ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಟೀಕಿಸಿದ ಬ್ರಿಟಿಷ್ ಸಂಸದೆಗೆ ಭಾರತಕ್ಕೆ ಪ್ರವೇಶ ನಿರಾಕರಿಸಲಾಗಿದೆ. “ದೆಹಲಿ ವಿಮಾನ ನಿಲ್ದಾಣದಲ್ಲಿ ಅವರ ಇ-ವೀಸಾವನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ ನಂತರ ತಾನು ವಾಪಾಸು ಹೋಗಲು ಕಾಯುತ್ತಿದ್ದೇನೆ.” ಅಲ್ಲದೇ “ನನ್ನನು ಅಪರಾಧಿಗಳ ತರ ನಡೆಸಿಕೊಳ್ಳಾಯಿತು” ಎಂದು ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯೆ ಡೆಬ್ಬಿ ಅಬ್ರಹಾಮ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಬೆಳಿಗ್ಗೆ 8.50 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಅಬ್ರಹಾಮ್ಸ್ ಗೆ ಕಳೆದ ಅಕ್ಟೋಬರ್‌ನಲ್ಲಿ ನೀಡಲಾಗಿದ್ದ 2020 ರ ಅಕ್ಟೋಬರ್ ವರೆಗೆ ಮಾನ್ಯವಾಗಿದ್ದ ಇ-ವೀಸಾವನ್ನು ತಿರಸ್ಕರಿಸಲಾಗಿದೆ ಎಂದಿದ್ದಾರೆ.
“ಎಲ್ಲರ ಜೊತೆಗೆ, ನಾನು ಕೂಡಾ ನನ್ನ ಇ-ವೀಸಾ ಸೇರಿದಂತೆ ನನ್ನ ದಾಖಲೆಗಳನ್ನು ಹಾಜರುಪಡಿಸಿದೆ, ನನ್ನ ಛಾಯಾಚಿತ್ರವನ್ನು ತೆಗೆದುಕೊಂಡ ನಂತರ ಅಧಿಕಾರಿಯು ಅವನ ಪರದೆಯನ್ನು ನೋಡಿ ತಲೆ ಅಲ್ಲಾಡಿಸಲು ಪ್ರಾರಂಭಿಸಿದನು. ನಂತರ ನನ್ನ ವೀಸಾವನ್ನು ತಿರಸ್ಕರಿಸಿದ್ದಾರೆಂದು ಹೇಳಿ ಪಾಸ್ಪೋರ್ಟ್ ಸಮೇತ ಸುಮಾರು 10 ನಿಮಿಷಗಳ ಕಾಲ ಕಣ್ಮರೆಯಾದನು. ಹಿಂತಿರುಗಿ ಬಂದು ‘ನನ್ನೊಂದಿಗೆ ಬನ್ನಿ’ ಎಂದು ತುಂಬಾ ಕೆಟ್ಟದಾಗಿ ಮತ್ತು ಅಸಭ್ಯವಾಗಿ ಎಂದು ಕೂಗಿಕೊಂಡನು” ಎಂದು ಸಂಸದೆ ಹೇಳಿಕೊಂಡಿದ್ದಾರೆ.
“ನನ್ನೊಂದಿಗೆ ಹಾಗೆ ಮಾತನಾಡಬಾರದೆಂದು ಅವನಿಗೆ ಹೇಳಿದೆ ಮತ್ತು ನಂತರ ನನ್ನನ್ನು ʼಡಿಪೋರ್ಟಿ ಸೆಲ್ʼ ಎಂದು ಗುರುತಿಸಲಾದಲ್ಲಿಗೆ ಕರೆದೊಯ್ದು, ನನ್ನನ್ನು ಕುಳಿತುಕೊಳ್ಳಲು ಆದೇಶಿಸಿದ ಆದರೆ ನಾನು ನಿರಾಕರಿಸಿದೆ. ಇವರು ಏನು ಮಾಡುತ್ತಾರೆ ಅಥವಾ ನನ್ನನ್ನು ಬೇರೆಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂದು ನನಗೆ ತಿಳಿದಿಲ್ಲ ಆದ್ದರಿಂದ ಇದನ್ನು ಜನರು ನೋಡಲಿ ಎಂದು ಬಯಸುತ್ತೇನೆ” ಎಂದಿದ್ದಾರೆ.
ಅಲ್ಲದೆ “ಭಾರತ ಸರ್ಕಾರ ತನ್ನ ಮನಸ್ಸು ಬದಲಿಸದೆ ಇರುವುದಾದರೆ ನಾನು ವಾಪಾಸು ಹೋಗುವ ದಾರಿ ಕಾಯುತ್ತಿದ್ದೇನೆ. ನನ್ನನ್ನು ಅಪರಾಧಿಗಳ ತರ ನಡೆಸಿಕೊಳ್ಳಲಾಗುತ್ತಿದೆ. ನಾನು ನನ್ನ ಕುಟುಂಬ ಮತ್ತು ಸ್ನೆಹಿತರನ್ನು ಸೇರಲು ಅವಕಾಶ ನೀಡುತ್ತಾರೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿಯನ್ನು ಕೊನೆಗೊಳಿಸಿದ ದಿನ ಟ್ವಿಟ್ಟರಿನಲ್ಲಿ ಅಬ್ರಹಾಮ್ಸ್ ಸ್ಪಷ್ಟವಾಗಿ ಬರೆದ ಪತ್ರವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ 370 ನೇ ವಿಧಿಯ ಕುರಿತು ಯುಕೆಯಲ್ಲಿರುವ ಭಾರತೀಯ ರಾಯಭಾರಿಗೆ ತೀವ್ರ ಕಳವಳ ವ್ಯಕ್ತಪಡಿಸಿ ಪತ್ರ ಬರೆದಿದ್ದರು.
ಅಲ್ಲದೇ ಅವರ ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಕಾಶ್ಮೀರದ ಬಗ್ಗೆ ಭಾರತದ ನಿರ್ಧಾರವನ್ನು ಟೀಕಿಸುವ ಹಲವಾರು ಪೋಸ್ಟ್‌ಗಳನ್ನು ಹೊಂದಿದೆ


