Homeಮುಖಪುಟ’ಸಾಫ್ಟ್‌ ಪೋರ್ನ್ ಸ್ಟಾರ್’ ಹೇಳಿಕೆ; ಕಂಗನಾರನ್ನು ಖಂಡಿಸಿ ಊರ್ಮಿಳಾ ಬೆಂಬಲಕ್ಕೆ ನಿಂತ ಬಾಲಿವುಡ್

’ಸಾಫ್ಟ್‌ ಪೋರ್ನ್ ಸ್ಟಾರ್’ ಹೇಳಿಕೆ; ಕಂಗನಾರನ್ನು ಖಂಡಿಸಿ ಊರ್ಮಿಳಾ ಬೆಂಬಲಕ್ಕೆ ನಿಂತ ಬಾಲಿವುಡ್

- Advertisement -

ನಟಿ ಕಂಗನಾ ರಾಣಾವತ್, “ಸತ್ಯ” ಸಿನೆಮಾ ಖ್ಯಾತಿಯ ತಾರೆ ಊರ್ಮಿಳಾ ಮಾತೋಂಡ್ಕರ್‌ ಅವರನ್ನು “ಸಾಫ್ಟ್ ಪೋರ್ನ್ ಸ್ಟಾರ್”(ಅರೆ ಅಶ್ಲೀಲ ನಟಿ) ಎಂದಿದ್ದು, ರಾಮ್ ಗೋಪಾಲ್ ವರ್ಮಾ, ಸ್ವರ ಭಾಸ್ಕರ್ ಮತ್ತು ಪೂಜಾ ಭಟ್ ಸೇರಿದಂತೆ ಬಾಲಿವುಡ್ ಚಿತ್ರೋದ್ಯಮದ ಅನೇಕ ನಟರು ಮತ್ತು ಚಲನಚಿತ್ರ ನಿರ್ಮಾಪಕರು ಊರ್ಮಿಳಾ ಮಾತೋಂಡ್ಕರ್ ಅವರನ್ನು ಬೆಂಬಲಿಸಿದ್ದಾರೆ.

ಬಾಲಿವುಡ್‌ನಲ್ಲಿ‌ ಸ್ವಜನಪಕ್ಷಪಾತ ಮತ್ತು ಮಾದಕದ್ರವ್ಯ ಮಾಫಿಯ ನಡೆಯುತ್ತಿದೆ ಎಂದಿದ್ದ ಕಂಗನಾ ರಾಣಾವತ್ ಪ್ರಸ್ತುತ ಚರ್ಚೆಯಲ್ಲಿದ್ದಾರೆ. ಬುಧವಾರ ರಾತ್ರಿ ಟೈಮ್ಸ್ ನೌಗೆ ನೀಡಿದ್ದ ಸಂದರ್ಶನದಲ್ಲಿ ಕಂಗನಾ ಊರ್ಮಿಳಾ‌ ಅವರನ್ನು “ಸಾಫ್ಟ್ ಪೋರ್ನ್ ಸ್ಟಾರ್” ಎಂದು ಕರೆದಿದ್ದರು.

ಇದನ್ನೂ ಓದಿ: ಕಂಗನಾಗೆ ಬೆಂಬಲ ನೀಡಲು ಮುಂಬೈಗೆ ಆಗಮಿಸಿತೆ ಕರ್ಣಿಸೇನಾ!: ಸತ್ಯಾಸತ್ಯತೆ ಏನು..?

ಈ ಹೇಳಿಕೆಗೆ ಬಾಲಿವುಡ್‌ನಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದು, ಊರ್ಮಿಳಾ ಅವರ 25 ವರ್ಷಗಳ ವೃತ್ತಿಜೀವನದ ಘನತೆಯನ್ನು ಪ್ರಶಂಸಿಸಿದೆ.

“ರಂಗೀಲಾ”, “ಸತ್ಯ” ಮತ್ತು “ಭೂತ್” ನಂತಹ ಅನೇಕ ಜನಪ್ರಿಯ ಚಿತ್ರಗಳಲ್ಲಿ ಊರ್ಮಿಳಾ ಅವರೊಂದಿಗೆ ಕೆಲಸ ಮಾಡಿದ್ದ ನಿರ್ದೇಶಕ ರಾಮ್‌ ಗೋಪಾಲ ವರ್ಮಾ, ನಟಿಯು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು

ನಟಿ ಸ್ವರ ಭಾಸ್ಕರ್‌, “ಆತ್ಮೀಯ ಊರ್ಮಿಲಾ ಮಾತೊಂಡ್ಕರ್, ಮಸೂಮ್, ಚಮತ್ಕಾರ್, ರಂಗೀಲಾ, ಜುಡೈ,  ದೌಡ್, ಸತ್ಯ, ಭೂತ್, ಕೌನ್, ಜಂಗಲ್, ಪ್ಯಾರ್ ತೂನೆ ಕ್ಯಾ ಕಿಯಾ, ತೆಹ್ಜೀಬ್, ಪಿಂಜಾರ್, ಏಕ್ ಹಸೀನಾ ಥಿ ಮುಂತಾದ ಚಿತ್ರಗಳಲ್ಲಿ ನಿಮ್ಮ ನಟನಾ ಸಾಮರ್ಥ್ಯ ಮತ್ತು ಅದ್ಭುತ ನೃತ್ಯವನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ! ಲವ್ ಯು” ಎಂದು ಟ್ವೀಟ್ ಮಾಡಿದ್ದಾರೆ.

 

ಚಿತ್ರ ನಿರ್ದೇಶಕ ಅನುವವ್ ಸಿನ್ಹಾ, ಊರ್ಮಿಳಾ ಸುಂದರ, ಸೊಗಸಾದ, ಎದ್ದುಕಾಣುವ, ಅಭಿವ್ಯಕ್ತಿಶೀಲ ನಟಿಯರಲ್ಲಿ ಒಬ್ಬರು ಎಂದು ಬರೆದಿದ್ದಾರೆ.

ನಟಿ ಪೂಜಾ ಭಟ್, “ಊರ್ಮಿಳಾ ನೀವು ದಂತಕತೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

0
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ...
Wordpress Social Share Plugin powered by Ultimatelysocial