- Advertisement -
- Advertisement -
ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ದೆಹಲಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸಂಸದರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇವರ ಸಾವಿನ ಸುದ್ದಿ ಹಿನ್ನೆಲೆಯಲ್ಲಿ ಬಿಜೆಪಿ ಇಂದು ನಡೆಯಬೇಕಿರುವ ಸಂಸದೀಯ ಪಕ್ಷದ ಸಭೆಯನ್ನು ರದ್ದುಗೊಳಿಸಿದೆ.
ಜೂನ್ 10, 1958 ರಂದು ಮಂಡಿ ಜಿಲ್ಲೆಯ ಜಲ್ಪೆಹರ್ ಗ್ರಾಮದಲ್ಲಿ ಜನಿಸಿದ ಶರ್ಮಾ ಎರಡು ಬಾರಿ ಸಂಸದರಾಗಿದ್ದರು.
2014 ಮತ್ತು 2019 ರಲ್ಲಿ ಮಂಡಿ ಸಂಸದೀಯ ಕ್ಷೇತ್ರದಿಂದ ಕ್ರಮವಾಗಿ 16 ಮತ್ತು 17 ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ವಿಶ್ವದ 30 ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ: ಸ್ವಿಸ್ ಸಂಸ್ಥೆ ವರದಿ
ಇದನ್ನೂ ಓದಿ: 4 ವರ್ಷದ ಬಾಲಕಿಯ ಅತ್ಯಾಚಾರ ಮಾಡಿದ್ದ ಆರೋಪಿಗೆ 55 ದಿನದಲ್ಲಿ ಜೀವಾವಧಿ ಶಿಕ್ಷೆ!


