Homeಅಂತರಾಷ್ಟ್ರೀಯಲಂಚ ಪ್ರಕರಣ : ಅದಾನಿಗೆ ಸಮನ್ಸ್ ತಲುಪಿಸಲು ಎರಡು ಬಾರಿ ನಿರಾಕರಿಸಿದ ಕೇಂದ್ರ

ಲಂಚ ಪ್ರಕರಣ : ಅದಾನಿಗೆ ಸಮನ್ಸ್ ತಲುಪಿಸಲು ಎರಡು ಬಾರಿ ನಿರಾಕರಿಸಿದ ಕೇಂದ್ರ

- Advertisement -
- Advertisement -

ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ ಕಾನೂನು ಸಮನ್ಸ್ ಕಳುಹಿಸಿತ್ತು. ಆದರೆ, ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಸಮನ್ಸ್‌ಗಳನ್ನು ಅಧಿಕೃತವಾಗಿ ಅದಾನಿ ಅವರಿಗೆ ತಲುಪಿಸಲು ಎರಡು ಬಾರಿ ನಿರಾಕರಿಸಿದೆ ಎಂದು ವರದಿಯಾಗಿದೆ.

ಸಮನ್ಸ್‌ಗಳಲ್ಲಿ ತಾಂತ್ರಿಕ ದೋಷಗಳಿದ್ದವು. ಅಂದರೆ, ಅದರ ಮೇಲೆ ಅಗತ್ಯವಾದ ಅಧಿಕೃತ ಸೀಲ್ ಮತ್ತು ಇಂಕ್ ಸಹಿ ಮುಂತಾದವು ಸರಿಯಾಗಿ ಇರಲಿಲ್ಲ ಎಂದು ಸರ್ಕಾರ ಜಾರಿಕೊಂಡಿದೆ ಎಂದು ವರದಿ ಹೇಳಿದೆ.

ವರದಿಗಳ ಪ್ರಕಾರ, ಕಳೆದ ವರ್ಷ (2025ರಲ್ಲಿ) ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಎಸ್‌ಇಸಿ ಕಳುಹಿಸಿದ ಕವರ್ ಲೆಟರ್‌ನಲ್ಲಿ ಇಂಕ್ ಸಹಿ, ಅಗತ್ಯ ಫಾರ್ಮ್‌ಗಳ ಮೇಲೆ ಅಧಿಕೃತ ಸೀಲ್ ಇಲ್ಲದಿರುವುದನ್ನು ಮತ್ತು ಸಮನ್ಸ್ ತಲುಪಿಸುವ ವಿಧಾನಕ್ಕೆ ಸಂಬಂಧಿಸಿದ ಪ್ರಕ್ರಿಯಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎರಡು ಬಾರಿ ಸಮನ್ಸ್‌ಗಳನ್ನು ಅಧಿಕೃತವಾಗಿ ಅದಾನಿಗೆ ನೀಡಲು ನಿರಾಕರಿಸಿದೆ.

ಎರಡು ಭಾರತ ಸರ್ಕಾರ ಸಮನ್ಸ್ ತಲುಪಿಸಲು ನಿರಾಕರಿಸಿದ ಕಾರಣ ಎಸ್‌ಇಸಿಗೆ ಹೇಗ್ ಕನ್ವೆನ್ಷನ್ ಮೂಲಕ ಸಮನ್ಸ್ ತಲುಪಿಸುವುದು ಕಷ್ಟವಾಗಿದೆ. ಇದರಿಂದಾಗಿ ಅದು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ಫೆಡರಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಾಮಾನ್ಯ ಪ್ರಕ್ರಿಯೆಯನ್ನು ಬಿಟ್ಟು ಬೇರೆ ಮಾರ್ಗದ ಮೂಲಕ (ಇ-ಮೇಲ್ ಮೂಲಕ) ಸಮನ್ಸ್ ತಲುಪಿಸಲು ಅನುಮತಿ ಕೇಳಿದೆ.

ಹೇಗ್ ಕನ್ವೆನ್ಷನ್‌ನಲ್ಲಿ ಸೀಲ್ ಮತ್ತು ಅಥವಾ ಇಂಕ್ ಸಹಿ ಕಡ್ಡಾಯವಲ್ಲ ಎಂದು ಎಸ್‌ಇಸಿ ವಾದಿಸಿದರೂ, 2025ರ ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಸಮನ್ಸ್ ತಲುಪಿಸಲು ನಿರಾಕರಿಸಿದೆ.

ಡಿಸೆಂಬರ್‌ನಲ್ಲಿ ತಿರಸ್ಕರಿಸುವಾಗ ಕೇಂದ್ರ ಸಚಿವಾಲಯ ಅಮೆರಿಕದ ಕಾನೂನನ್ನೇ ಉಲ್ಲೇಖಿಸಿ, ಈ ಸಮನ್ಸ್‌ಗಳು ಅನುಮತಿಸಲಾದ ವರ್ಗಗಳಲ್ಲಿ ಬರುವುದಿಲ್ಲ ಎಂದಿದೆ. ಅಂದರೆ, ಇದು ಹೇಗ್ ಕನ್ವೆನ್ಷನ್ ಅಡಿಯಲ್ಲಿ ಸಹಾಯ ಮಾಡಬಹುದಾದ ರೀತಿಯ ದಾಖಲೆಯಲ್ಲ ಎಂದು ವಾದಿಸಿತ್ತು.

ಸಚಿವಾಲಯದ ವಾದಕ್ಕೆ ಹೇಗ್ ಕನ್ವೆನ್ಷನ್ ಅಡಿಯಲ್ಲಿ ಯಾವುದೇ ಆಧಾರವಿಲ್ಲ ಎಂದು ಎಸ್‌ಇಸಿ ಹೇಳಿತ್ತು. ಅಂದರೆ, ಅಂತಾರಾಷ್ಟ್ರೀಯ ಸಮನ್ಸ್ ನೀಡುವುದಕ್ಕೆ ಸಂಬಂಧಿಸಿದ ಹೇಗ್ ಕನ್ವೆನ್ಷನ್ ನಿಯಮಗಳು ಇಂತಹ ತಾಂತ್ರಿಕ ಅಗತ್ಯಗಳನ್ನು (ಇಂಕ್ ಸಹಿ ಅಥವಾ ಅಧಿಕೃತ ಸೀಲ್) ಕಡ್ಡಾಯಗೊಳಿಸುವುದಿಲ್ಲ ಎಂದಿತ್ತು. ಆದರೂ, ಭಾರತ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಲ್ಲ ಎನ್ನಲಾಗಿದೆ.

ಭಾರತ ಸರ್ಕಾರದ ಎರಡು ನಿರಾಕರಣೆಯ ಬಳಿಕ ಎಸ್‌ಇಸಿ ನ್ಯೂಯಾರ್ಕ್ ಕೋರ್ಟ್‌ಗೆ ಅರ್ಜಿ ಹಾಕಿ ಇಮೇಲ್ ಮೂಲಕ ಸಮನ್ಸ್ ತಲುಪಿಸಲು ಅನುಮತಿ ಕೇಳಿದೆ. ಈ ಸುದ್ದಿ ಹೊರಬಿದ್ದ ನಂತರ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿವೆ. ವಿವಿಧ ಕಂಪನಿಗಳ ಷೇರುಗಳು 3.3% ರಿಂದ 14.6% ವರೆಗೆ ಕುಸಿದಿವೆ. ಒಟ್ಟಾರೆಯಾಗಿ ಅದಾನಿ ಗ್ರೂಪ್ ಕಂಪನಿಗಳ ಮಾರ್ಕೆಟ್ ಕ್ಯಾಪ್ ಸುಮಾರು 12.5 ಬಿಲಿಯನ್ ಡಾಲರ್ (ಅಂದಾಜು 1 ಲಕ್ಷ ಕೋಟಿ ರೂ.) ಕಳೆದುಕೊಂಡಿದೆ. ಉದಾಹರಣೆಗೆ : ಅದಾನಿ ಎಂಟರ್‌ಪ್ರೈಸಸ್, ಅದಾನಿ ಎನರ್ಜಿ ಸೊಲ್ಯೂಷನ್ಸ್ ಮುಂತಾದವು ಹೆಚ್ಚು ಇಳಿಕೆ ಕಂಡಿವೆ (10-14% ವರೆಗೆ).

ಎಸ್‌ಇಸಿಯ ಆರೋಪಗಳನ್ನು ಅದಾನಿ ಗ್ರೂಪ್ ತಳ್ಳಿ ಹಾಕಿದೆ. ಅವುಗಳನ್ನು ಆಧಾರರಹಿತ ಎಂದು ಕರೆದಿದೆ. ಎಸ್‌ಇಸಿಯ ಆರೋಪಗಳನ್ನು ಎದುರಿಸಲು ಎಲ್ಲಾ ಸಾಧ್ಯವಾದ ಕಾನೂನು ಮಾರ್ಗಗಳನ್ನು ಬಳಸುವುದಾಗಿ ಹೇಳಿದೆ. ವಿಶೇಷವಾಗಿ ಅದಾನಿ ಗ್ರೀನ್ ಎನರ್ಜಿ ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ಗೆ ದಾಖಲೆ ಸಲ್ಲಿಸಿ, ಕಂಪನಿಯು ಈ ಎಸ್‌ಇಸಿ ಪ್ರಕರಣದ ಯಾವುದೇ ಪಕ್ಷವಲ್ಲ, ಇದು ಸಿವಿಲ್ ಪ್ರಕರಣ ಮಾತ್ರ, ಅಂದರೆ ಕ್ರಿಮಿನಲ್ ಅಲ್ಲ ಮತ್ತು ಆರೋಪಿಗಳ ವಿರುದ್ಧ ಲಂಚ ಅಥವಾ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ತಿಳಿಸಿದೆ.

ಈ ಸಮನ್ಸ್‌ಗಳು ಅದಾನಿ ಗ್ರೂಪ್ ವಿರುದ್ದದ ವಂಚನೆ ಮತ್ತು 265 ಮಿಲಿಯನ್ ಡಾಲರ್ (ಸುಮಾರು 2,200 ಕೋಟಿ ರೂ.) ಲಂಚದ ಪ್ರಕರಣಕ್ಕೆ ಸಂಬಂಧಿಸಿದೆ. ವಂಚನೆ ಮತ್ತು ಲಂಚದ ಆರೋಪಗಳನ್ನು ಮಾಡಿ ಎಸ್‌ಇಸಿಯು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಸಿವಿಲ್ ಕೇಸ್ ದಾಖಲಿಸಿದೆ. ಅಮೆರಿಕದ ಕಾನೂನಿನ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ವೈಯಕ್ತಿಕವಾಗಿ ಸಮನ್ಸ್ ತಲುಪಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...