Homeಕರ್ನಾಟಕ’ಮೃತ’ನಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರೆ ಎದ್ದು ಕುಳಿತ ಯುವಕ!

’ಮೃತ’ನಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರೆ ಎದ್ದು ಕುಳಿತ ಯುವಕ!

ಬಾಗಲಕೋಟೆಯ ಮಹಾಲಿಂಗಾಪುರದಲ್ಲಿ ನಡೆದ ಘಟನೆ

- Advertisement -
- Advertisement -

ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ, ಶವಪರೀಕ್ಷೆ ಮೇಜಿನ ಮೇಲೆ ಕಣ್ ಕಣ್ ಬಿಡುತ್ತಾ ಎದ್ದು ಕುಳಿತ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ವೈದ್ಯರು ಶವಪರೀಕ್ಷೆಗೆಂದು ದೇಹವನ್ನು ಕತ್ತರಿಸುವ ಸ್ವಲ್ಪ ಮೊದಲು ’ಮೃತ’ ವ್ಯಕ್ತಿ ಸಜೀವನಾಗಿದ್ದ ಎಂದು ಆರೋಗ್ಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಬಾಗಲಕೋಟೆಯ ಮಹಾಲಿಂಗಾಪುರದ 27 ವರ್ಷದ ಯುವಕನನ್ನು ವಾರಾಂತ್ಯದಲ್ಲಿ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ವೈದ್ಯರು ಜೀವ ಹೋಗಿದೆ ಎಂದು ಘೋಷಿಸಿ ವೆಂಟಿಲೇಟರ್‌ನಿಂದ ಹೊರತೆಗೆದ್ದಾರೆ.

ನಂತರ ಅವರ ಕುಟುಂಬವು ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿತು, ಅಲ್ಲಿ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತು.

ಇದನ್ನೂ ಓದಿ: ಕುತಂತ್ರವನ್ನು ಮುಚ್ಚಿಹಾಕಲು ಕಟ್ಟುಕತೆ ಹರಿಯಬಿಟ್ಟ ಟೊಯೊಟಾ: ಕಾರ್ಮಿಕ ಸಂಘ ಆರೋಪ

ಶವಪರೀಕ್ಷೆ ಮೇಜಿನ ಮೇಲೆ ಮಲಗಿದ್ದರಿಂದ ದೇಹ ಚಲನೆಯನ್ನು ರೋಗಶಾಸ್ತ್ರಜ್ಞರು ನೋಡಿದ್ದಾರೆ ಎಂದು ಸಂಬಂಧಿಕರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರ್ಕಾರಿ ಆರೋಗ್ಯ ಅಧಿಕಾರಿಯೊಬ್ಬರು ಈ ಘಟನೆಯನ್ನು ದೃಢ ಪಡಿಸಿದ್ದಾರೆ ಮತ್ತು ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಎಎಫ್‌ಪಿಗೆ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯ ವೈದ್ಯರು ವೆಂಟಿಲೇಟರ್‌ನಿಂದ ತೆಗೆದುಹಾಕಿ ಯುವಕ ಮೃತಪಟ್ಟಿದ್ದಾನೆ ಎಂದು ತೀರ್ಮಾನಿಸಿದ್ದು “ಕೆಟ್ಟ , ಬೇಜವಾಬ್ದಾರಿಯ ನಿರ್ಣಯ” ಎಂದು ಅಧಿಕಾರಿ ಹೇಳಿದ್ದಾರೆ. ಕುಟುಂಬ ಇನ್ನೂ ಔಪಚಾರಿಕ ದೂರು ನೀಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೋಳಿ ಲೈಂಗಿಕ ಹಗರಣದ ಬಗ್ಗೆ CBI ತನಿಖೆ ಅಗತ್ಯ: ಬಾಲಚಂದರ್ ಜಾರಕಿಹೋಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...