Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

- Advertisement -
- Advertisement -

ಎಚ್.ಆರ್. ರಾಮಕೃಷ್ಣ ರಾವ್ ಬೆಂಗಳೂರಿನ ಮಾವಳ್ಳಿಯಲ್ಲಿ ಹುಟ್ಟಿ, ಹೊಳಲ್ಕೆರೆಯಲ್ಲಿ ಬೆಳೆದು ಬೆಂಗಳೂರಿನ ವೈಜ್ಞಾನಿಕ ಮನೋಭಾವದ ಯುವ ಚೇತನಗಳಿಗೆ ದಾರಿದೀಪವಾದವರು.

ತಂದೆ ಎಚ್.ವಿ. ರಂಗರಾವ್, ತಾಯಿ ರಾಧಮ್ಮ ಅವರಿಂದ ಬಂದ ಜೀವನಶಿಸ್ತು, ಕನ್ನಡ ಮತ್ತು ಆಂಗ್ಲಭಾಷಾ ಪ್ರೌಢಿಮೆ, ಕಷ್ಟಸಹಿಷ್ಣು ಜೀವನ ಶ್ರದ್ಧೆ, ತಾಯಿಯ ಅಂತಃಕರಣ ಅರಿತ ಮಾತೃಸೇವಾ ನಿಷ್ಠತೆ, ತನ್ನ ಅರಿವನ್ನು ವಿಕಸಿಸಿಕೊಳ್ಳುವ ಜಾಗೃತ ಮನಸ್ಸಿನಿಂದ ರೂಪುಗೊಂಡವರು ಎಚ್.ಆರ್.ಆರ್. ಅವರು ಹೊಳಲ್ಕೆರೆಯಲ್ಲಿ ಬಾಲ್ಯಕಳೆದು, ಚಿತ್ರದುರ್ಗದಲ್ಲಿ ವಾರಾನ್ನದ ಹುಡುಗನಾಗಿ ಓದುವಾಗಲೇ ಗಣಿತ, ವಿಜ್ಞಾನ ಶಿಕ್ಷಕರಾದವರು. ಅವರ ವಿದ್ಯಾ ಶ್ರದ್ಧೆಯ ಮನೋಸ್ಥೈರ್ಯ ವಿದ್ಯಾರ್ಥಿಗಳಿಗೆ ಒಂದು ಆದರ್ಶ.

ಇಂಟರ್ ಮೀಡಿಯಟ್ ವಿದ್ಯಾಭ್ಯಾಸಕ್ಕೆ ನ್ಯಾಷನಲ್ ಕಾಲೇಜು ಸೇರಲು ಕಾರಣವಾಗಿ, ಭೌತಶಾಸ್ತ್ರದ ಬಗ್ಗೆ ಆಸಕ್ತಿಯನ್ನುಂಟು ಮಾಡಿದವರು ಹೆಚ್. ನರಸಿಂಹಯ್ಯ. ಅವರ ಬಗ್ಗೆ ಎಚ್.ಆರ್.ಆರ್‌ಗೆ ಅಪಾರ ಗೌರವ. ಬೇಂದ್ರೆಯವರು ಹೇಳುವ ’ಶುದ್ಧನಿದ್ದವ ಗೆದ್ದ’ ಎಂಬ ನುಡಿಯಂತೆ ಸತ್ಯ, ಧರ್ಮ, ನೈತಿಕ ನಿಲುವುಗಳಿಂದ ಜೀವನ ಪಯಣದಲ್ಲಿ ಗೆದ್ದ ಎಚ್.ಆರ್.ಆರ್. ಜನಸಾಮಾನ್ಯರಿಗೆ ಒಂದು ಮಾದರಿ.

ಅವರು ಬಿ.ಎಸ್.ಸಿ ಓದುವಾಗ ಸ್ಕೌಟ್ಸ್‌ಗೆ ಸೇರಿಕೊಂಡರು. ಅಲ್ಲಿ ನೀಡಿದ ಹ್ಯಾಮ್‌ರೇಡಿಯೊ ಪ್ರಾತ್ಯಕ್ಷಿಕೆಯನ್ನು ಆಸಕ್ತಿಯಿಂದ ತಿಳಿದುಕೊಂಡರು. ಸಂಪರ್ಕ ಮಾಧ್ಯಮಕ್ಕೆ ಮೋರ್‍ಸ್‌ಕೋಡ್ ಬಳಸುವುದರಲ್ಲಿ ಆಸಕ್ತಿ ಹೊಂದಿದರು. ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡು ಮೋರ್‍ಸ್‌ಕೋಡ್ ಬಳಸಿ ಸಂದೇಶ ಕಳುಹಿಸುವುದನ್ನು ಹಾಗೂ ಸ್ವೀಕರಿಸುವುದನ್ನು ಕಲಿತುಕೊಂಡರು. ಬೇಸಿಗೆ ರಜೆಯಲ್ಲಿ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಅಲ್ಲಿ ಸಂದೇಶ ಸ್ವೀಕರಿಸುವ ಕೆಲಸ ಮಾಡಿ ವಾರಕ್ಕೆ ಹತ್ತು ರೂಪಾಯಿ ಸಂಪಾದಿಸುತ್ತಿದ್ದರು. ವಿದ್ಯಾರ್ಥಿದೆಸೆಯಲ್ಲಿ ತನ್ನ ಬೌದ್ಧಿಕ ಪರಿಣತಿಯಿಂದ ಹಣ ಸಂಪಾದಿಸುತ್ತಿದ್ದ ಅವರ ಕ್ರಿಯಾಶೀಲ ಬೌದ್ಧಿಕ ಚತುರತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಬೆಳಕು.

ತಂದೆಯ ಮರಣದ ನಂತರ ಓದು ಮುಂದುವರಿಸಲಾಗಲಿಲ್ಲ. ಆಗ ಪೋಸ್ಟ್‌ಮಾಸ್ಟರ್ ಜನರಲ್‌ಗೆ ಪತ್ರ ಬರೆದು, ತನ್ನ ಟೆಲಿಗ್ರಾಫ್ ಅನುಭವ ತಿಳಿಸಿ ಪೋಸ್ಟ್‌ಮ್ಯಾನ್ ಕೆಲಸ ಪಡೆದರು. ಅದು ನಿರುದ್ಯೋಗಿ ಯುವಕರಿಗೆ ಅವರಿಂದ ದೊರೆಯುವ ಅನುಕರಣೀಯ ಸಾಹಸ. ಅದು ಚೆನ್ನಾಗಿ ಗ್ರಂಥದಲ್ಲಿ ನಿರೂಪಿತವಾಗಿದೆ.

ಎಚ್.ಆರ್.ಆರ್. ಅವರು ತಾನು ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕೆಂಬ ಹಿರಿಯ ಬಯಕೆ ಹೊಂದಿದ್ದರು. ಕೆಲಸ ಮಾಡುತ್ತ ಭೌತವಿಜ್ಞಾನದ ಅತ್ಯುತ್ತಮ ಸಂಶೋಧನಾ ಪುಸ್ತಕಗಳನ್ನು ಕೊಂಡು ಅಧ್ಯಯನ ಮಾಡುತ್ತ ತಮ್ಮ ಮನದ ಗುರಿಯತ್ತ ದಾಪುಗಾಲು ಹಾಕುತ್ತಿದ್ದರು. ಅವರಿಗೆ ಮದುವೆ ಆಗಿ ಮಕ್ಕಳಿದ್ದರೂ ವಿದ್ಯಾದಾಹದಿಂದ ಖಾಯಂ ಸರ್ಕಾರಿ ಪೋಸ್ಟ್‌ಮ್ಯಾನ್ ಕೆಲಸ ಬಿಟ್ಟರು. ತಮಗೆ ಪ್ರೋತ್ಸಾಹ, ಪತ್ನಿಯ ಸಹಕಾರದಿಂದ ಎಂ.ಎಸ್ಸಿ ವಿದ್ಯಾರ್ಥಿಯಾದರು. ತನ್ನ ಭೌತವಿಜ್ಞಾನದ ಪರಿಣತ ಜ್ಞಾನವನ್ನು ಪ್ರಾಧ್ಯಾಪಕರ ಸಮಿತಿ ಮುಂದೆ ಸಮರ್ಥವಾಗಿ ಮಂಡಿಸಿ ಸೀಟ್ ಪಡೆದರು.

ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ಸಂತ ಜೋಸೆಫ್‌ರ ಕಾಲೇಜಿನಲ್ಲಿ, ಆಚಾರ್ಯ ಪಾಠಶಾಲೆಯಲ್ಲಿ ಕೆಲಸ ಮಾಡಿ ಆತ್ಮಾನಂದದ ಸಾರ್ಥಕ ಶಿಕ್ಷಕರಾದರು. ಅನಂತರ ಕ್ರೈಸ್ಟ್ ಕಾಲೇಜಿಗೆ ಸೇರಿ, ಆ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಿದರು. ಅಲ್ಲಿ ಚಿ. ಶ್ರೀನಿವಾಸರಾಜು ಅವರ ಜೊತೆಗೂಡಿ ’ಕನ್ನಡ ಸಂಘ’ದ ಮುಖಾಂತರ ಕನ್ನಡ ವಾತಾವರಣ ಸೃಷ್ಟಿಸಿದರು. ಆ ಕಾಲೇಜಿನ ರೆಕ್ಟರ್ ಅವರಿಗೆ ಕಾಲೇಜಿನ ಲೋಗೋದಲ್ಲಿ ಕನ್ನಡದಲ್ಲಿ ’ಕ್ರೈಸ್ಟ್’ ಕಾಲೇಜ್ ಎಂದು ಸೇರಿಸಲು ಧೈರ್ಯವಾಗಿ ಹೇಳಿ, ಅದು ಆಗುವಂತೆ ಮಾಡಿದರು. ಅದು ಅವರಲ್ಲಿಯ ಕನ್ನಡ ಉಳಿಸಿ ಬೆಳೆಸುವ ಕ್ರಿಯಾಶೀಲ ನಡೆಯ ಕನ್ನಡತನದ ಪ್ರತೀಕ.

ಅವರು ಸಂಚಾರಿ ಟೆಲಿಸ್ಕೋಪ್‌ನಿಂದ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಆಕಾಶದ ವೀಕ್ಷಣೆಯ ಅದ್ಭುತ ನೋಟ ಮನಗಾಣಿಸಿದರು. ಎಚ್.ಆರ್.ಆರ್. ಅವರು ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದ ಮೇಲೆ ಇಂಟರ್ ಮೀಡಿಯಟ್ ಕಾಲೇಜ್ ಸಹಪಾಟಿ ಪಾಂಡು ಕೋರಿಕೆಯಂತೆ, ಅವರು ನಡೆಸುತ್ತಿದ್ದ ಆರ್.ವಿ. ಕಾಲೇಜಿನ ಹದಗೆಟ್ಟ ಪಾಠ ಪ್ರವಚನ, ವಿದ್ಯಾರ್ಥಿ ಶಿಕ್ಷಕರ ನಡೆಯನ್ನು ಶಿಸ್ತಿಗೆ ಒಳಪಡಿಸಿದರು. ಆ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿ ಆ ಕಾಲೇಜು ನಿಜ ಶಿಕ್ಷಣ ನೆಲೆಯಾಗುವಂತೆ ಮಾಡಿದರು. ಆ ಜ್ಞಾನದಾಹ, ವಿದ್ಯಾರ್ಥಿ ಮತ್ತು ಶಿಕ್ಷಕರ ಬಗೆಗಿನ ವಿಶ್ವಾಸ, ಆತ್ಮೀಯ ಕ್ರಿಯಾಶೀಲ ನಡೆ ವಿವರಿಸಿದರೆ ಅದರ ರುಚಿ ಕೆಡುತ್ತದೆ. ಅದನ್ನು ಕಲ್ಗುಂಡಿ ನವೀನ್ ಅವರ ನಿರೂಪಣೆಯಲ್ಲಿಯೇ ಓದಿ ಸವಿಯಬೇಕು. ಅದು ಇಂದಿನ ಹಾಗೂ ಮುಂದಿನ ವಿದ್ಯಾಸಂಸ್ಥೆಗಳು, ಎಲ್ಲ ಶಿಕ್ಷಕರು ಅನುಸರಿಸಬೇಕಾದ ನಡೆಯಾಗಿದೆ. ಹಾಗಾಗಿ ಈ ಆತ್ಮಕಥೆ ಸತ್ಯದ ದಾಖಲೆಯಾಗಿ ’ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,’ ಎಂಬ ಬಸವಣ್ಣನ ನುಡಿಯಂತೆ, ಎಚ್ಚರದಿಂದ ಅಲುಗಿನ ಮೇಲೆ ನಡೆದು ಸಾಗಿದಂತಿದೆ. ಇಂತಹ ಜೀವನ ಪಥ ಅನುಕರಣೀಯ. ಇಂತಹ ಆತ್ಮಕತೆಗಳು ಕನ್ನಡದಲ್ಲಿ ಅಪರೂಪ.

ರಾಮಕೃಷ್ಣರಾವ್ ಅವರ ’ರಾಮನ್, ದ ನ್ಯಾಚುರಲ್ ಫಿಲಾಸಪರ್’ ಸಾಕ್ಷಚಿತ್ರ., ಸರ್ ಸಿ.ವಿ.ರಾಮನ್‌ರನ್ನು ಕಂಡು ಅನುಭವಿಸಿದ ಸುಖ, ಅವರ ಪ್ರಯೋಗಾಲಯದ ಅನುಭವಗಳು ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅವರ ರನ್ನಿಂಗ್ ಥ್ರೂ ದ ಸಿಸ್ಟಮ್ – ಪಠ್ಯೇತರ ಇಂಗ್ಲೀಷ್ ಪುಸ್ತಕ, ’ಕಲಾಂ ಮೇಷ್ಟು’ ಕನ್ನಡ ಪುಸ್ತಕ ಹಾಗೂ ಎಚ್.ಆರ್.ಆರ್.ಆರ್. ಅವರ ವಂಶಸ್ಥರಾದ ರಾಮಣ್ಣಯ್ಯ ತಾಳೆ ಲಿಪಿ ಮಾಡಿದ್ದ ’ಕರ್ಣಾಟಕ ಭಾಗವತ’, ಕೃತಿಗಳು ಉತ್ತಮ ಸಾಹಿತ್ಯ ಕೊಡುಗೆಗಳಾಗಿವೆ.

ಈ ಆತ್ಮಕತೆಯಲ್ಲಿ ಅವರ ಸಂದರ್ಶನ, ಅಪರೂಪದ ಪೋಟೋಗಳು ಇದ್ದು ಅವರ ನಡೆಯ ಖಚಿತತೆಗೆ ಸಾಕ್ಷಿಯಾತಿಗಿವೆ. ಕನ್ನಡ ಜನರ ಮನಸ್ಸಿನಿಂದ ಸುಲಭವಾಗಿ ಮರೆತು ಹೋಗಬಹುದಾಗಿದ್ದ ಎಚ್.ಆರ್.ಆರ್. ಎಂಬ ಓರ್ವ ಬೌದ್ಧಿಕ ಪರಿಣತನ, ಸಾಹಸಿಯುವಕನ, ಮಾಗಿದ ಪ್ರಾಧ್ಯಾಪಕನ ಜೀವನಾನುಭವ ಸಾರವನ್ನು ಪ್ರಕಟಿಸಿ ಉದಯಭಾನು ಕಲಾಸಂಘ ತುಂಬಾ ಉಪಯುಕ್ತ ಕೆಲಸ ಮಾಡಿದೆ.

ಈ ಆತ್ಮಕಥೆಯನ್ನು ತುಂಬಾ ನವಿರಾದ ಭಾಷೆಯಲ್ಲಿ ನಿರೂಪಿಸಿರುವ ಕಲ್ಗುಂಡಿ ನವೀನ್ ಕೂಡ ಅಭಿನಂದನೀಯ.

ಕೃತಿ : ಅಂಬಿಗಾ! ದಡ ಹಾಯಿಸು….
(ಭೌತ ವಿಜ್ಞಾನದ ಪಾಧ್ಯಾಪಕರಾದ ಎಚ್.ಆರ್. ರಾಮಕೃಷ್ಣ ರಾವ್ ಅವರ ಆತ್ಮಕಥೆ)
ನಿರೂಪಣೆ : ಕಲ್ಗುಂಡಿ ನವೀನ್
ಪುಟಗಳು : 216
ಬೆಲೆ : ರೂ.200/-
ಪ್ರಕಟಣೆ : ಉದಯಭಾನು ಕಲಾಸಂಘ, ಬೆಂಗಳೂರು.

ಡಾ. ಜಿ. ಕೃಷ್ಣಪ್ಪ

ಡಾ. ಜಿ. ಕೃಷ್ಣಪ್ಪ
’ಬೇಂದ್ರೆ’ ಕೃಷ್ಣಪ್ಪ ಎಂದೇ ಜನಪ್ರಿಯರಾಗಿ, ಬೇಂದ್ರೆ ಮತ್ತು ಕುವೆಂಪು ಸಾಹಿತ್ಯದ ಪರಿಚಾರಕಾರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ’ಹಾಡು ಹಕ್ಕಿ ಅಂಬಿಕಾತನಯದತ್ತ’, ’ನಾಕುತಂತಿ-ಒಂದು ಟಿಪ್ಪಣಿ’, ’ಹಸಿರು ಹಚ್ಚಿ ಚುಚ್ಚಿ’, ’ಶ್ರೀ ರಾಮಾಯಣದರ್ಶನಂ ಪಾತ್ರಗಳ ಕಥಾವಳಿ’, ’ಬೇಂದ್ರೆ ಕಾವ್ಯ: ಪದನಿರುಕ್ತ’ ಕೃಷ್ಣಪ್ಪನವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...