Homeರಂಜನೆಕ್ರೀಡೆಹ್ಯಾಟ್ರಿಕ್ ಗಳಿಸಿದ ಬೌಲರ್ ಅಕಿಲಾ ಧನಂಜಯ: ಮರು ಓವರ್‌ನಲ್ಲೆ 6 ಬಾಲ್‌ಗೆ 6 ಸಿಕ್ಸರ್‌ ಬಾರಿಸಿದ...

ಹ್ಯಾಟ್ರಿಕ್ ಗಳಿಸಿದ ಬೌಲರ್ ಅಕಿಲಾ ಧನಂಜಯ: ಮರು ಓವರ್‌ನಲ್ಲೆ 6 ಬಾಲ್‌ಗೆ 6 ಸಿಕ್ಸರ್‌ ಬಾರಿಸಿದ ಪೊಲಾರ್ಡ್!

ಕೇವಲ 10 ನಿಮಿಷಗಳ ಅಂತರದಲ್ಲಿ ಒಂದು ಹ್ಯಾಟ್ರಿಕ್ ಸಾಧನೆ ಬೌಲರ್ ತಲೆಗೇರಿದರೆ, ಅದೇ ಬೌಲರ್‌ನ ಮರು ಓವರಿನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ಓವರ್‌ನಲ್ಲಿ 6 ಸಿಕ್ಸರ್ ಎತ್ತಿ ಸಾಧನೆ ಮಾಡಿದ ಅಪರೂಪದ ಆಟ ದಾಖಲಾಗಿದೆ!

- Advertisement -
- Advertisement -

ಆಂಟಿಗುವಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಇಂಟರ್ನ್ಯಾಷನಲ್ (ಟಿ20ಐ) ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್ ಅಕಿಲಾ ಧನಂಜಯ ಅದ್ಭುತ ಹ್ಯಾಟ್ರಿಕ್ ಸಾಧನೆ ಮಾಡಿದರು. ಆದರೆ ಸ್ವಲ್ಪ ಸಮಯದಲ್ಲಿಯೇ ಅವರ ಅದೃಷ್ಟ ಉಲ್ಟಾ ಹೊಡೆಯಿತು! ಏಕೆಂದರೆ ಆತಿಥೇಯ ತಂಡದ ನಾಯಕ ಕೀರನ್ ಪೊಲಾರ್ಡ್ ಮುಂದಿನ ಅಕಿಲಾ ದನಂಜಯ ಓವರಿನಲ್ಲಿ ಆರು ಬಾಲ್‌ಗೆ ಆರು ಸಿಕ್ಸರ್‌ಗಳನ್ನು ಬಾರಿಸಿದರು!

ಕೇವಲ 10 ನಿಮಿಷಗಳ ಅಂತರದಲ್ಲಿ ಒಂದು ಹ್ಯಾಟ್ರಿಕ್ ಸಾಧನೆ ಬೌಲರ್ ತಲೆಗೇರಿದರೆ, ಅದೇ ಬೌಲರ್‌ನ ಮರು ಓವರಿನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ಓವರ್‌ನಲ್ಲಿ 6 ಸಿಕ್ಸರ್ ಎತ್ತಿ ಸಾಧನೆ ಮಾಡಿದ ಅಪರೂಪದ ಆಟ ದಾಖಲಾಗಿದೆ!

ಟಿ 20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೆಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪೊಲಾರ್ಡ್ ಪಾತ್ರರಾಗಿದ್ದಾರೆ.

ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಹರ್ಷಲ್ ಗಿಬ್ಸ್ ಮೊದಲು ಆರು ಬಾಲ್‌ಗೆ ಆರು ಸಿಕ್ಸರ್‌ ಸಿಡಿಸಿದ್ದರು. ಯುವರಾಜ್ ಸಿಂಗ್ 2007 ರ ಟಿ 20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್‌ರ ಒಂದು ಓವರಿನಲ್ಲಿ ಆರು ಸಲ ಸಿಕ್ಸ್‌ರ್ ಗಳಿಸಿದ್ದರು.

ವೆಸ್ಟ್ ಇಂಡೀಸ್ ತಂಡವು ಇಂದಿನ ಪಂದ್ಯದಲ್ಲಿ 3.1 ಓವರ್‌ಗಳಲ್ಲಿ 52/0 ರನ್‌ಗಳ ವೇಗದ ಆರಂಭ ಮಾಡಿತ್ತು. ಧನಂಜಯ ಅವರು ಎವಿನ್ ಲೂಯಿಸ್, ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್‌ರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮೂಲಕ, ವೆಸ್ಟ್ ಇಂಡೀಸ್‌ನ ಆವೇಗವನ್ನು ನಿಲ್ಲಿಸಿದ್ದರು.

ಅವರು ಆರನೇ ಓವರ್ ಬೌಲಿಂಗ್ ಮಾಡಲು ಹಿಂತಿರುಗುತ್ತಿದ್ದಂತೆ, ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ ಓವರ್‌ನ ಪ್ರತಿ ಚೆಂಡನ್ನು ಸಿಕ್ಸರ್‌ ಎತ್ತಿದರು.

ಓವರ್‌ನ ಮೊದಲ ಚೆಂಡು ಕೌ ಕಾರ್ನರ್‌ನಲ್ಲಿ ಕಣ್ಮರೆಯಾಯಿತು. ಎರಡನೆಯ ಸಿಕ್ಸರ್ ನೇರವಾಗಿ ಸೈಟ್ ಸ್ಕ್ರೀ ನ್‌ಗೆ ಅಪ್ಪಳಿಸಿತು. ಮೂರನೇ ಎಸೆತದಲ್ಲಿ ಲಾಂಗ್-ಆಫ್ ಮತ್ತು ನಾಲ್ಕನೆಯದಕ್ಕೆ ಡಿಪ್ ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್‌ ಬಾರಿಸಿದರು. ಐದನೇ ಎಸೆತದಲ್ಲಿ ಲಾಂಗ್-ಆನ್ ಮೇಲೆ ಮತ್ತು ಕೊನೆಯ ಎಸೆತದಲ್ಲಿ ಮತ್ತೆ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.

ಮುಂದಿನ ಓವರ್‌ನಲ್ಲಿ ಪೊಲಾರ್ಡ್ ಎಲ್‌ಬಿಡಬ್ಲೂ ಬಲೆಗೆ ಬಿದ್ದರು. ಆದರೆ ಅಷ್ಟರಲ್ಲಿ ಅವರು ಶ್ರೀಲಂಕಾಕ್ಕೆ ಅಪಾರ ಹಾನಿ ಮಾಡಿದ್ದರು. ಪಂದ್ಯದಲ್ಲಿ ವೆಸ್ಟ್ ಇಂಡೀಸ್ 132 ರನ್‌ಗಳ ಗುರಿಯನ್ನು ಆರು ಓವರ್ ಬಾಕಿ ಇರುವಾಗಲೇ ಮುಟ್ಟಿ ವಿಜಯಿಯಾಯಿತು.


ಇದನ್ನೂ ಓದಿ: ಮೊಹಮ್ಮದ್ ಸಿರಾಜ್: ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಛಾಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...