Homeಕವನಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ .......

ಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ …….

- Advertisement -
- Advertisement -

ಕತ್ತಲಾಗಿದೆ ಜಗವು
ಜ್ಞಾನದ ದೀವಿಗೆ ಹಿಡಿದು
ಮತ್ತೆ ಹುಟ್ಟಿ ಬಾ
ಅಣ್ಷ ಬಸವಣ್ಣ

ಅಕ್ಷಯ ತೃತೀಯ ಗಳಿಗೆ,
ಒಳ್ಳೆಯ ಗಳಿಗೆಯಾದುದೇ
ನಿನ್ನ ಜನನದಿಂದ,
ಈ ಮಿತಿಗೆ ಮಾಡುವ
ಕಾರ್ಯ ಶುಭವೆಂದು
ಬಡಿದಾಡುವ ಜನ,
ನಿನ್ನ ತತ್ವಗಳನೆಲ್ಲಾ
ಗಾಳಿಗೆ ತೂರಿಹರು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಇಂದೊಂದು ದಿನ
ಸರಕಾರಿ ರಜೆ ಘೋಷಿಸಿ,
ನಿನ್ನ ಪಟಕೊಂದು
ಹೂವಿನ ಹಾರ ಹಾಕಿ,
ತರಾತುರಿಯ ಮೆರವಣಿಗೆಯಲಿ
ನಿನ್ನ ನೆಡೆದಾಡಿಸಿ,
ಬಾಯ್ತುಂಬಾ
ನಿನ್ನ ಹೊಗಳಿ ಉಂಡು
ಮಲಗುವವರಿಗೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಸಭೆ-ಸಮಾರಂಭಗಳ
ವೇದಿಕೆಯಲಿ,
ಸಹಸ್ರಾರು ಜನರೆದುರಿಗೆ,
ಕಂಠಪಾಠ ಮಾಡಿದ
ನಾಲ್ಕು ವಚನಗಳ ವಾಚಿಸಿ,
ಮರಳಿ ಮಣ್ಣು ತಿನ್ನುವ
ಕೆಲಸ ಮಾಡುವವರ
ಕೆಲ ಜನರಿಗೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ನೀನೇ ಒಂದು ಧರ್ಮ
ನಿನ್ನ ಹೆಸರಿನಾ
ಧರ್ಮದಾ ನೆರಳಿನಲಿ,
ಅಧರ್ಮ ಮಾಡುವಾ
ಕೆಲವು ಕದನಗಳು
ಹಗಲಿರುಳು ನೆಡೆಯುತ್ತಿವೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಆಚರಣೆ ಯಾವುದಾದರೇನು,
ವಿಚಾರ ವಿಲ್ಲದೇ ಫಲವೇನು,
ಮೌಢ್ಯಗಳ ದಿಕ್ಕರಿಸಿದ
ಎಲ್ಲರ ಭಾವಗಳ ಭಕುತಿಗೆ
ಮುಕುಟವಿಟ್ಟ ,
ನಿನ್ಮ ಭಾವಕೆ ಬೆಂಕಿ ಹಚ್ಚುವ
ಜನರಿಹರು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ನುಡಿ-ನೆಡೆಯ ಹೆಜ್ಜೆಗಳಾ
ಗುರುತು,
ನಿನ್ನ ವಚನದಾ ಗುಟ್ಟು,
ವಚನ ವಾಚನವ
ಮಾಡುವವರೆಲ್ಲರೂ,
ಪಾಲಿಸುವರಾ ಎಂದು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಮಾಧ್ಯಮಗಳ ಬರಾಟೆಯಿಲ್ಲ,
ಸಾಮಾಜಿಕ ಜಾಲತಾಣದಾ
ಅಬ್ಬರವಿಲ್ಲ,
ಮೈಕು- ಮೋಟಾರು ಗಾಡಿಗಳ
ಗಲಾಟೆಯಿಲ್ಲದೇ,
ಹೇಗೆ ಸೇರಿಸಿದೆ ಎಣಕೆಯಿಲ್ಲದಾ
ಶರಣ ಗಣಗಳನು,
ಅದರ ಗುಟ್ಟು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಜಾತಿ-ಧರ್ಮಗಳ ದೊಂಬಿಯಲಿ
ನಿತ್ಯವೂ ಮಾರಣ ಹೋಮ,
ಅಧಿಕಾರದಾ ಹಪಹಪಿಗೆ
ಅಂಧಕಾರ ಮಾಡಿಹರು ನಾಡನ್ನು,
ಅರಿವಿನಾ ದೀವಿಗೆ ಹಿಡಿದು
ನಮ್ಮನ್ನು ರಕ್ಷಿಸಿ,
ಫಾತುಕರ ಮನಕೆ

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

  • ಶೈಲಜಾ ಹಿರೇಮಠ, ಗಂಗಾವತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....