Homeಮುಖಪುಟಗಂಡಿಕೋಟ ಜಲಾಶಯ ಯೋಜನೆ: ಬಲವಂತವಾಗಿ ಗ್ರಾಮಸ್ಥರನ್ನು ಹೊರಹಾಕುತ್ತಿರುವ ಪೊಲೀಸರು!

ಗಂಡಿಕೋಟ ಜಲಾಶಯ ಯೋಜನೆ: ಬಲವಂತವಾಗಿ ಗ್ರಾಮಸ್ಥರನ್ನು ಹೊರಹಾಕುತ್ತಿರುವ ಪೊಲೀಸರು!

"ಗ್ರಾಮದಲ್ಲಿ 400 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಂದಾಯ ಅಧಿಕಾರಿಗಳು ನಮ್ಮನ್ನು ಬಲವಂತವಾಗಿ ಹೊರಹೋಗುವಂತೆ ಕಿರುಕುಳ ನೀಡುತ್ತಿದ್ದಾರೆ"- ರಾಜೇಶ್ (ಗ್ರಾಮಸ್ಥ)

- Advertisement -
- Advertisement -

ಗಂಡಿಕೋಟ ಜಲಾಶಯದ ಎರಡನೇ ಹಂತದ ಯೋಜನೆಯ ಭಾಗವಾಗಿ ಸ್ಥಳಾಂತರಗೊಳ್ಳುತ್ತಿರುವ ಕಡಪದ ತಲ್ಲಾಪ್ರೊದ್ದತ್ತೂರು ಗ್ರಾಮದ ನಿವಾಸಿಗಳು ಪುನರ್ವಸತಿ ಕಲ್ಪಿಸುವಂತೆ ಕೋರಿ ಪ್ರತಿಭಟನೆ ಮಾಡುತ್ತಿದ್ದಾರೆ.

ಕಡಪ ಜಿಲ್ಲೆಯಲ್ಲಿ ಗಂಡಿಕೋಟ ಜಲಾಶಯವನ್ನು ನಿರ್ಮಿಸಲಾಗುತ್ತಿದ್ದು, ಕೃಷ್ಣಾ ನದಿನೀರನ್ನು ಪೆನ್ನಾ ನದಿ ಜಲಾನಯನ ಪ್ರದೇಶಕ್ಕೆ ಎರಡು ಹಂತಗಳಲ್ಲಿ ಪೂರೈಸಲಿದೆ. ಹಾಗಾಗಿ ಈ ಎರಡನೇ ಹಂತದ ಯೋಜನೆಗಾಗಿ ತಮ್ಮನ್ನು ಬಲವಂತದಿಂದ ಹೊರಹಾಕುತ್ತಿರುವುದನ್ನು ವಿರೋಧಿಸಿ ತಲ್ಲಾಪ್ರೊದ್ದತ್ತೂರು ಗ್ರಾಮದ ಸುಮಾರು 2000 ಕ್ಕೂ ಹೆಚ್ಚು ಕುಟುಂಬಗಳು ಹೋರಾಟ ಮಾಡುತ್ತಿವೆ.

ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್‌ ಯಶಸ್ವಿಯಾಯಿತೇ? ಇಲ್ಲವೇ? – ಡಾ.ಅಕ್ಕಮಹಾದೇವಿ ಹಿಮಾಂಶು

ಸರ್ಕಾರವು ಈ ಯೋಜನೆಯ ಸಾಮರ್ಥ್ಯವನ್ನು 22 ಟಿಎಂಸಿ ಮೀಟರ್‌ಗೆ ಹೆಚ್ಚಿಸಿದ್ದರಿಂದ, ಕಡಪ ಜಿಲ್ಲೆಯ ಚಾಮಲೂರು, ಯೆರ್ರಗುಡಿ ಮತ್ತು ತಲ್ಲಾಪ್ರೊದ್ದತ್ತೂರು ಗ್ರಾಮಗಳ ಮೇಲೆ ಪರಿಣಾಮ ಬೀರಲಿವೆ.

ಸ್ಥಳಾಂತರಗೊಳ್ಳುತ್ತಿರುವ 1300 ಕುಟುಂಬಗಳ ಪೈಕಿ, ಈ ​​ಗ್ರಾಮಗಳಲ್ಲಿ 3500 ವಯಸ್ಕರಿಗೆ ಪರಿಹಾರ ಪುನರ್ವಸತಿ ಪರಿಹಾರ ತಲುಪಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದ್ದು, ಅವರನ್ನು ಹೊರಹಾಕಲು ಕಂದಾಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಗ್ರಾಮಸ್ಥರು ಸಂಪೂರ್ಣ ಪುನರ್ವಸತಿ ಪಡೆದ ನಂತರವೇ ಹೊರಡುವುದಾಗಿ ಹೇಳುತ್ತಿದ್ದಾರೆ. ಈ ಯೋಜನೆಯಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ ಎಂದು ಉಲ್ಲೇಖಿಸಿ ಗ್ರಾಮಸ್ಥರನ್ನು ಸ್ಥಳಾಂತರಿಸಲು ಪೊಲೀಸ್ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.

ನಮ್ಮನ್ನು ಸ್ಥಳಾಂತರಿಸಲು ಸೂಚನೆ ನೀಡದೇ, ತಕ್ಷಣದ ನೋಟೀಸ್ ಹೊರಡಿಸಿ, ಈಗಲೇ ಹೊರಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಮಗೆ ಕಾಲಾವಕಾಶವೇ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅದಾಗ್ಯೂ, ತಮಗೆ ಪುನರ್ವಸತಿ ಕಲ್ಪಿಸಿರುವ ಜೋಗುಲಾಪುರಂ ಬಳಿಯ 100 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿರ್ಮಾಣ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ದಿ ನ್ಯೂಸ್ ಮಿನಿಟ್‌ಗೆ ಹೇಳಿದ್ದಾರೆ.

ಹಳ್ಳಿಯಲ್ಲಿ ಪ್ರತಿಭಟನೆಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಕೆಲವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 4,000 ಕೋಟಿ ನೆರೆ ಪರಿಹಾರ ಕೇಳಿದ ಕರ್ನಾಟಕ: ಪರಿಹಾರ ಹಣ ಘೋಷಿಸದ ಮೋದಿ!

ಈ ಬಗ್ಗೆ ಮಾತನಾಡಿದ ರಾಜೇಶ್ ಎಂಬ ಗ್ರಾಮಸ್ಥ, “ಗ್ರಾಮದಲ್ಲಿ 400 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಂದಾಯ ಅಧಿಕಾರಿಗಳು ನಮ್ಮನ್ನು ಬಲವಂತವಾಗಿ ಹೊರಹೋಗುವಂತೆ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದರು. ರಾಜೇಶ್ ಅವರನ್ನು ಅಕ್ಟೋಬರ್ 15 ರೊಳಗೆ ಖಾಲಿ ಮಾಡುವಂತೆ ಕೋರಲಾಗಿದೆ.

“ಇಲ್ಲಿಯವರೆಗೆ ಕೇವಲ 700 ಘಟಕಗಳಿಗೆ ಮಾತ್ರ (ಪರಿಹಾರಕ್ಕೆ ಅರ್ಹರಾದ ವಯಸ್ಕರಿಗೆ)  ಆರ್‌ & ಆರ್‌ ಪ್ಯಾಕೇಜ್ (Rehabilitation and Resettlement package) ಅಡಿಯಲ್ಲಿ ಪರಿಹಾರ ದೊರೆತಿದೆ. ಪರ್ಯಾಯ ವಸತಿ ಸೌಲಭ್ಯವಿಲ್ಲದ ಜನರು ಎಲ್ಲಿರಬೇಕು? ಪುನರ್ವಸತಿ ಕಾಲೋನಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ 2013 ರ ಪ್ರಕಾರ ನಮ್ಮ ಪರಿಹಾರ ಮತ್ತು ಪುನರ್ವಸತಿಯನ್ನು ಸರ್ಕಾರ ಇತ್ಯರ್ಥಪಡಿಸಬೇಕೆಂದು ನಾವು ಬಯಸುತ್ತೇವೆ. ಆಗ ಮಾತ್ರ ನಾವು ಈ ಸ್ಥಳವನ್ನು ಬಿಡುತ್ತೇವೆ” ಎಂದು ಗ್ರಾಮಸ್ತರು ಹೇಳುತ್ತಾರೆ.

7000 ಕ್ಕೂ ಹೆಚ್ಚು ಜನರಿರುವ ಗ್ರಾಮದಲ್ಲಿ 1300 ಕುಟುಂಬಗಳಿವೆ. ಇಲ್ಲಿ ವಾಸಿಸುವ 400 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳಲ್ಲಿ, 30% ಕುಟುಂಬಗಳಿಗೂ ಸಹ ಪುನರ್ವಸತಿಗಾಗಿ ಪರಿಹಾರವನ್ನು ನೀಡಲಾಗಿಲ್ಲ.

“ಗ್ರಾಮದಲ್ಲಿ ಎಲ್ಲವೂ ಸರಿಯಾಗಿದೆ. ಯಾವುದೇ ಬಂಧನಗಳನ್ನು ಮಾಡಿಲ್ಲ. ಯಾವುದೇ ಪ್ರಕರಣಗಳು ದಾಖಲಾಗಿಲ್ಲ, ಎಲ್ಲವೂ ಶಾಂತಿಯುತವಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ.ಕೆ.ಅನ್ಬುರಾಜನ್ ಹೇಳಿದ್ದರೆ. ಪುನರ್ವಸತಿಗೆ ಸಂಬಂಧಿಸಿದ ವಿಷಯಗಳು ಜಿಲ್ಲಾಧಿಕಾರಿಯ ವ್ಯಾಪ್ತಿಯಲ್ಲಿದೆ ಎಂದೂ ಹೇಳಿದರು.

ಮಾನವ ಹಕ್ಕುಗಳ ವೇದಿಕೆಯ(ಎಚ್‌ಆರ್‌ಎಫ್) ಜಯಶ್ರೀ ಕಾಕುಮಣಿ, ಆದಾಯ ಮತ್ತು ಪೊಲೀಸ್ ಅಧಿಕಾರಿಗಳ ಈ ವರ್ತನೆಯನ್ನು  ಖಂಡಿಸಿ,”ವೈಎಸ್‌ಆರ್‌ಸಿಪಿ ಸರ್ಕಾರವು ನ್ಯಾಯದ ಭರವಸೆಯನ್ನು ಕಿತ್ತುಕೊಂಡಿದೆ. ಆದರೆ ಈಗ ಅದೇ ಗ್ರಾಮಸ್ಥರು ನ್ಯಾಯಯುತ ಪರಿಹಾರಕ್ಕಾಗಿ ಒತ್ತಾಯಿಸಿದಾಗ ಅವರನ್ನು ಮೌನಗೊಳಿಸುತ್ತದೆ” ಎಂದು ಹೇಳಿದರು.


ಇದನ್ನೂ ಓದಿ: ಯೂರಿಯಾ ಕೊರತೆ ನೀಗಿಸಿ: ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...