Homeರಾಜಕೀಯಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

- Advertisement -
- Advertisement -

ಬ್ರೆಜಿಲ್ ದೇಶವೆಂದರೆ ನಮ್ಮ ಜನಪ್ರಿಯ ಕಲ್ಪನೆಯಲ್ಲಿ ಫುಟ್‌ಬಾಲ್, ಪೆಲೆ, ಅಮೆಜಾನ್, ಸುಂದರ ಕಡಲತೀರದ ದೃಶ್ಯಗಳು ಹಾದುಹೋಗುತ್ತವೆ. ವಾಸ್ತವದಲ್ಲಿ ಬ್ರೆಜಿಲ್ ಒಂದು ಬಹುಜನಾಂಗೀಯ ಬಹುತ್ವವುಳ್ಳ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯುಳ್ಳ ದೇಶ. ಇದರ ಇತಿಹಾಸ ಮತ್ತು ವರ್ತಮಾನ ಎಲ್ಲಾ ಜಾಗತಿಕ ದಕ್ಷಿಣದ ದೇಶಗಳಂತೆ ವಸಾಹತುಶಾಹಿ ಆಳ್ವಿಕೆ, ಗುಲಾಮರ ವ್ಯಾಪಾರ, ಪ್ರಜಾಪ್ರಭುತ್ವದ ಸಂಕ್ರಮಣ, ಉಳ್ಳವರ ಕೊಳ್ಳೆ, ನಿಲ್ಲದೆ ಮುಂದುವರೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಆರ್ಥಿಕ ಅಸಮಾನತೆ ಮತ್ತು ಮುಂದುವರೆಯುತ್ತಿರುವ ನಿರಂತರ ವರ್ಗ ಸಂಘರ್ಷದಿಂದ ಕೂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರದ ದೃಷ್ಟಿಯಿಂದ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಉಷ್ಣವಲಯದ ಅಮಜಾನ್ ಮಳೆಗಾಡಿನ ಬಹುತೇಕ ಭಾಗ ಬ್ರೆಜಿಲ್‌ನಲ್ಲಿದೆ. ಅನೇಕಾನೇಕ ಪ್ರಾಣಿಪಕ್ಷಿಗಳು ಜೊತೆಗೆ 400 ರಿಂದ 500 ಬುಡಕಟ್ಟು ಜನಾಂಗಗಳು ಈ ಕಾಡುಗಳಲ್ಲಿ ವಾಸಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗಗಳು ಇನ್ನೂ ಆಧುನಿಕ ಮನುಷ್ಯನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಪ್ರಪಂಚದ ಬಹುತೇಕ ಜೀವಿಗಳು ಮತ್ತು ನಾವು ಉಸಿರಾಡುವ 20% ಆಮ್ಲಜನಕ ಅಮೆಜಾನ್ ದಟ್ಟಕಾಡುಗಳಿಂದ ಉತ್ಪಾದನೆಯಾಗುತ್ತದೆ. ಇದರಿಂದ ಕೆಲವು ಪರಿಸವಾದಿಗಳು ಅಮೆಜಾನನ್ನು ನಮ್ಮ ಗ್ರಹದ ಶ್ವಾಸಕೋಶಗಳು ಅಥವಾ ಕ್ಲೋರೋಫಿಲ್ ಎಂದು ಕರೆಯುತ್ತಾರೆ. ಅತ್ಯಂತ ಧ್ರುವೀಕರಣಗೊಂಡ ಆಕ್ಟೋಬರ್ 28ರಂದು ನಡೆದ ಬ್ರೆಜಿಲ್ ಚುನಾವಣೆಯ ಫಲಿತಾಂಶ ಪ್ರಪಂಚದ ಉಸಿರಾಟದ ಕ್ರಿಯೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಸುಮಾರು 21 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಜನೆ ಮಾಡುವ ಮಾಜಿ ಮಿಲಿಟರೀ ಅಧಿಕಾರಿ ಜೈರ್ ಬೊಲ್ಸೊನಾರೊ 55.6% ವೋಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಅಲ್ಲದೆ, ಬ್ರೆಜಿಲ್ ಸೇರಿ ಒಂದೆರಡು ದಶಕಗಳಿಂದ ದಕ್ಷಿಣ ಅಮೆರಿಕ ದೇಶಗಳಲ್ಲಿ ಅಧಿಕಾರದಲ್ಲಿದ್ದ ಎಡಪಂಥೀಯ ಸರ್ಕಾರಗಳಿಗೆ ನೇರ ಬೆದರಿಕೆಯನ್ನು ಒಡ್ಡಿದ್ದಾನೆ. ಅದಲ್ಲದೆ ಬ್ರೆಜಿಲ್‌ನ ಕರಾಳ ಇತಿಹಾಸದ ಮಿಲಿಟರೀ ಆಡಳಿತವನ್ನು ಮತ್ತೆ ಮತ್ತೆ ವೈಭವೀಕರಿಸುತ್ತಾ ತನ್ನ ಧರ್ಮಾಂಧ, ಮಹಿಳಾವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ, ಪರಿಸರ ವಿರೋಧಿ ಮತ್ತು ಮಾನವ ವಿರೋಧಿ ಹೇಳಿಕೆಗಳನ್ನು ಹರಿಬಿಡುತ್ತಾ ಜನವರಿ 1 ರಂದು ಅಧಿಕಾರಕ್ಕೇರುತ್ತಿದ್ದಾನೆ. ಇದು ಬ್ರೆಜಿಲ್‌ನ ರಾಜಕೀಯ ಪ್ರಜಾತಂತ್ರವು ಸೈನ್ಯೀಕರಣಗೊಳ್ಳುತ್ತಿರುವ ಮುನ್ಸೂಚನೆ ಎಂದು ಸ್ವಾತಂತ್ರ‍್ಯ ಮತ್ತು ಸಮಾನತೆ ಬಯಸುವ ಎಲ್ಲಾ ಪ್ರಜ್ಞಾವಂತ ಜನತೆ ತಿಳಿದುಕೊಳ್ಳಬೇಕಿದೆ.
ಚುನಾವಣೆಗೂ ಮುಂಚೆಯೇ ಇದನ್ನು ‘ಪಾಶ್ಚಾತ್ಯ ಮತ್ತು ಜಾಗತಿಕ ದಕ್ಷಿಣದ ಭವಿಷ್ಯವನ್ನು ನಿರ್ಧರಿಸುವ ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ’ ಹಾಗೂ ‘21ನೇ ಶತಮಾನದ ಪ್ರಜಾತಂತ್ರ ಮತ್ತು ನಾಗರಿಕತೆಯ ವಿರುದ್ದ ನವಸರ್ವಾಧಿಕಾರ/ ಅನಾಗರಿಕತೆಯ ಸಂಘರ್ಷ’ ಎಂದು ವಿಶ್ಲೇಷಿಸಲಾಗಿತ್ತು. ಪ್ರಪಂಚದಾದ್ಯಂತ ಬಲಪಂಥೀಯ ರಾಜಕೀಯ ಬುಗ್ಗೆಗಳೇಳುತ್ತಿರುವ ಸಮಯದಲ್ಲಿ ಈ ಸರ್ವಾಧಿಕಾರದ ಗೆಲುವನ್ನು ವಿಶ್ಲೇಷಿಸಲು ಹೋದರೆ ಅದರಲ್ಲಿ ಅಮೆರಿಕಾದ ಸರ್ವಾಧಿಕಾರದ ಅತ್ಯಾಧುನಿಕ, ಮನೋವೈಜ್ಞಾನಿಕ ಯುದ್ದತಂತ್ರಗಳು ನೋಡ ಸಿಗುತ್ತವೆ. ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಎನ್.ಎಸ್.ಎ ನ ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡನ್ 2013ರಲ್ಲೇ 2000 ದಿಂದ ಬ್ರೆಜಿಲ್ ದೇಶ ಅತ್ಯಂತ ಬೇಹುಗಾರಿಕೆಗೆ ಒಳಪಟ್ಟಿರುವ ದೇಶ ಎಂದು ಬಹಿರಂಗಪಡಿಸಿದ್ದರು. ಅದಕ್ಕೆ ಕೆಲವು ಕಾರಣಗಳು ಇವೆ. ತನ್ನ ಸಾಮ್ರಾಜ್ಯಶಾಹಿ ಧೋರಣೆಯಿಂದ ದಕ್ಷಿಣ ಅಮೆರಿಕಾದ ದೇಶಗಳ ಸರ್ಕಾರಗಳನ್ನು ಕ್ಷಿಪ್ರ ಕ್ರಾಂತಿ, ರಾಜಕೀಯ ಹತ್ಯೆ, ನಾಯಕತ್ವ ಬದಲಾವಣೆ, ರಾಜಕೀಯ ಹಸ್ತಕ್ಷೇಪಗಳಿಂದ ತನ್ನಿಚ್ಛೆಗೆ ತಕ್ಕಂತೆ ಬದಲಿಸುತ್ತಾ ಕೆಲವೊಮ್ಮೆ ನೇರ ಮಿಲಿಟರೀ ಆಡಳಿತವನ್ನು ಅಮೆರಿಕವು ಹೇರುತ್ತಾ ಬಂದಿತ್ತು. 1964ರಲ್ಲಿ ಮಧ್ಯ ಎಡಕ್ಕೆ ಸೇರುವ ಸುಧಾರಣಾವಾದಿ ಬ್ರೆಜಿಲ್ ಲೇಬರ್ ಪಕ್ಷದ ಮಾರ್ಕುಎಸ್ ಗೌಲಾರ್ಟ್.ರನ್ನು ಕ್ಷಿಪ್ರ ಕ್ರಾಂತಿ ಮೂಲಕ ಕಿತ್ತು ಹಾಕಿ 1985ರ ವರೆಗೂ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸಿದ್ದರು. ಇದರ ಹಿಂದೆ ಅಮೆರಿಕಾದ ಬೆಂಬಲಿತ ಸ್ಥಳೀಯ ಕೃಷಿ ವ್ಯವಹಾರದ ಭೂಮಾಲೀಕರು, ಬಹುರಾಷ್ಟಿçÃಯ ಕಂಪನಿಗಳು, ಇವ್ಯಾಂಜೆಲಿಕಲ್ ಕ್ರೈಸ್ತ ಲಾಬೀ ಇದ್ದದ್ಡೇ ಅಲ್ಲದೆ, ಅದರ ಪ್ರಭಾವ ಸಮಾಜದಲ್ಲಿ ಬೆಳೆಯುತ್ತಾ ಹೋಯಿತು. ಈ ನಡೆ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಮುಂದೆ ಆದ ರಾಜಕೀಯ ಹತ್ಯೆಗಳು, ಎಡಪಂಥೀಯ ಸರ್ಕಾರಗಳ ವಿರುದ್ದ ಮಿಲಿಟರೀ ಕ್ಷಿಪ್ರ ಕ್ರಾಂತಿ, ನಾಯಕತ್ವ ಬದಲಾವಣೆಗಳಿಗೆ ಆಳುವ ವರ್ಗದ ನೀಲಿನಕ್ಷೆಯಾಯಿತು. ತಮ್ಮ ವಿರುದ್ದವಿದ್ದ ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಕಾರ್ಮಿಕ ಸಂಘಟನೆಗಳ ಮುಖಂಡರ ಅಪಹರಣಗಳು, ಚಿತ್ರಹಿಂಸೆ, ಜೈಲುವಾಸ ಮತ್ತು ಕೊಲೆಗಳು ನಡೆದವು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಇದರ ವಿರುದ್ಧ ಪ್ರತಿರೋಧದ ಅಲೆಯೆದ್ದು(ಗುಲಾಬಿ ಅಲೆ) ಬದಲಾವಣೆಯ ಗಾಳಿ ಬೀಸತೊಡಗಿತು. ದಕ್ಷಿಣ ಅಮೆರಿಕಾದಲ್ಲಿ ಒಂದರ ಮೇಲೆ ಒಂದು ದೇಶ ಪ್ರಗತಿಪರ, ಎಡಪಂಥೀಯ ಸರ್ಕಾರಗಳ ರಚನೆಯತ್ತ ಮುಖ ಮಾಡಿತ್ತು. ಜನರನ್ನು ಸಂಘಟಿಸಿ, ಸರ್ವಾಧಿಕಾರದ ಅನ್ಯಾಯಗಳ ವಿರುದ್ಧ ದ್ವನಿಯೆತ್ತಿ ಚಿತ್ರಹಿಂಸೆಗೆ ಒಳಪಟ್ಟಿದ್ದ ಕಾರ್ಮಿಕ ಪಕ್ಷದ ಸಹ ಸಂಸ್ಥಾಪಕ ಲೂಇಸ್ ಇನಾಸಿಯೋ ಲೂಲಾ ದ ಸಿಲ್ವ 2003ರಲ್ಲಿ ಅಧಿಕಾರ ಹಿಡಿದಿದ್ದರು. ಬ್ರೆಜಿಲ್‌ನಲ್ಲಿ ಜನಪ್ರಿಯವಾಗಿ “ಲೂಲಾ” ಎಂದು ಪ್ರಸಿದ್ದಿಯಾಗಿದ್ದ ಅವರು ತಮ್ಮ 10 ವರ್ಷದ ಅವಧಿಯಲ್ಲಿ ನಾನಾರೀತಿಯ ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದರು. 3 ಕೋಟಿಗೂ ಹೆಚ್ಚು ಬ್ರೆಜಿಲ್ ಜನತೆಯನ್ನು ಬಡತನದಿಂದ ಮೇಲೆತ್ತಿದರು. ತಮ್ಮ ವಿಶೇಷ ಯೋಜನೆಗಳಾದ “ಬೊಳ್ಸಾ ಕುಟುಂಬ” ಪಿಂಚಣಿ ವ್ಯವಸ್ಥೆ ಮತ್ತು `ಫೊಮೆ ಝೀರೊ’ (ಶೂನ್ಯ ಹಸಿವು) ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿತ್ತು.
ಇದು ಬ್ರೆಜಿಲ್‌ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸರಣಿ ಬರಹಗಳ ಎರಡನೇ ಭಾಗ.. ಮುಂದುವರೆಯುವುದು..

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...