Homeಮುಖಪುಟಪ್ರಧಾನಿ ಭೇಟಿ ನೀಡಿದ ಒಂದು ದಿನದ ನಂತರ ಮಣಿಪುರದಲ್ಲಿ ಬಾಂಬ್ ಸ್ಪೋಟ; ಒಬ್ಬ ಯೋಧ ಸಾವು

ಪ್ರಧಾನಿ ಭೇಟಿ ನೀಡಿದ ಒಂದು ದಿನದ ನಂತರ ಮಣಿಪುರದಲ್ಲಿ ಬಾಂಬ್ ಸ್ಪೋಟ; ಒಬ್ಬ ಯೋಧ ಸಾವು

- Advertisement -
- Advertisement -

ಮಣಿಪುರದ ದಕ್ಷಿಣ ಭಾಗದ ಸಮೀಪವಿರುವ ಗುಡ್ಡಗಾಡು ಪ್ರದೇಶವಾಗಿರುವ ತೌಬಲ್ ಜಿಲ್ಲೆಯ ಲಿಲಾಂಗ್ ಉಸೊಯಿಪೋಕ್ಪಿ ಸಂಗೊಮ್ಸಾಂಗ್‌ನಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಸ್ಫೋಟಗೊಂಡ ಪರಿಣಾಮ ಅಸ್ಸಾಂ ರೈಫಲ್ಸ್‌ನ ಸದಸ್ಯರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತ ಯೋಧನನ್ನು ಅರುಣಾಚಲ ಪ್ರದೇಶದ ರೈಫಲ್‌ಮನ್ ಎಲ್.ವಾಂಗ್ಚು (30) ಎಂದು ಗುರುತಿಸಲಾಗಿದೆ.

ಅಸ್ಸಾಂ ರೈಫಲ್ಸ್‌-16 ಬೆಟಾಲಿಯನ್‌ನ ಪಡೆಗಳು ರಾಜ್ಯದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದವು. ಈ ವೇಳೆ ಕೆಲವು ಪ್ಯಾರಾ ಮಿಲಿಟರಿ ಸೈನಿಕರು ನೀರು ಸರಬರಾಜು ಪಂಪ್‌ನ ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ ಸ್ಫೋಟಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ, ಸೈನಿಕರು ಹೆಚ್ಚಾಗಿ ಬಳಸುತ್ತಿದ್ದ ಪಂಪ್ ಬಳಿ ಐಇಡಿ ಸ್ಫೋಟಗೊಳ್ಳುವ ರೀತಿಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ:ಪಂಜಾಬ್: ಪ್ರಧಾನಿ ಕಾರ್ಯಕ್ರಮ ರದ್ದು; ಏನಂತಾರೆ ನೆಟ್ಟಿಗರು?

ಗಾಯಗೊಂಡ ಯೋಧ ಪಿಂಕು ದಾಸ್ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗಾಗಿ ಬಿಜೆಪಿ ಪರ ಪ್ರಚಾರದ ಭಾಗವಾಗಿ ಮಣಿಪುರಕ್ಕೆ ಭೇಟಿ ನೀಡಿದ ಒಂದು ದಿನದ ನಂತರ ಈ ಸ್ಫೋಟಗಳು ಸಂಭವಿಸಿವೆ.

ನವೆಂಬರ್ 13 ರಂದು ಈ ಪ್ರದೇಶದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಹೆಚ್ಚಿನ ಜಾಗರೂಕತೆಯನ್ನು ವಹಿಸುತ್ತಿವೆ. ಮಯನ್ಮಾರ್ ಗಡಿಯಲ್ಲಿರುವ ಚುರಾಚಂದ್‌ಪುರ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್್‌ನ ಕರ್ನಲ್, ಅವರ ಪತ್ನಿ ಮತ್ತು ಮಗ ಮತ್ತು ನಾಲ್ಕು ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿಯನ್ನು ಈ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲಾಗಿತ್ತು.

ಈ ದಾಳಿಯನ್ನು ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಮಣಿಪುರ ನಾಗಾ ಪೀಪಲ್ಸ್ ಫ್ರಂಟ್ ಮಾಡಿರುವುದಾಗಿ ಹೇಳಿಕೊಂಡಿವೆ.

ಇದನ್ನೂ ಓದಿ:Explained: ಹೋಮ್‌‌‌ ಐಸೋಲೇಶನ್‌ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ಅಲ್ಲಿಂದೀಚೆಗೆ ತೀವ್ರತರವಾದ ಭಯೋತ್ಪಾದಕ ದಾಳಿಗಳು ನಡೆದಿವೆ, ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಕಾರಣ ಉದ್ವಿಗ್ನತೆ ಹೆಚ್ಚುತ್ತಿದೆ. ತೌಬಲ್‌ನಲ್ಲಿ ನಡೆದ ಬಾಂಬ್ ಸ್ಫೋಟವು, ಮಣಿಪುರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಸ್ಫೋಟವಾಗಿದೆ.

ಭದ್ರತಾ ಅಧಿಕಾರಿಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಸ್ಫೋಟಿಸುವ ಮತ್ತು ಆಗಾಗ್ಗೆ ಆಸ್ತಿಪಾಸ್ತಿ ಹಾನಿಯನ್ನು ಉಂಟುಮಾಡುವ ಸ್ಫೋಟಗಳ ಮಾದರಿಯನ್ನು ಗಮನಿಸಿದ್ದಾರೆ. ಕಳೆದ ವರ್ಷ ನವೆಂಬರ್ 18, ಡಿಸೆಂಬರ್ 15 ಮತ್ತು 29 ರಂದು ಈ ಸ್ಪೋಟಗಳು ನಡೆದಿದ್ದವು. ಈ ಸ್ಪೋಟವನ್ನು ತಾವೆ ಮಾಡಿದ್ದಾಗಿ ಯಾವುದೇ ಭಯೋತ್ಪಾದಕ ಗುಂಪು ಅಥವಾ ಬಂಡೂಕೋರ ಸಂಘಟನೆಗಳು ಒಪ್ಪಿಕೊಂಡಿಲ್ಲ. ಈ ದಾಳಿಯ ಆರೋಪಿಗಳನ್ನು ಭದ್ರತಾ ಪಡೆಗಳು ಇನ್ನೂ ಗುರುತಿಸಿಲ್ಲ.

ಇದನ್ನೂ ಓದಿ:ಪಂಜಾಬ್ ಕೋರ್ಟ್ ಸ್ಪೋಟ ಪ್ರಕರಣಕ್ಕೆ ತಿರುವು: ಮೃತಪಟ್ಟ ಮಾಜಿ ಪೊಲೀಸ್ ಆರೋಪಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...