Homeಮುಖಪುಟಮರ್ಯಾದೆಗೇಡು ಹತ್ಯೆ: ಸಹೋದರಿಯ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದುಕೊಂಡ ಬಾಲಕ!

ಮರ್ಯಾದೆಗೇಡು ಹತ್ಯೆ: ಸಹೋದರಿಯ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದುಕೊಂಡ ಬಾಲಕ!

- Advertisement -
- Advertisement -

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿ ಭಾನುವಾರ ಭೀಕರ ಮರ್ಯಾದೆಗೇಡು ಹತ್ಯೆಯ ಘಟನೆ ನಡೆದಿದೆ. ಪ್ರಕರಣದಲ್ಲಿ ಹದಿಹರೆಯದ ಬಾಲಕನೊಬ್ಬ ತನ್ನ 19 ವರ್ಷದ ಸಹೋದರಿಯನ್ನು ತಾಯಿಯ ಸಹಾಯದಿಂದ ಶಿರಚ್ಛೇದನ ಮಾಡಿದ್ದಾನೆ. ಶಿರಚ್ಛೇದನ ಮಾಡಿದ್ದಲ್ಲದೆ, ನೆರೆಹೊರೆಯವರ ಮುಂದೆ ಆಕೆಯ ತಲೆಯನ್ನು ಪ್ರದರ್ಶಿಸಿ, ತುಂಡರಿಸಿದ ತಲೆಯೊಂದಿಗೆ ಬಾಲಕ ಮತ್ತು ಆತನ ತಾಯಿ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಯುವತಿಯ ಪತಿ ಮನೆಯಲ್ಲಿದ್ದ ವೇಳೆ ಆಕೆಯ ತಾಯಿ ಮತ್ತು ಸಹೋದರ ಸೇರಿಕೊಂಡು ಈ ಕೊಲೆಯನ್ನು ಮಾಡಿದ್ದಾರೆ ಎಂದು ಎನ್‌‌ಡಿಟಿವಿ ವರದಿ ಮಾಡಿದೆ. ಬಾಲಕನೂ ತನ್ನ ಭಾವನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದನಾದರೂ, ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

ಮೃತ ಯುವತಿಯು ಗರ್ಭಿಣಿ ಎಂದು ವರದಿಯಾಗಿದ್ದು, ತನ್ನ ಸಹೋದರಿಯನ್ನು ಕೊಂದ ನಂತರ ಬಾಲಕನು ತುಂಡರಿಸಿದ ತಲೆಯನ್ನು ವರಾಂಡಾಕ್ಕೆ ತೆಗೆದುಕೊಂಡು ಶರಣಾಗುವ ಮೊದಲು ಎಲ್ಲರಿಗೂ ಕಾಣುವಂತೆ ಗಾಳಿಯಲ್ಲಿ ಬೀಸಿದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಹತ್ಯೆಗೀಡಾದ ಯುವತಿಯನ್ನು ಕೀರ್ತಿ ಥೋರ್ ಎಂದು ಗುರುತಿಸಲಾಗಿದೆ. ಅವರು ಜೂನ್‌ನಲ್ಲಿ ಮನೆಬಿಟ್ಟು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ತಾಯಿ ಕಳೆದ ವಾರ ಆಕೆಯನ್ನು ಸಂಪರ್ಕಿಸಿ ಭೇಟಿಯಾಗುವುದಾಗಿ ಕೇಳಿಕೊಂಡಿದ್ದರು. ಹೀಗಾಗಿ ಭಾನುವಾರ ತನ್ನ ಮಗನೊಂದಿಗೆ ಮಗಳ ಮನೆಗೆ ತೆರಳಿದ್ದರು.

ಭಾನುವಾರದಂದು ಅವರು ಮಗಳ ಮನೆಗೆ ಬಂದಿದ್ದಾಗ ಪತಿ ಬೇರೆ ಕೋಣೆಯಲ್ಲಿದ್ದರು. ಅಂದು ಅವರು ಅನಾರೋಗ್ಯದಿಂದಾಗಿ ಅಸ್ವಸ್ಥರಾಗಿದ್ದರು. ತಾಯಿ ಮತ್ತು ಸಹೋದರನಿಗೆ ಟೀ ಮಾಡುತ್ತಿದ್ದಾಗ ಹಿಂಬದಿಯಿಂದ ಕೀರ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯ ತಾಯಿ ಯುವತಿಯ ಕಾಲನ್ನು ಹಿಡಿದುಕೊಂಡಿದ್ದು, ಸಹೋದರನೂ ತನ್ನೊಂದಿಗೆ ತಂದಿದ್ದ ಕುಡುಗೋಲಿನಿಂದ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಅಕ್ಕಪಕ್ಕದ ಮನೆಯವರು ನೋಡಲೆಂದು ತಲೆಯನ್ನು ಹೊರಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ಆರೋಪಿಗಳು ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಇದೀಗ ಬಂಧನಕ್ಕೆ ಒಳಗಾಗಿದ್ದಾರೆ.

ರಾಜ್ಯದಲ್ಲೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಇಂತಹ ಹತ್ತೆನ್ನರಡು ಘಟನೆಗಳು ನಡೆದಿದ್ದು, ಜೂನ್‌ ತಿಂಗಳೊಂದರಲ್ಲಿಯೇ ನಾಲ್ಕು ಘಟನೆಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂತಹ ಘಟನೆಗಳು ಹೆಚ್ಚುತ್ತಿದ್ದರೂ ಸರ್ಕಾರಗಳು ಇಂತಹ ಕ್ರೌರ್ಯಗಳನ್ನು ತಡೆಗಟ್ಟುವತ್ತ ಗಮನ ಹರಿಸದೇ ಇರುವುದು ಬೇಸರದ ಸಂಗತಿ.

ಈ ದೇಶದ ಕ್ರೂರ, ಕರಾಳ ಜಾತಿವ್ಯವಸ್ಥೆಯ ಬಲೆಯಲ್ಲಿ ಸಿಕ್ಕಿಕೊಂಡ ಸಾವಿರಾರು ತಂದೆ ತಾಯಿಯರು ತಮ್ಮ ಮಗಳು ಅನ್ಯಜಾತೀಯ ಯುವಕನನ್ನು ಪ್ರೀತಿಸಿದರೆಂಬ ಏಕೈಕ ಕಾರಣಕ್ಕೆ ಮಗಳನ್ನೇ ಅಮಾನವೀಯವಾಗಿ ಕೊಂದುಹಾಕಿ ಜೈಲು ಸೇರಿದ್ದಾರೆ. ಮರ್ಯಾದೆ ಉಳಿಸಿಕೊಳ್ಳಲು ಕೊಲೆ ಎಂಬ ಅಹಂಕಾರ, ಗರ್ವಕ್ಕೆ ತಮ್ಮ ಮಗಳ ಜೀವನದೊಂದಿಗೆ ತಮ್ಮ ಜೀವನವನ್ನು ನರಕ ಮಾಡಿಕೊಂಡಿದ್ದಾರೆ. ಇದುವರೆಗೂ ತನ್ನ ಮಗಳನ್ನು ಕೊಂದ ಒಬ್ಬ ಅಪ್ಪ-ಅಮ್ಮನು ನೆಮ್ಮದಿಯಾಗಿಲ್ಲ ಎಂಬುದು ಸತ್ಯ. ಹಾಗಾಗಿ ಇದರ ವಿರುದ್ಧ ಜಾಗೃತಿ ಅತಿ ಹೆಚ್ಚು ಅಗತ್ಯವಾಗಿದೆ.

ಇದನ್ನೂ ಓದಿ:ಕೊಲೆಗಡುಕ ಜಾತಿ ಪ್ರತಿಷ್ಠೆಗೆ ತಂದೆಯ ಜೊತೆಗೆ ಸಮಾಜವೂ ಕಾರಣವಾಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...