ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಆಡಳಿತರೂಢ ಶಿವಸೇನಾ ನಡುವೆ ನಡೆಯುತ್ತಿರುವ ಜಗಳ ತಾರಕಕ್ಕೇರಿದ್ದು, ಮುಂಬೈನಲ್ಲಿರುವ ನಟಿಯ ಕಚೇರಿಯನ್ನು ನೆಲಸಮಕ್ಕೆ ಮುಂದಾಗಿತ್ತು. ಸದ್ಯಕ್ಕೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂಬೈನ ಬಾಂದ್ರಾದಲ್ಲಿರುವ ಮಣಿಕರ್ಣಿಕಾ ಫಿಲ್ಮ್ ಪ್ರೈವೆಟ್ ಲಿಮಿಟೆಡ್ ಕಚೇರಿಯಲ್ಲಿ ಹಲವಾರು ಅಕ್ರಮ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ಆರೋಪಿಸಿರುವ ಬಿಎಂಸಿ(ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೋರೇಷನ್) ನಿನ್ನೆ ಕಚೇರಿಗೆ ನೋಟಿಸ್ ಅಂಟಿಸಿತ್ತು.
ಹಿರಿಯ ಬಿಎಂಸಿ ಅಧಿಕಾರಿಯೊಬ್ಬರು, “ನೋಟಿಸ್‌ಗೆ ಪ್ರತಿಕ್ರಿಯಿಸಲು ನಾವು ಅವರಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದೆವು ಆದರೆ ಅವರು ಉತ್ತರಿಸಿಲ್ಲ” ಎಂದು ಹೇಳಿದ್ದಾರೆ. ಜೊತೆಗೆ ನಟಿಯ ಕಚೇರಿಯೊಳಗೆ ಹಲವಾರು ಅಕ್ರಮ ಮತ್ತು ಅನಧಿಕೃತ ನಿರ್ಮಾಣಗಳಿವೆ ಮತ್ತು ಆದ್ದರಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ ನಂತರ ನಗರಕ್ಕೆ ಮರಳದಂತೆ ಎಚ್ಚರಿಕೆ ನೀಡಿದ ಸೇನಾ ನಾಯಕ ಸಂಜಯ್ ರೌತ್ ಅವರ ಬೆದರಿಕೆಯ ನಂತರ ನಟಿ ಇಂದು ಮುಂಬೈಗೆ ತೆರಳಿದ್ದಾರೆ.
ಬಿಎಂಸಿ ತಂಡವು ಆಸ್ತಿಯನ್ನು ಸಮೀಕ್ಷೆ ಮಾಡಿತ್ತು ಮತ್ತು ಕಚೇರಿಯ ನೆಲ ಮತ್ತು ಮೊದಲ ಮಹಡಿಯಲ್ಲಿ ಅನೇಕ ಅನಧಿಕೃತ ನಿರ್ಮಾಣಗಳನ್ನು ಕಂಡುಹಿಡಿದಿದೆ.
ನಟಿ ಕಟ್ಟಡ ನೆಲಸಮ ಮಾಡುತ್ತಿರುವ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿ ಮುಂಬೈಯನ್ನು ಮತ್ತೆ ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಟ್ವೀಟ್ ಒಂದರಲ್ಲಿ “ನಾನು ಮುಂಬೈ ದರ್ಶನಕ್ಕೆ ಸಜ್ಜಾಗಿ ವಿಮಾನ ನಿಲ್ದಾಣಕ್ಕೆ ಹೋಗುವಷ್ಟರಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಆಸ್ತಿಯಲ್ಲಿದ್ದಾರೆ. ಅವರೆಲ್ಲರೂ ಅದನ್ನು ಅಕ್ರಮವಾಗಿ ಒಡೆಯಲು ಸಿದ್ಧರಾಗಿದ್ದಾರೆ. ಮುಂದುವರೆಯಿರಿ! ಮಹಾರಾಷ್ಟ್ರದ ಹೆಮ್ಮೆಗೆ ರಕ್ತ ಕೊಡುವುದಾಗಿ ಭರವಸೆ ನೀಡಿದ್ದೇನೆ. ಇದು ಏನೂ ಅಲ್ಲ. ಎಲ್ಲವನ್ನೂ ತೆಗೆದುಕೊಳ್ಳಿ, ಆದರೆ ನನ್ನ ಸ್ಪೂರ್ತಿ ಹೆಚ್ಚು ಎತ್ತರಕ್ಕೆ ಏರುತ್ತದೆ” ಎಂದು ಹೇಳಿದ್ದಾರೆ.
As I am all set for Mumbai Darshan on my way to the airport,Maha government and their goons are at my property all set to illegally break it down, go on! I promised to give blood for Maharashtra pride this is nothing take everything but my spirit will only rise higher and higher. pic.twitter.com/6lE9LoKGjq
— Kangana Ranaut (@KanganaTeam) September 9, 2020
I am never wrong and my enemies prove again and again this is why my Mumbai is POK now #deathofdemocracy ? pic.twitter.com/bWHyEtz7Qy
— Kangana Ranaut (@KanganaTeam) September 9, 2020
Pakistan…. #deathofdemocracy pic.twitter.com/4m2TyTcg95
— Kangana Ranaut (@KanganaTeam) September 9, 2020
Babur and his army ?#deathofdemocracy pic.twitter.com/L5wiUoNqhl
— Kangana Ranaut (@KanganaTeam) September 9, 2020
ಕಂಗನಾ ಕಟ್ಟಡ ನೆಲಸಮ ಮಾಡಿರುವುದಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ನಟಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.
Tell Kangana to keep the faith. We are with her in this struggle.
— Subramanian Swamy (@Swamy39) September 9, 2020
ನಟಿ ಕಂಗನಾ ರಾಣಾವತ್ ವಕೀಲರು ಕಟ್ಟಡ ಉರುಳಿಸುವಿಕೆಯ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಟ್ಟಡ ಧ್ವಂಸ ಮಾಡದಂತೆ ಬಿಎಂಸಿಗೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ನಾಳೆ ಮಧ್ಯಾಹ್ನ 3ಗಂಟೆಗೆ ಮತ್ತೆ ವಿಚಾರಣೆ ನಡೆಯಲಿದೆ. ಕಂಗನಾ ರಾಣಾವತ್ ವಿವಾದ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.


