Homeಕರ್ನಾಟಕಕುತಂತ್ರವನ್ನು ಮುಚ್ಚಿಹಾಕಲು ಕಟ್ಟುಕತೆ ಹರಿಯಬಿಟ್ಟ ಟೊಯೊಟಾ: ಕಾರ್ಮಿಕ ಸಂಘ ಆರೋಪ

ಕುತಂತ್ರವನ್ನು ಮುಚ್ಚಿಹಾಕಲು ಕಟ್ಟುಕತೆ ಹರಿಯಬಿಟ್ಟ ಟೊಯೊಟಾ: ಕಾರ್ಮಿಕ ಸಂಘ ಆರೋಪ

- Advertisement -
- Advertisement -

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ಮಂಡಳಿಯ ವಿರುದ್ದ ಅಲ್ಲಿನ ಕಾರ್ಮಿಕರು ಕಳೆದ ನಾಲ್ಕು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಅನಿಯಂತ್ರಿತ ಮತ್ತು ಏಕಪಕ್ಷೀಯವಾಗಿ ಕೆಲಸದ ಹೊರೆಯನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟಿದ್ದನ್ನೇ ನೆಪವಾಗಿಸಿ ಟೊಯೊಟಾ ಆಡಳಿತವು ಕಂಪೆನಿಯನ್ನು ಲಾಕೌಟ್ ಮಾಡಿತ್ತು. ಇದನ್ನು ವಿರೋಧಿಸಿ ಕಾರ್ಮಿರು ನಿರಂತರ ಹೋರಾಟ ನಡೆಸುತ್ತಲೆ ಬಂದಿದ್ದಾರೆ.

ಹೋರಾಟವನ್ನು ಹತ್ತಿಕ್ಕಲು ತುಂಬಾ ಪ್ರಯತ್ನಪಟ್ಟ ಆಡಳಿತ ಮಂಡಳಿಯು ಮುಚ್ಚಳಿಕೆ ಬರೆದು ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿತ್ತು. ಆದರೆ ಕಾರ್ಮಿಕರು ಇದಕ್ಕೆ ಜಗ್ಗದೆ ಇದ್ದಾಗ ಇದೀಗ ಮತ್ತೆ ಮುಚ್ಚಳಿಕೆ ಇಲ್ಲದೆ ಕರ್ತವ್ಯಕ್ಕೆ ಬರುವಂತೆ ನೋಟಿಸ್ ನೀಡಿದೆ. ಇದು ತಮ್ಮ ಹೋರಾಟಕ್ಕೆ ಸಿಕ್ಕ ನೈತಿಕ ವಿಜಯ ಎಂದು ಕಾರ್ಮಿಕ ಸಂಘವು ಹೇಳಿದೆ. ಆದರೆ ತನ್ನ ಇದನ್ನು ಒಪ್ಪಿಕೊಳ್ಳದೆ ಆಡಳಿತ ಮಂಡಳಿಯು ಸಂಘದ ವಿರುದ್ದ ಅಪಪ್ರಚಾರ ಮಾಡುತ್ತಿದೆ ಎಂದು ಕಾರ್ಮಿಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ನಿಮ್ಮ ಪರವಾಗಿ ನಾವಿದ್ದೇವೆ: ಟೊಯೊಟಾ ಕಾರ್ಮಿಕರಿಗೆ ಸಿದ್ದರಾಮಯ್ಯ ಭರವಸೆ; ವೀಡಿಯೊ

ಹೋರಾಟದುದ್ದಕ್ಕೂ ರಾಜ್ಯದ ಬಿಜೆಪಿ ಸರ್ಕಾರವು ಟೊಯೊಟಾ ಕಾರ್ಮಿಕರ ಯಾವುದೇ ಸಮಸ್ಯೆಯನ್ನು ಪರಿಹರಿಸುವಲ್ಲಿ ತನ್ನ ಅಸಹಾಯಕತೆಯನ್ನು ತೋರಿಸುತ್ತಲೆ ಬಂದಿದೆ. “1999 ರಿಂದ 18 ವರ್ಷಗಳವರೆಗೆ ತೆರಿಗೆ ಮುಂದೂಡಿಕೆ ಮತ್ತು 2010 ರಲ್ಲಿ ಎರಡನೇ ಹಂತದ ಉತ್ಪಾದನೆಗೆ ಹೆಚ್ಚಿನ ತೆರಿಗೆ ಮುಂದೂಡುವಿಕೆ ಪ್ರಯೋಜನಗಳು ಸೇರಿದಂತೆ ಕಂಪನಿಗೆ ಹಲವಾರು ಲಾಭಗಳನ್ನು ನೀಡಿದ ರಾಜ್ಯ ಸರ್ಕಾರ ವಿವಾದವನ್ನು ಪರಿಹರಿಸುವಲ್ಲಿ ಅಸಹಾಯಕರಂತೆ ವರ್ತಿಸುತ್ತಿದೆ ಮತ್ತು ರಾಜ್ಯ ಕಾರ್ಮಿಕ ಇಲಾಖೆ ಮೂಕ ಪ್ರೇಕ್ಷಕನಾಗಿದೆ” ಎಂದು ಟೊಯೊಟಾ ಕಾರ್ಮಿಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಟೊಯೊಟಾ ಆಡಳಿತ ಮಂಡಳಿಯು, ಕಾರ್ಮಿಕ ಸಂಘಟನೆಯ ನಾಯಕರು ಹೆಚ್ಚುವರಿ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿ ‘ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಲು ಮುಚ್ಚಳಿಕೆ ಬರೆದಿದ್ದು, ಆದ್ದರಿಂದ ಕಾರ್ಮಿಕರು ಯಾವುದೆ ವೈಯಕ್ತಿಕ ಮುಚ್ಚಳಿಕೆ ಪತ್ರ ಬರೆಯದೆ ಕರ್ತವ್ಯಕ್ಕೆ ಹಾಜರಾಗಿ’ ಎಂದು 01.03.2021 ರಂದು ನೋಟಿಸ್ ನೀಡಿದೆ.

ಆದರೆ ಇದನ್ನು ಕಾರ್ಮಿಕ ಸಂಘಟನೆಗಳು ನಿರಾಕರಿಸಿದ್ದು, ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿಯು ಯಾವುದೆ ಮುಚ್ಚಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಟೊಯೊಟಾ ಆಡಳಿತ ಮಂಡಳಿಯು ತನ್ನ ಕುತಂತ್ರವನ್ನು ಮುಚ್ಚಿಹಾಕಲು ಮಾಡಿರುವ ಕಟ್ಟುಕತೆ ಕತೆ ಎಂದು ಕಾರ್ಮಿಕ ಸಂಘ ಹೇಳಿದೆ.

ಇದನ್ನೂ ಓದಿ: ವಿದೇಶಿ ಕಂಪನಿಗಳು ಈ ನೆಲದ ಕಾನೂನನ್ನು ಗೌರವಿಸಲಿ: ಟೊಯೊಟಾ ಕಾರ್ಮಿಕರ ಹೊರಾಟದಲ್ಲಿ ಸಿದ್ದರಾಮಯ್ಯ

ಯಾವುದೆ ಮುಚ್ಚಳಿಕೆ ನೀಡದೆ ಕರ್ತವ್ಯಕ್ಕೆ ಹಾಜರಾಗಬಹುದು ಎಂದು ಕಂಪೆನಿಯು ನೋಟಿಸ್ ನೀಡಿದ್ದರಿಂದ ಕಾರ್ಮಿಕ ಸಂಘವು ತಮ್ಮ ಸದಸ್ಯರಿಗೆ ಕರ್ತವ್ಯಕ್ಕೆ ಹಾಜರಾಗಲು ಸಲಹೆ ನೀಡಿದೆ. ಅದಾಗ್ಯೂ ಕಾರ್ಮಿಕ ಸಂಘದ ಹೋರಾಟವು ಕಂಪೆನಿಯ ಒಳಗೆ ಮತ್ತು ಹೊರಗೆ ಮುಂದುವರೆಯುತ್ತದೆ ಎಂದು ಸಂಘವು ಹೇಳಿದೆ. ಜೊತೆಗೆ ಹಲವು ಬೇಡಿಕೆಗಳನ್ನು ಕೂಡಾ ಮುಂದಿಟ್ಟಿದೆ.

  • 10.11.2020 ರಿಂದ 01.03 2021 ರವರೆಗಿನ ಲಾಕ್‌ಔಟ್‌‌ ಅವಧಿಯ ಪೂರ್ಣ ವೇತನ ನೀಡಬೇಕು.
  • ಕಾರ್ಮಿಕ ಸಂಘಟದ ಜೊತೆ ಕೆಲಸದ ಹೊರೆ ಬಗ್ಗೆ ಮಾತುಕತೆ ಮಾಡಿ ಒಪ್ಪಂದ ಮಾಡಬೇಕು.
  • ಹೋರಾಟದ ಸಮಯದಲ್ಲಿ ಮಾಡಲಾಗಿರುವ ವಜಾ, ಅಮಾನತು ಆದೇಶ, ಚಾರ್ಜ್‌ಶೀಟ್‌ಗಳನ್ನು ಹಿಂತೆಗೆದುಕೊಳ್ಳಬೇಕು.
  • ವಾರದಲ್ಲಿ 5 ದಿನಗಳ ಕೆಲಸ ಮರುಸ್ಥಾಪನೆ.
  • ಉತ್ಪಾದನೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಬಳಸುವುದು ನಿಲ್ಲಿಸಬೇಕು.

ಇದನ್ನೂ ಓದಿ: ಟೊಯೊಟಾ ಆಡಳಿತ ಮಂಡಳಿಯ ವಿರುದ್ದ‌‌ ಕಾರ್ಮಿಕರ ಬೃಹತ್‌ ಪಾದಯಾತ್ರೆ

ಈ ಹಿಂದೆಯೆ ಕಾರ್ಮಿಕರು ಮತ್ತು ಕಂಪೆನಿಯ ನಡುವಿನ ಬಿಕ್ಕಟ್ಟು ಶಮನಕ್ಕಾಗಿ ಸರ್ಕಾರ ಲಾಕೌಟನ್ನು ಮತ್ತು ಮುಷ್ಕರವನ್ನು ನಿಷೇಧಿಸಿತ್ತು. ಈ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ತಯಾರಾಗಿದ್ದರೂ, ಕಂಪೆನಿ ಮಾತ್ರ ಲಾಕೌಟ್ ತೆರವುಗೊಳಿಸದೆ ಸರ್ಕಾರಿ ಆದೇಶವನ್ನು ಬಹಿರಂಗವಾಗಿ ತಿರಸ್ಕರಿಸಿತ್ತು. ಇದರ ವಿರುದ್ದ ಆಕ್ರೋಶಗೊಂಡ ಕಾರ್ಮಿಕರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದರು.

ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಕಾರ್ಮಿಕರಿಗೆ ರಾಜಕೀಯ ನಾಯಕರು ಬೆಂಬಲ ನೀಡುತ್ತಿದ್ದಂತೆ ಲಾಕೌಟನ್ನು ತೆರವುಗೊಳಿಸಿ ಮುಚ್ಚಳಿಕೆ ಬರೆದು ಕೆಲಸಕ್ಕೆ ಹಾಜರಾಗುವಂತೆ ಆಡಳಿತ ಮಂಡಳಿ ಷರತ್ತನ್ನು ವಿಧಿಸಿತ್ತು. ಆದರೆ ಕಾರ್ಮಿಕರು ಮಾತ್ರ ಮುಚ್ಚಳಿಕೆ ಬರೆಯುವ ಯಾವುದೆ ಷರತ್ತಿಗೆ ಒಪ್ಪಿಕೊಳ್ಳದೆ ತಮ್ಮ ನ್ಯಾಯಯುತ ಹೋರಾಟವನ್ನು ಮುಂದುವರೆಸಿದರು.

ಈ ನಡುವೆ ಟೊಯೊಟಾ ಆಡಳಿತ ಮಂಡಳಿಯು ಸುಮಾರು 100 ಕಾರ್ಮಿಕರನ್ನು ವಜಾಗೊಳಿಸುವುದು, ಅಮಾನತುಗೊಳಿಸುವುದು ಸೇರಿಂದತೆ ಕಾರ್ಮಿಕರ ವಿರುದ್ದ ಚಾರ್ಜ್‌ಶೀಟ್‌ಗಳು, ಮೆಮೋ ಕಳುಹಿಸುವುದನ್ನು ಮಾಡುತ್ತಲೆ ಬಂದಿತ್ತು. ಕಾರ್ಮಿಕರಿಗೆ ಬಲವಂತವಾಗಿ ವಿ.ಎಸ್.ಎಸ್‌. ಪಡೆಯಲು ಹಾಗೂ ಕಂಪೆನಿಯ ಕೆಲಸವನ್ನು ಬಿಡಲು ಒತ್ತಾಯಿಸುತ್ತಲೆ ಬಂದಿದೆ.

ಇದನ್ನೂ ಓದಿ: ಹೋರಾಟಕ್ಕೆ ಮಣಿಯುತ್ತಿರುವ ಟೊಯೊಟಾ: ಕಾನೂನುಬಾಹಿರ ಷರತ್ತಿಗೆ ಬಗ್ಗುವುದಿಲ್ಲವೆಂದ ಕಾರ್ಮಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...