಲಿಯ ರೈತ ಆಂದೋಲನದಲ್ಲಿ ಮತ್ತೊಬ್ಬ ರೈತ ಸಹೋದರ ಮೃತಪಟ್ಟಿದ್ದಾರೆ. ಅವರಿಗೆ ನಮ್ಮ ನಮನಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?

ಇದನ್ನು ರಮಣ್ ದೀಪ್ ಸಿಂಗ್ ಎಂಬುವವರೂ ಇದೇ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದರು. ಈ ಎರಡೂ ಪೋಸ್ಟ್‌ಗಳ ಆರ್ಕೈವ್‌ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಲವಾರು ಫೇಸ್‌ಬುಕ್ ಬಳಕೆದಾರರು ಕೂಡ ಈ ಚಿತ್ರವನ್ನು ಇದೇ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!

ಫ್ಯಾಕ್ಟ್‌ಚೆಕ್:

ಈ ಚಿತ್ರವನ್ನು 2018 ಸೆಪ್ಟಂಬರ್ ತಿಂಗಳಿನಲ್ಲಿ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಈ ಪೋಸ್ಟ್‌ನಿಂದ ಸುಮಾರು 30,000 ಕ್ಕೂ ಹೆಚ್ಚು ಶೇರ್‌ಗಳಾಗಿವೆ. ಇದರ ಪ್ರಕಾರ ಈ ಚಿತ್ರವು ಪಂಜಾಬ್‌ನ ತಾರ್ನ್‌ ತರಣ್ ನಗರದ ಬೋಹ್ರಿ ಚೌಕ್‌ನಲ್ಲಿ 70 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಮರಣ ಹೊಂದಿರುವುದನ್ನು ತೋರಿಸುತ್ತದೆ.

ಈ ಚಿತ್ರದ ವಿವರಗಳು ಅಷ್ಟಾಗಿ ದೊರೆಯದಿದ್ದರೂ, ಇದು ಇತ್ತೀಚಿನ ರೈತರ ಆಂದೋಲನಕ್ಕೆ ಸಂಬಂಧಿಸಿಲ್ಲ.

ಆದಾಗ್ಯೂ, ಪ್ರಸ್ತುತ ನಡೆಯುತ್ತಿರುವ ಚಳವಳಿಯಲ್ಲಿ ಹಲವಾರು ಪ್ರತಿಭಟನಾಕಾರರು ಮರಣ ಹೊಂದಿದ್ದಾರೆ ಎಂಬುದು ಗಮನಾರ್ಹ. ಡಿಸೆಂಬರ್ 18 ರಂದು ಅಲ್ ಜಜೀರಾ ಪ್ರಕಟಿಸಿದ ವರದಿಯ ಪ್ರಕಾರ, ಮೂರು ವಾರಗಳ ಪ್ರತಿಭಟನೆಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹಲವರು ಅತಿಯಾದ ಶೀತದಿಂದಾಗಿ ಮರಣ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ‌ ಹಂಚಿಕೆ: RSS‌ ಕಾರ್ಯಕರ್ತ ಬಂಧನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...